BBMP Recruitment 2021 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
BBMP Recruitment 2021 : Details of Vacancies
ಹುದ್ದೆ :
1) ಅರವಳಿಕೆ ತಜ್ಞರು – 04 ಹುದ್ದೆ
ಅರವಳಿಕೆಯಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ/ ಡಿಪ್ಲೋಮಾ/ ಡಿ.ಎನ್.ಬಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು
2) ಜನರಲ್ ಫಿಸಿಶಿಯನ್ – 03 ಹುದ್ದೆ
ಜನರಲ್ ಮೆಡಿಸಿನ್ನಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ/ ಡಿ.ಎನ್.ಬಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು
3) ಎಂಬಿಬಿಎಸ್ ಡಾಕ್ಟರ್ಸ್ – 20 ಹುದ್ದೆ
ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಎಂಬಿಬಿಎಸ್ ಪದವಿ ಪಡೆದಿರಬೇಕು
4) ಸ್ಟಾಫ್ ನರ್ಸ್ – 40 ಹುದ್ದೆ
ಬಿಎಸ್ಸಿ ನರ್ಸಿಂಗ್/ ಜಿ.ಎನ್.ಎಂ/ ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿರಬೇಕು
5) ಉಸಿರಾಟದ ಚಿಕಿತ್ಸಕ – 03 ಹುದ್ದೆ
ಉಸಿರಾಟ ಚಿಕಿತ್ಸೆಯಲ್ಲಿ ಬಿಎಸ್ಸಿ ಪದವಿ ಪಡೆದಿರಬೇಕು
6) ಡಾಟಾ ಎಂಟ್ರಿ ಆಪರೇಟರ್ – 03 ಹುದ್ದೆ
ದ್ವಿತೀಯ ಪಿಯುಸಿಯೊಂದಿಗೆ ಕಂಪ್ಯೂಟರ್ ಡಿಪ್ಲೊಮಾ ಪಡೆದಿರಬೇಕು.
7) ಲ್ಯಾಬ್ ಟೆಕ್ನೀಷಿಯನ್ – 03 ಹುದ್ದೆ
ಡಿ.ಎಂ.ಎಲ್.ಟಿ ಅರ್ಹತೆ ಹೊಂದಿರಬೇಕು.
8) ಫಾರ್ಮಾಸಿಸ್ಟ್ – 02 ಹುದ್ದೆ
ಕರ್ನಾಟಕ ಫಾರ್ಮಸಿ ಕೌನ್ಸಿಲ್ ನಿಂದ ಪಡೆದ ಡಿ ಫಾರ್ಮಾ/ ಬಿ ಫಾರ್ಮಾ/ ಎಂ ಫಾರ್ಮಾ ಅರ್ಹತೆ ಹೊಂದಿರಬೇಕು.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 78 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,000 ದಿಂದ ರೂ. 1,10,000 ವರೆಗೂ ವೇತನ ನೀಡಲಾಗುತ್ತದೆ
ಆಯ್ಕೆ ವಿಧಾನ : ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕ ಹುದ್ದೆಯಾಗಿದ್ದು, ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಉದ್ಯೋಗ ಮಾಹಿತಿ : KSP Scientific Officer Recruitment 2021
ಸಂದರ್ಶನ ಸ್ಥಳ : ದಾಸಪ್ಪ ಆಸ್ಪತ್ರೆ ಮೀಟಿಂಗ್ ಹಾಲ್, ಒಂದನೇ ಮಹಡಿ, ಟೌನ್ ಹಾಲ್ ಹತ್ತಿರ, ಬೆಂಗಳೂರು
ಸಂದರ್ಶನ ದಿನಾಂಕ :
ನೇರ ಸಂದರ್ಶನ ನಡೆಯುವ ದಿನಾಂಕ : ಜೂನ್ 05, 2021 ಬೆಳಿಗ್ಗೆ 10.00 ರಿಂದ ಸಂಜೆ 4.30 ಗಂಟೆ
BBMP Recruitment 2021 : Important Links
ಅಧಿಸೂಚನೆ : Click Here
ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ : 080-22975766
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.