DHFWS Vijayanagara Recruitment 2024 : ರಾಷ್ಟ್ರೀಯ ಆರೋಗ್ಯ ಅಭಿಯಾನದ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಡಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Vijayanagara Recruitment 2024 : Details of Vacancies
ಹುದ್ದೆ : ಸ್ತ್ರೀರೋಗ-ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ವೈದ್ಯಾಧಿಕಾರಿಗಳು, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು, ಆಡಿಯೊಮೆಟ್ರಿಕ್ ಸಹಾಯಕರು, ಶ್ರವಣದೋಷವುಳ್ಳ ಮಕ್ಕಳ ಬೋಧಕರು, ಶುಶ್ರೂಷಕಿಯರು, ಡಿ.ಇ.ಐ.ಸಿ ಮ್ಯಾನೇಜರ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಪಿ.ಹೆಚ್.ಸಿ.ಓ, ಆರೋಗ್ಯ ನೀರಿಕ್ಷಣಾಧಿಕಾರಿ, ಮನೋರೋಗ ತಜ್ಞರು
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ವಿಜಯನಗರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 53 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಸ್ತ್ರೀರೋಗ-ಪ್ರಸೂತಿ ತಜ್ಞರು | 3 | 1,30,000 |
ಮಕ್ಕಳ ತಜ್ಞರು | 4 | 1,30,000 |
ವೈದ್ಯಾಧಿಕಾರಿಗಳು | 26 | 46,895-50,000 |
ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು | 1 | 35,000 |
ಆಡಿಯೊಮೆಟ್ರಿಕ್ ಸಹಾಯಕರು | 1 | 15,000 |
ಶ್ರವಣದೋಷವುಳ್ಳ ಮಕ್ಕಳ ಬೋಧಕರು | 1 | 15,000 |
ಶುಶ್ರೂಷಕಿಯರು | 10 | 14,187 |
ಡಿ.ಇ.ಐ.ಸಿ ಮ್ಯಾನೇಜರ್ | 1 | 17,500 |
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | 2 | 15,397 |
ಪಿ.ಹೆಚ್.ಸಿ.ಓ | 1 | 14,044 |
ಆರೋಗ್ಯ ನೀರಿಕ್ಷಣಾಧಿಕಾರಿ | 1 | 15,397 |
ಮನೋರೋಗ ತಜ್ಞರು | 2 | 1,10,000 |
ಶೈಕ್ಷಣಿಕ ಅರ್ಹತೆ :
ಸ್ತ್ರೀರೋಗ-ಪ್ರಸೂತಿ ತಜ್ಞರು – ಡಿಜಿಓ/ ಡಿ.ಎನ್.ಬಿ/ ಎಂ.ಡಿ (ಓಬಿಜಿ).
ಮಕ್ಕಳ ತಜ್ಞರು – ಎಂ.ಬಿ.ಬಿ.ಎಸ್, ಎಂ.ಡಿ/ ಡಿ.ಸಿ.ಹೆಚ್.
ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್.
ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು – ಎಂ.ಕಾಂ ಪದವಿ.
ಆಡಿಯೊಮೆಟ್ರಿಕ್ ಸಹಾಯಕರು – ಒಂದು ವರ್ಷದ ಡಿಪ್ಲೊಮಾ ಇನ್ ಹಿಯರಿಂಗ್ ಲ್ಯಾಂಗ್ವೇಜ್ (ಡಿ.ಹೆಚ್.ಎಲ್.ಎಸ್).
ಶ್ರವಣದೋಷವುಳ್ಳ ಮಕ್ಕಳ ಬೋಧಕರು – ಯುವ ಕಿವುಡು ಮತ್ತು ಶ್ರವಣ ನ್ಯೂನತೆಯ ತರಬೇತಿಯಲ್ಲಿ ಡಿಪ್ಲೊಮಾ (ಡಿ.ಟಿ.ವೈ.ಡಿ.ಹೆಚ್.ಹೆಚ್)
ಶುಶ್ರೂಷಕಿಯರು – ಜಿ.ಎನ್.ಎಮ್ ಅಥವಾ ಬಿ.ಎಸ್.ಸಿ ನರ್ಸಿಂಗ್ ಪದವಿ.
ಡಿಇಐಸಿ ಮ್ಯಾನೇಜರ್ – ಸ್ನಾತಕೋತ್ತರ ಪದವಿ.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – ಹಿ.ಮ.ಆ.ಸ ತರಬೇತಿಯನ್ನು ಪಡೆದಿರಬೇಕು.
ಪಿ.ಹೆಚ್.ಸಿ.ಓ – ಹಿ.ಮ.ಆ.ಸ ತರಬೇತಿಯನ್ನು ಪಡೆದಿರಬೇಕು.
ಆರೋಗ್ಯ ನೀರಿಕ್ಷಣಾಧಿಕಾರಿ – ಎಸ್.ಎಸ್.ಎಲ್.ಸಿ / ಪಿಯುಸಿ (ವಿಜ್ಞಾನ) ತೇರ್ಗಡೆಯಾಗಿರಬೇಕು.
ಮನೋರೋಗ ತಜ್ಞರು – ಎಂ.ಬಿ.ಬಿ.ಎಸ್, ಎಂ.ಡಿ/ ಡಿ.ಪಿ.ಎಮ್.
ಉದ್ಯೋಗ ಮಾಹಿತಿ : ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 2024
ವಯೋಮಾನ :
ಹುದ್ದೆ | ವಯೋಮಾನ |
ಸ್ತ್ರೀರೋಗ-ಪ್ರಸೂತಿ ತಜ್ಞರು | ಗರಿಷ್ಠ 70 ವರ್ಷ |
ಮಕ್ಕಳ ತಜ್ಞರು | – |
ವೈದ್ಯಾಧಿಕಾರಿಗಳು | ಗರಿಷ್ಠ 70 ವರ್ಷ |
ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು | ಗರಿಷ್ಠ 45 ವರ್ಷ |
ಆಡಿಯೊಮೆಟ್ರಿಕ್ ಸಹಾಯಕರು | ಗರಿಷ್ಠ 45 ವರ್ಷ |
ಶ್ರವಣದೋಷವುಳ್ಳ ಮಕ್ಕಳ ಬೋಧಕರು | ಗರಿಷ್ಠ 45 ವರ್ಷ |
ಶುಶ್ರೂಷಕಿಯರು | ಗರಿಷ್ಠ 45 ವರ್ಷ |
ಡಿ.ಇ.ಐ.ಸಿ ಮ್ಯಾನೇಜರ್ | – |
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | ಗರಿಷ್ಠ 65 ವರ್ಷ |
ಪಿ.ಹೆಚ್.ಸಿ.ಓ | ಗರಿಷ್ಠ 40 ವರ್ಷ |
ಆರೋಗ್ಯ ನೀರಿಕ್ಷಣಾಧಿಕಾರಿ | ಗರಿಷ್ಠ 40 ವರ್ಷ |
ಮನೋರೋಗ ತಜ್ಞರು | – |
ಆಯ್ಕೆ ವಿಧಾನ : ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡ ಮತ್ತು ಕೋವಿಡ್-19 ಸೇವಾ ಅವಧಿಯ ಕೃಪಾಂಕವನ್ನು ಒಟ್ಟುಗೂಡಿಸಿ ಮೆರಿಟ್ ಲಿಸ್ಟ್ ತಯಾರಿಸಲಾಗುವುದು ಮತ್ತು ಹೊಸ ರೋಸ್ಟರ್ ಆಧಾರದ ಮೇಲೆ ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಅಭ್ಯರ್ಥಿಗಳು ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಪಡೆದುಕೊಳ್ಳಬೇಕು.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಖುದ್ದಾಗಿ ಹಾಜರಾಗಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ 60 ಹಾಸಿಗೆಯ ಎಮ್.ಸಿ.ಹೆಚ್ ಆಸ್ಪತ್ರೆ ಹಿಂಭಾಗ, ಮಸೀದಿ ಹತ್ತಿರ, ಹೊಸಪೇಟೆ.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 20, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 26, 2024
DHFWS Vijayanagara Recruitment 2024 : Important Links
NOTIFICATION | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.