Graduate Cooperative Society Shivamogga Recruitment 2021

Graduate Cooperative Society Shivamogga Recruitment 2021 : ಪದವೀಧರರ ಸಹಕಾರ ಸಂಘದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Graduate Cooperative Society Shivamogga Recruitment 2021 : Details of Vacancies

ಹುದ್ದೆ : ದ್ವಿತೀಯ ದರ್ಜೆ ಸಹಾಯಕರು, 4ನೇ ದರ್ಜೆ ನೌಕರರು

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 06 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆವೇತನ
ದ್ವಿತೀಯ ದರ್ಜೆ ಸಹಾಯಕರು04ರೂ. 21400-42000
4ನೇ ದರ್ಜೆ ನೌಕರರು02ರೂ‌. 17000-28950

ಶೈಕ್ಷಣಿಕ ಅರ್ಹತೆ :
• ದ್ವಿತೀಯ ದರ್ಜೆ ಸಹಾಯಕರು ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಪದವಿಯಲ್ಲಿ ಕನಿಷ್ಠ 55% ಅಂಕ ಪಡೆದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಬಿ.ಕಾಂ/ಬಿಬಿಎಂ/ಎಂಕಾಂ/ಬಿಬಿಎ/ಎಲ್.ಎಲ್.ಬಿ ಮತ್ತು ಸಹಕಾರ ವಿಷಯದಲ್ಲಿ ಪದವಿ ಅಧ್ಯಯನ ಮಾಡಿದವರಿಗೆ ಹಾಗೂ ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು
• 4ನೇ ದರ್ಜೆ ನೌಕರರು ಹುದ್ದೆಗೆ ಎಸ್.ಎಸ್.ಎಲ್.ಸಿಯಲ್ಲಿ ಕನಿಷ್ಠ 40% ಅಂಕ ಪಡೆದಿರಬೇಕು‌.

ವಯೋಮಾನ : ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಪ.ಜಾ/ಪ.ಪಂ/ಪ್ರ~1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಉದ್ಯೋಗ ಮಾಹಿತಿ : Karnataka Gramin Bank Recruitment 2021 : ಆರ್ಥಿಕ ಸಲಹೆಗಾರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪದವೀಧರರ ಸಹಕಾರ ಸಂಘದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಸಂಘದ ಕಚೇರಿಗೆ ಕೆಲಸದ ವೇಳೆಯಲ್ಲಿ ಹಾಜರಾಗಿ ಅರ್ಜಿ ನಮೂನೆಯನ್ನು ಪಡೆದು, ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ಕೊನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಅಥವಾ ಕಛೇರಿಗೆ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : ಪದವೀಧರರ ಸಹಕಾರ ಸಂಘ ನಿಯಮಿತ, ಕುವೆಂಪು ಮಾರ್ಗ, ಶಿವಮೊಗ್ಗ

ಅರ್ಜಿ ಶುಲ್ಕ : ಅಭ್ಯರ್ಥಿಗಳು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ರೂ. 2000 ಹಾಗೂ 4ನೇ ದರ್ಜೆ ನೌಕರರು ಹುದ್ದೆಗೆ ರೂ. 1000 ಶುಲ್ಕವನ್ನು ನಗದಾಗಿ ಪಾವತಿಸಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಏಪ್ರಿಲ್ 26, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 27, 2021 ಜೂನ್ 30, 2021

Graduate Cooperative Society Shivamogga Recruitment 2021 : Important Links

ಅಧಿಸೂಚನೆ : Click Here
ವೆಬ್‌ಸೈಟ್ : Click Here

ಹೆಚ್ಚಿನ ವಿವರಗಳಿಗೆ ಸಂಘದ ಕಚೇರಿಯಲ್ಲಿ ಕಾರ್ಯದರ್ಶಿಯವರನ್ನು ಸಂಪರ್ಕಿಸಿ. ದೂರವಾಣಿ 08182 224500, 08182 226887

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.