Gram Panchayat Recruitment 2021 – Gram Panchayat Secretary & Second Division Accounts Assistant Vacancy

Gram Panchayat Recruitment 2021 : ಕರ್ನಾಟಕದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಪರೀಕ್ಷಾ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Gram Panchayat Recruitment 2021 : Details of Vacancies

ಹುದ್ದೆ : ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-2) – 3827 ಹುದ್ದೆ
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಆಯ್ಕೆ ವಿಧಾನ :
• ಶೇಕಡಾ 30 ರಷ್ಟು ನೇರ ನೇಮಕಾತಿ ಕೋಟಾದ ಖಾಲಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.
• ಉಳಿದ ಶೇಕಡಾ 70 ರಷ್ಟು ಹುದ್ದೆಗಳನ್ನು 3:2 ಅನುಪಾತದಲ್ಲಿ, ಸತತವಾಗಿ 6 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸುತ್ತಿರುವ ಅದರಲ್ಲಿ ಮೊದಲನೇ ಮೂರು ಖಾಲಿ ಹುದ್ದೆಗಳನ್ನು ಬಿಲ್ ಕಲೆಕ್ಟರ್ ವೃಂದದ ನೌಕರರಿಂದ ಮತ್ತು ತದನಂತರದ ಎರಡು ಖಾಲಿ ಹುದ್ದೆಗಳನ್ನು ಅಕೌಂಟೆಂಟ್/ ಕ್ಲರ್ಕ್/ ಟೈಪಿಸ್ಟ್/ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದ ನೌಕರರಿಂದ ಆಯ್ಕೆ ಮಾಡಲಾಗುವುದು.

ಹುದ್ದೆ : ದ್ವಿತೀಯ ದರ್ಜೆ ಲೆಕ್ಕ ಸಹಾಯಕರು – 2579 ಹುದ್ದೆ
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ದ್ವಿತೀಯ ಪಿಯುಸಿ (ವಾಣಿಜ್ಯ) ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಆಯ್ಕೆ ವಿಧಾನ :
• ಶೇಕಡಾ 50 ರಷ್ಟು ನೇರ ನೇಮಕಾತಿ ಕೋಟಾದ ಖಾಲಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.
• ಉಳಿದ ಶೇಕಡಾ 50 ರಷ್ಟು ಹುದ್ದೆಗಳನ್ನು 1:1 ಅನುಪಾತದಲ್ಲಿ, ಸತತವಾಗಿ 6 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸುತ್ತಿರುವ ಅದರಲ್ಲಿ ಮೊದಲನೇ ಖಾಲಿ ಹುದ್ದೆಗಳನ್ನು ಬಿಲ್ ಕಲೆಕ್ಟರ್ ವೃಂದದ ನೌಕರರಿಂದ ಮತ್ತು ಎರಡನೇ ಖಾಲಿ ಹುದ್ದೆಗಳನ್ನು ಅಕೌಂಟೆಂಟ್/ ಕ್ಲರ್ಕ್/ ಟೈಪಿಸ್ಟ್/ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದ ನೌಕರರಿಂದ ಆಯ್ಕೆ ಮಾಡಲಾಗುವುದು.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 6406 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ.

ಉದ್ಯೋಗ ಮಾಹಿತಿ : ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ

ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,400 ರಿಂದ ರೂ. 42,000 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ಪರೀಕ್ಷಾ ವಿಧಾನ :

Gram Panchayat Recruitment 2021 – Gram Panchayat Secretary & Second Division Accounts Assistant Vacancy

ಸ್ಪರ್ಧಾತ್ಮಕ ಪರೀಕ್ಷೆಗೆ ಸಿಲೆಬಸ್ ಮಾಹಿತಿ :

Gram Panchayat Recruitment 2021 – Gram Panchayat Secretary & Second Division Accounts Assistant Vacancy

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ

Gram Panchayat Recruitment 2021 : Important Links

ಅಧಿಸೂಚನೆ : Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.