KMF MANMUL Recruitment 2022 – Apply Online for 187 Jr Technician, Assistant, Driver Post

KMF MANMUL Recruitment 2022 : ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KMF MANMUL Recruitment 2022 : Details of Vacancies

ಹುದ್ದೆ :
1) ಸಹಾಯಕ ವ್ಯವಸ್ಥಾಪಕರು (ಪ.ವೈ.ಸೇ/ಕೃ.ಗ) – 19 ಹುದ್ದೆ
ಮಾನ್ಯತೆ ಪಡೆದ ಪಶುವೈದ್ಯಕೀಯ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್ಸಿ ಮತ್ತು ಎ.ಹೆಚ್ ಪದವಿಯನ್ನು ಹೊಂದಿರಬೇಕು.

2) ಸಹಾಯಕ ವ್ಯವಸ್ಥಾಪಕರು (ಖರೀದಿ/ಉಗ್ರಾಣ) – 01 ಹುದ್ದೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯೊಂದಿಗೆ ಎಂ.ಬಿ.ಎ/ ಎಂ.ಕಾಂ ಪದವಿ ಉತ್ತೀರ್ಣತೆ ಜೊತೆಗೆ ಗಣಕಯಂತ್ರ ಜ್ಞಾನ ಹೊಂದಿರಬೇಕು. ಬೃಹತ್ ಉದ್ದಿಮೆಯ ಉಗ್ರಾಣ ವಿಭಾಗಗಳಲ್ಲಿ 3 ವರ್ಷಗಳ ಸೇವಾನುಭವ ಹೊಂದಿರಬೇಕು.

3) ಸಹಾಯಕ ವ್ಯವಸ್ಥಾಪಕರು (ಮೇವು & ಪ.ಆ) – 03 ಹುದ್ದೆ
ಕೃಷಿ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರಬೇಕು.

4) ಲೀಗಲ್ ಅಧಿಕಾರಿ – 01 ಹುದ್ದೆ
ಎಲ್.ಎಲ್.ಎಂ ವಿದ್ಯಾರ್ಹತೆಯನ್ನು ಸಿಬ್ಬಂದಿ ನಿರ್ವಹಣೆ ಮತ್ತು ಕಾರ್ಮಿಕ ಕಾನೂನು (ಹೆಚ್.ಆರ್) ವಿಷಯವನ್ನು ಐಚ್ಛಿಕವಾಗಿ ಪಡೆದು ಉತ್ತೀರ್ಣತೆ ಹೊಂದಿರಬೇಕು. ವೃತ್ತಿ ಅಭ್ಯಾಸ ನಿರತ ವಕೀಲರಾಗಿ 2 ವರ್ಷಗಳ ಅನುಭವ ಹೊಂದಿರಬೇಕು.

5) ತಾಂತ್ರಿಕ ಅಧಿಕಾರಿ (ಡಿ.ಟಿ) – 12 ಹುದ್ದೆ
ಬಿ.ಎಸ್ಸಿ (ಡಿ.ಟಿ)/ ಬಿ.ಟೆಕ್ (ಡಿ.ಟೆಕ್) ಪದವಿ ಅರ್ಹತೆ ಹೊಂದಿರಬೇಕು.

6) ಉಗ್ರಾಣಾಧಿಕಾರಿ/ ಐ.ಎಂ. ಅಧಿಕಾರಿ – 01 ಹುದ್ದೆ
ಎಂ.ಬಿ.ಎ ಪದವಿಯೊಂದಿಗೆ ಯಾವುದೇ ಉದ್ದಿಮೆಯಲ್ಲಿ 01 ವರ್ಷ ಸೇವಾನುಭವ ಹೊಂದಿರಬೇಕು.

7) ಡೇರಿ ಪರಿವೀಕ್ಷಕರು ದರ್ಜೆ 2 – ಸಿವಿಲ್ – 01 ಹುದ್ದೆ
ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

8) ಡೇರಿ ಪರಿವೀಕ್ಷಕರು ದರ್ಜೆ 2 – ಎಲೆಕ್ಟ್ರಾನಿಕ್ಸ್ & ಇನ್ಟ್ರುಮೆಂಟೇಷನ್ – 02 ಹುದ್ದೆ
ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ & ಇನ್ಟ್ರುಮೆಂಟೇಷನ್ ಇಂಜಿನಿಯರಿಂಗ್ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

9) ಡೇರಿ ಪರಿವೀಕ್ಷಕರು ದರ್ಜೆ 2 – ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ – 02 ಹುದ್ದೆ
ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

10) ವಿಸ್ತರಣಾಧಿಕಾರಿ ದರ್ಜೆ 3 – 22 ಹುದ್ದೆ
ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.

11) ವಿಸ್ತರಣಾಧಿಕಾರಿ ದರ್ಜೆ 3 (ಮಂಡ್ಯ ಹಾಲು ಒಕ್ಕೂಟದ ಎಂ.ಪಿ.ಸಿ.ಎಸ್ ಸಿಬ್ಬಂದಿಗಳಿಗೆ) – 3 ಹುದ್ದೆ
ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ಪದವಿಯೊಂದಿಗೆ ಕನಿಷ್ಠ 10 ವರ್ಷ ಸೇವಾನುಭವ ಹೊಂದಿ ಕಾರ್ಯನಿರ್ವಹಿಸುತ್ತಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.

12) ಆಡಳಿತ ಸಹಾಯಕ ದರ್ಜೆ 2 – 14 ಹುದ್ದೆ
ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

13) ಲೆಕ್ಕ ಸಹಾಯಕ ದರ್ಜೆ 2 – 08 ಹುದ್ದೆ
ಬಿ.ಕಾಂ/ ಬಿ.ಬಿ.ಎಂ ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.

14) ಕೆಮಿಸ್ಟ್ ದರ್ಜೆ 2 – 09 ಹುದ್ದೆ
ಬಿ.ಎಸ್ಸಿ (ಕೆಮೆಸ್ಟ್ರಿ)/ (ಮೈಕ್ರೋಬೈಯಾಲಾಜಿ)/ (ಫುಡ್ ಸೈನ್ಸ್) ಪದವಿಯನ್ನು ಹೊಂದಿರಬೇಕು.

15) ಜೂನಿಯರ್ ಸಿಸ್ಟಂ ಆಫರೇಟರ್ – 10 ಹುದ್ದೆ
ಬಿ.ಸಿ.ಎ/ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಪದವಿ ಅಥವಾ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

16) ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) – 04 ಹುದ್ದೆ
ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

17) ಆರೋಗ್ಯ ನಿರೀಕ್ಷಕರು – 01 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆಯೊಂದಿಗೆ ಕರ್ನಾಟಕ ಸರ್ಕಾರದ ಪ್ಯಾರ ಮೆಡಿಕಲ್ ಬೋರ್ಡ್ ರವರು ನಡೆಸಿರುವ 3 ವರ್ಷಗಳ ನೈರ್ಮಲ್ಯ ಆರೋಗ್ಯ ನಿರೀಕ್ಷಕರು/ ಆರೋಗ್ಯ ನಿರೀಕ್ಷಕರು ಡಿಪ್ಲೊಮಾದಲ್ಲಿ ತೇರ್ಗಡೆ ಹೊಂದಿರಬೇಕು.

18) ನರ್ಸ್ – 02 ಹುದ್ದೆ
ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ರವರಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು. ಯಾವುದೇ ಆಸ್ಪತ್ರೆ/ ಕ್ಲಿನಿಕ್ ಗಳಲ್ಲಿ ಸಿಬ್ಬಂದಿ ನರ್ಸ್ ಆಗಿ 1 ವರ್ಷ ಸೇವಾನುಭವ ಹೊಂದಿರಬೇಕು.

19) ಮಾರುಕಟ್ಟೆ ಸಹಾಯಕ ದರ್ಜೆ 3/ ಡಿಸಪ್ಯಾಚರ್ಸ್ – 10 ಹುದ್ದೆ
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು.

20) ಮಾರುಕಟ್ಟೆ ಸಹಾಯಕ ದರ್ಜೆ 3/ ಡಿಸಪ್ಯಾಚರ್ಸ್ (ಮಂಡ್ಯ ಹಾಲು ಒಕ್ಕೂಟದ ಎಂ.ಪಿ.ಸಿ.ಎಸ್ ಸಿಬ್ಬಂದಿಗಳಿಗೆ) – 04 ಹುದ್ದೆ
ದ್ವಿತೀಯ ಪಿಯುಸಿ ಜೊತೆಗೆ ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಠ 5 ವರ್ಷ ಸೇವಾನುಭವ ಹೊಂದಿ ಕಾರ್ಯನಿರ್ವಹಿಸುತ್ತಿರಬೇಕು. (ಪುರುಷ ಅಭ್ಯರ್ಥಿಗಳಿಗೆ ಮಾತ್ರ)

21) ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್) – 16 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಎಲೆಕ್ಟ್ರಿಕಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

22) ಜೂನಿಯರ್ ಟೆಕ್ನಿಷಿಯನ್ (ಎಂ.ಆರ್.ಎ.ಸಿ) – 06 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ಸಂಸ್ಥೆಯಿಂದ ಎಂ.ಆರ್.ಎ.ಸಿ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

23) ಜೂನಿಯರ್ ಟೆಕ್ನಿಷಿಯನ್ (ವೆಲ್ಡರ್) – 02 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ಸಂಸ್ಥೆಯಿಂದ ವೆಲ್ಡರ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

24) ಜೂನಿಯರ್ ಟೆಕ್ನಿಷಿಯನ್ (ಫಿಟ್ಟರ್) – 09 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ಸಂಸ್ಥೆಯಿಂದ ಫಿಟ್ಟರ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

25) ಜೂನಿಯರ್ ಟೆಕ್ನಿಷಿಯನ್ (ಬಾಯ್ಲರ್) – 06 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಪ್ರಥಮ ದರ್ಜೆ ಬಾಯ್ಲರ್ ನಿರ್ವಹಣಾ ಪ್ರಮಾಣ ಪತ್ರ ಹೊಂದಿರಬೇಕು.

26) ಜೂನಿಯರ್ ಟೆಕ್ನಿಷಿಯನ್ (ಇನ್ಟ್ರುಮೆಂಟ್ ಮೆಕಾನಿಕ್) – 05 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ಸಂಸ್ಥೆಯಿಂದ ಇನ್ಟ್ರುಮೆಂಟ್ ಮೆಕಾನಿಕ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

27) ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ ಮೆಕಾನಿಕ್) – 06 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ಸಂಸ್ಥೆಯಿಂದ ಎಲೆಕ್ಟ್ರಾನಿಕ್ ಮೆಕಾನಿಕ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

28) ಚಾಲಕರು – 06 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಲಘು ವಾಹನ ಚಾಲನೆ ಪರವಾನಗಿ ಹಾಗೂ ಬೃಹತ್ ಉದ್ದಿಮೆಯಲ್ಲಿ ಚಾಲಕರಾಗಿ 3 ವರ್ಷಗಳ ಸೇವಾನುಭವ ಹೊಂದಿರಬೇಕು.

29) ಕೃಷಿ ಸಹಾಯಕ – 01 ಹುದ್ದೆ
ಎಸ್.ಎಸ್.ಎಲ್.ಸಿ ಉತ್ತೀರ್ಣತೆಯೊಂದಿಗೆ ಕೃಷಿ ಡಿಪ್ಲೊಮಾ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

30) ತೋಟಗಾರಿಕೆ ಸಹಾಯಕ – 01 ಹುದ್ದೆ
ದ್ವಿತೀಯ ಪಿಯುಸಿ ಜೊತೆಗೆ ತೋಟಗಾರಿಕೆ ತರಬೇತಿ ಸರ್ಟಿಫಿಕೇಟ್ ಕೋರ್ಸ್/ ಜೆಓಸಿ ಯಲ್ಲಿ ತೋಟಗಾರಿಕೆ ವಿದ್ಯಾರ್ಹತೆ ಹೊಂದಿರಬೇಕು.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಮಂಡ್ಯ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 21,400 ರಿಂದ ರೂ. 97,100ವರೆಗೂ ವೇತನ ನೀಡಲಾಗುತ್ತದೆ.

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಾನ ನಿಗದಿಪಡಿಸಲಾಗಿದೆ ಹಾಗೂ
ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ

ಉದ್ಯೋಗ ಮಾಹಿತಿ : KPTCL ನೇಮಕಾತಿ 2022

ಆಯ್ಕೆ ವಿಧಾನ : ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ ನಂತರ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ (ಮೆರಿಟ್) 1:5ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.

ನಿಗದಿತ ಅರ್ಜಿ ಶುಲ್ಕದ ವಿವರ : ಎಸ್ಸಿ, ಎಸ್ಟಿ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳು ರೂ. 600 ಹಾಗೂ ಇತರೆ ವರ್ಗದ ಅಭ್ಯರ್ಥಿಗಳು ರೂ. 1200 ಪಾವತಿಸಬೇಕು.

ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಫೆಬ್ರವರಿ 01, 2022
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮಾರ್ಚ್ 02, 2022

KMF MANMUL Recruitment 2022 : Important Links

ಅಧಿಸೂಚನೆ – Notification
ಅರ್ಜಿ ಸಲ್ಲಿಸಿ – Apply Online

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published. Required fields are marked *