Peon Jobs in Karnataka 2021 : ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಖಾಲಿಯಿರುವ ಪಿಯೋನ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Peon Jobs in Karnataka 2021 : Details of Vacancies
ಹುದ್ದೆ :
ಪಿಯೋನ್ (ಜವಾನ)
ಕರ್ತವ್ಯ ಸ್ಥಳ :
ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಮಂಗಳೂರು, ಕೊಡಗು, ಉಡುಪಿ, ತುಮಕೂರು, ಚಿಕ್ಕಮಗಳೂರು, ಕೋಲಾರ ಜಿಲ್ಲೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 43 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವೃತ್ತ | ಹುದ್ದೆಗಳ ಸಂಖ್ಯೆ |
ಬೆಂಗಳೂರು ಪೂರ್ವ ವೃತ್ತ | 25 |
ಬೆಂಗಳೂರು ಪಶ್ಚಿಮ ವೃತ್ತ | 18 |
ಶೈಕ್ಷಣಿಕ ಅರ್ಹತೆ :
12ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಕನಿಷ್ಠ ಅಥವಾ ಗರಿಷ್ಠ ತೇರ್ಗಡೆ ಜೊತೆಗೆ ಆಂಗ್ಲ ಭಾಷೆಯನ್ನು ಓದುವ/ಬರೆಯುವ ಸಾಮಾನ್ಯ ಜ್ಞಾನ ಹೊಂದಿರಬೇಕು.
ವಯೋಮಾನ :
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ :
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ
ಆಯ್ಕೆ ವಿಧಾನ :
• ಹತ್ತನೇ ತರಗತಿಯಲ್ಲಿ ಪಡೆದಿರುವ ಶೇಕಡಾವಾರು ಅಂಕಗಳು (40% ಮಾನ್ಯತೆ)
• 12 ನೇ ತರಗತಿಯಲ್ಲಿ ಪಡೆದಿರುವ ಶೇಕಡಾವಾರು ಅಂಕಗಳು (60% ಮಾನ್ಯತೆ)
• ಶೇಕಡಾವಾರು ಅಂಕಗಳನ್ನು ಎರಡು ದಶಾಂಶದವರೆಗೆ ಲೆಕ್ಕ ಹಾಕಲಾಗುವುದು.
• ಹೆಚ್ಚಿನ ಶೇಕಡಾವಾರು ಅಂಕಗಳನ್ನು ಪಡೆದವರನ್ನು ಅರ್ಹತಾ ಪಟ್ಟಿಯಲ್ಲಿ ಕಡಿಮೆ ಶೇಕಡಾವಾರು ಅಂಕಗಳನ್ನು ಪಡೆದವರಿಗಿಂತ ಹೆಚ್ಚಿನ ಶ್ರೇಣಿಯಲ್ಲಿ ಪರಿಗಣಿಸಲಾಗುವುದು.
ಉದ್ಯೋಗ ಮಾಹಿತಿ : Yadgir Zilla Panchayat Recruitment 2021 : ಡಾಟಾ ಅನಾಲಿಸ್ಟ್ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನ
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಅಗತ್ಯವಿರುವ ಪಿಯೋನ್ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅರ್ಹ ಅಭ್ಯರ್ಥಿಗಳು ಅರ್ಜಿಯೊಂದಿಗೆ ಸ್ವ ವಿವರ, ಸ್ವಯಂ ದೃಢೀಕರಿಸಲಾದ ಇತ್ತೀಚಿನ ಭಾವಚಿತ್ರ, ವಯಸ್ಸಿಗೆ ಪೂರಕವಾದ ದಾಖಲೆಗಳ ನಕಲು, 10ನೇ ಮತ್ತು 12ನೇ ತರಗತಿಯ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯ ಅಂಕಪಟ್ಟಿಗಳು, ನಿವಾಸದ ಪುರಾವೆಗಾಗಿ ಕಾಯಂ ವಿಳಾಸವನ್ನು ದೃಢೀಕರಿಸುವ ದಾಖಲೆ ಅಥವಾ ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರದಿಂದ ನೊಂದಾಯಿಸಲಾದ ದಾಖಲೆ, ಕೆ.ವೈ.ಸಿ ದಾಖಲೆ ಈ ಎಲ್ಲಾ ದಾಖಲೆಗಳನ್ನು ಕಛೇರಿಯ ವಿಳಾಸಕ್ಕೆ ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ :
ಬೆಂಗಳೂರು ಪೂರ್ವ ವೃತ್ತ :
ಪಂಜಾಬ್ ನ್ಯಾಷನಲ್ ಬ್ಯಾಂಕ್, ಹೆಚ್.ಆರ್.ವಿಭಾಗ, ವೃತ್ತ ಕಛೇರಿ ~ ಬೆಂಗಳೂರು ಪೂರ್ವ, ರಹೆಜಾ ಟವರ್ಸ್, ಎಂ.ಜಿ.ರಸ್ತೆ, ಬೆಂಗಳೂರು
ಬೆಂಗಳೂರು ಪಶ್ಚಿಮ ವೃತ್ತ :
ಮುಖ್ಯ ವ್ಯವಸ್ಥಾಪಕರು, ಮಾನವ ಸಂಪನ್ಮೂಲ ವಿಭಾಗ, ಪಂಜಾಬ್ ನ್ಯಾಷನಲ್ ಬ್ಯಾಂಕ್, ವೃತ್ತ ಕಛೇರಿ ~ ಬೆಂಗಳೂರು ಪಶ್ಚಿಮ, ನಂ. 100 ಮಸೀದಿ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು
ನಿಗದಿತ ಅರ್ಜಿ ಶುಲ್ಕದ ವಿವರ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಫೆಬ್ರುವರಿ 05, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಪಶ್ಚಿಮ ವೃತ್ತ) : ಫೆಬ್ರುವರಿ 27, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಪೂರ್ವ ವೃತ್ತ) : ಮಾರ್ಚ್ 01, 2021
Peon Jobs in Karnataka 2021 : Important Links
ಅಧಿಸೂಚನೆ (ಬೆಂಗಳೂರು ಪೂರ್ವ ವೃತ್ತ) : Click Here
ಅಧಿಸೂಚನೆ (ಬೆಂಗಳೂರು ಪಶ್ಚಿಮ ವೃತ್ತ) : Click Here
ಕೊನೆಯ ಪದಗಳು :
ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.