Safe Star Souharda Sahakari Niyamit Recruitment 2021

Safe Star Souharda Sahakari Niyamit Recruitment 2021 : ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತದ ವಿವಿಧ ಶಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Safe Star Souharda Sahakari Niyamit Recruitment 2021 : Details of Vacancies

ಹುದ್ದೆ : ಬ್ರ್ಯಾಂಚ್ ಮ್ಯಾನೇಜರ್, ಫೀಲ್ಡ್ ಆಫೀಸರ್, ಕೋ-ಆರ್ಡಿನೇಟರ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಗೋಕರ್ಣ, ಅಂಕೋಲಾ, ಕಾರವಾರ, ಯಲ್ಲಾಪುರ, ಸಿದ್ದಾಪುರ, ಶಿರಾಲಿ, ಮಂಕಿ ಹಾಗೂ ಬೈಂದೂರು ಶಾಖೆಗಳಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 19 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆವೇತನ
ಬ್ರ್ಯಾಂಚ್ ಮ್ಯಾನೇಜರ್413340-20665
ಫೀಲ್ಡ್ ಆಫೀಸರ್510540-16345
ಕೋ-ಆರ್ಡಿನೇಟರ್108000-12395

ಶೈಕ್ಷಣಿಕ ಅರ್ಹತೆ :
ಬ್ರ್ಯಾಂಚ್ ಮ್ಯಾನೇಜರ್ ಹುದ್ದೆಗೆ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸಹಕಾರಿ ಕ್ಷೇತ್ರದಲ್ಲಿ ವ್ಯವಸ್ಥಾಪಕರಾಗಿ 3 ವರ್ಷ ಅಥವಾ ಸಹಕಾರಿ/ಹಣಕಾಸು ಸಂಸ್ಥೆಯಲ್ಲಿ 5 ವರ್ಷ ಅನುಭವ ಇರಬೇಕು.
ಫೀಲ್ಡ್ ಆಫೀಸರ್ ಹುದ್ದೆಗೆ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಹಣಕಾಸು ಸಂಸ್ಥೆ/ ಮೈಕ್ರೋ ಫೈನಾನ್ಸ್/ ಎನ್.ಜಿ.ಓ ಗಳಲ್ಲಿ 3 ರಿಂದ 5 ವರ್ಷ ಸ್ವ-ಸಹಾಯ ಸಂಘಗಳ ನಿರ್ವಹಣೆಯ ಅನುಭವ ಇರಬೇಕು.
ಕೋ-ಆರ್ಡಿನೇಟರ್ ಹುದ್ದೆಗೆ ಪಿ.ಯು.ಸಿ ಶೈಕ್ಷಣಿಕ ಅರ್ಹತೆ ಜೊತೆಗೆ ಮೈಕ್ರೋ ಫೈನಾನ್ಸ್/ ಎನ್.ಜಿ.ಓ ಗಳಲ್ಲಿ 3 ವರ್ಷ ಸ್ವ-ಸಹಾಯ ಸಂಘಗಳ ನಿರ್ವಹಣೆಯ ಅನುಭವ ಇರಬೇಕು.

ಉದ್ಯೋಗ ಮಾಹಿತಿ : ವಿಜಯಪುರ ಜಿಲ್ಲಾ ಪಂಚಾಯತ್ ನೇಮಕಾತಿ

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕಛೇರಿಗೆ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.
• ಅರ್ಹ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರ ಲಗತ್ತಿಸಿದ ಸ್ವ~ಹಸ್ತಾಕ್ಷರದಿಂದ ಬರೆದ ಅರ್ಜಿಯೊಂದಿಗೆ ಆಯಾ ಹುದ್ದೆಗಳಿಗೆ ಕೇಳಲಾದ ಅರ್ಹತಾ ಪತ್ರಗಳ ನಕಲು ಪ್ರತಿಗಳೊಂದಿಗೆ ಕಛೇರಿಯ ವಿಳಾಸಕ್ಕೆ ಸಲ್ಲಿಸಬೇಕು

ಅರ್ಜಿ ಸಲ್ಲಿಸುವ ವಿಳಾಸ : ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ,
ಪ್ರಧಾನ ಕಛೇರಿ : ಮಹಾಲೆ ಕಾಂಪ್ಲೆಕ್ಸ್, 2ನೇ ಮಹಡಿ, ಹೊನ್ನಾವರ – 581334

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಆಗಸ್ಟ್ 17, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 27, 2021

Safe Star Souharda Sahakari Niyamit Recruitment 2021 : Important Links

ಅಧಿಸೂಚನೆ : Click Here

ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ : 9448404379, 9538222549

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.