ವಾಕರಸಾ ಸಂಸ್ಥೆ (ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ನೌಕರರ ಸಹಕಾರಿ ಪತ್ತಿನ ಸಂಘದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
ವಾಕರಸಾ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದಲ್ಲಿ ನೇಮಕಾತಿ : ಹುದ್ದೆಗಳ ವಿವರ
ಹುದ್ದೆ : ಗುಮಾಸ್ತರು, ಜವಾನ
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 04 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಗುಮಾಸ್ತರು | 03 | 14,000 |
ಜವಾನ | 01 | 10,000 |
ಶೈಕ್ಷಣಿಕ ಅರ್ಹತೆ :
• ಗುಮಾಸ್ತ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿಯಲ್ಲಿ ಕನಿಷ್ಠ ಶೇಕಡಾ 65 ರಷ್ಟು ಗುಣಾಂಕ ಪಡೆದ ಪದವೀಧರರು ಅರ್ಜಿ ಸಲ್ಲಿಸಬಹುದು.
• ಜವಾನ ಹುದ್ದೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಕನಿಷ್ಠ ಶೇಕಡಾ 50 ರಷ್ಟು ಗುಣಾಂಕ ಪಡೆದವರು ಅರ್ಜಿ ಸಲ್ಲಿಸಬಹುದು
ವಯೋಮಾನ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮೀರಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಪ.ಜಾ/ಪ.ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.
ಆಯ್ಕೆ ವಿಧಾನ : ಗುಮಾಸ್ತ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸಿ, ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಜವಾನ ಹುದ್ದೆಯ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುವುದಿಲ್ಲ.
ಉದ್ಯೋಗ ಮಾಹಿತಿ : ಬೆಂಗಳೂರು ನಗರ ಜಿಲ್ಲಾ ಪಂಚಾಯತ ನೇಮಕಾತಿ
ಅರ್ಜಿ ನಮೂನೆ ಪಡೆಯುವ ವಿಧಾನ : ಅಭ್ಯರ್ಥಿಗಳು ದಿನಾಂಕ 23/06/2021ರ ಒಳಗಾಗಿ ಸಂಘದ ಮುಖ್ಯ ಕಛೇರಿ, ವಾ.ಕ.ರ.ಸಾ.ಸಂಸ್ಥೆ ವಿಭಾಗಿಯ ಕಚೇರಿ ಹತ್ತಿರ, ಹುಬ್ಬಳ್ಳಿ ರಸ್ತೆ, ಶಿರಸಿಯ ಕಛೇರಿಗೆ ಹಾಜರಾಗಿ ರೂ. 500 ಪಾವತಿಸಿ ಅರ್ಜಿ ನಮೂನೆಯನ್ನು ಪಡೆಯಬಹುದು.
ವಾಕರಸಾ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕಛೇರಿಗೆ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ತಮ್ಮ ಸ್ವ-ಹಸ್ತಾಕ್ಷರದಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ವಿದ್ಯಾರ್ಹತೆ, ಅನುಭವ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಶುಲ್ಕದ ಡಿಡಿ ಜೊತೆಗೆ ದಿನಾಂಕ 08/07/2021ರ ಒಳಗಾಗಿ ಕಛೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಅಧ್ಯಕ್ಷರು, ವಾ.ಕ.ರ.ಸಾ. ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘ ನಿ.,
ಶಿರಸಿ 581402 ಉತ್ತರ ಕನ್ನಡ ಜಿಲ್ಲೆ
ಅರ್ಜಿ ಶುಲ್ಕ : ಗುಮಾಸ್ತ ಹುದ್ದೆಗೆ ಪ.ಜಾತಿ/ಪ.ಪಂಗಡದವರು ರೂ. 1000 ಹಾಗೂ ಸಾಮಾನ್ಯ ವರ್ಗದವರು ರೂ. 2000 ಮತ್ತು ಜವಾನ ಹುದ್ದೆಗೆ ರೂ.1000 ಡಿಡಿಯನ್ನು ಅಧ್ಯಕ್ಷರು, ವಾ.ಕ.ರ.ಸಾ. ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘ ನಿ. ಶಿರಸಿ ಇವರ ಹೆಸರಿಗೆ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 12, 2021
ಅರ್ಜಿ ನಮೂನೆ ಪಡೆಯುವ ಕೊನೆಯ ದಿನಾಂಕ : ಜೂನ್ 23, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 08, 2021
ವಾಕರಸಾ ಸಂಸ್ಥೆ ನೌಕರರ ಸಹಕಾರಿ ಪತ್ತಿನ ಸಂಘದಲ್ಲಿ ನೇಮಕಾತಿ : ಪ್ರಮುಖ ಲಿಂಕ್ಗಳು
ಅಧಿಸೂಚನೆ : Click Here
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.