
Karnataka Sericulture Department Recruitment 2025 : ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟವಾಗಿದೆ. ಈ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Karnataka Sericulture Department Recruitment 2025 : Details of Vacancies
ಹುದ್ದೆ : ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು, ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ವಿಸ್ತರಣಾಧಿಕಾರಿ, ರೇಷ್ಮೆ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು, ರೇಷ್ಮೆ ಪ್ರದರ್ಶಕರು, ದ್ವಿತೀಯ ದರ್ಜೆ ಸಹಾಯಕರು, ರೇಷ್ಮೆ ಪ್ರವರ್ತಕರು, ವಾಹನ ಚಾಲಕರು, ಅಟೆಂಡರ್, ಗ್ರೂಪ್-ಡಿ (ಜವಾನ).
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 2492ಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ.
ಹುದ್ದೆ | ಹುದ್ದೆಗಳ ಸಂಖ್ಯೆ |
ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು | 3 |
ರೇಷ್ಮೆ ಸಹಾಯಕ ನಿರ್ದೇಶಕರು | 154 |
ರೇಷ್ಮೆ ವಿಸ್ತರಣಾಧಿಕಾರಿ | 184 |
ರೇಷ್ಮೆ ನಿರೀಕ್ಷಕರು | 538 |
ಪ್ರಥಮ ದರ್ಜೆ ಸಹಾಯಕರು | 190 |
ಶೀಘ್ರಲಿಪಿಗಾರರು | 10 |
ರೇಷ್ಮೆ ಪ್ರದರ್ಶಕರು | 642 |
ದ್ವಿತೀಯ ದರ್ಜೆ ಸಹಾಯಕರು | 72 |
ರೇಷ್ಮೆ ಪ್ರವರ್ತಕರು | 240 |
ವಾಹನ ಚಾಲಕರು | 84 |
ಅಟೆಂಡರ್ | 25 |
ಗ್ರೂಪ್-ಡಿ (ಜವಾನ) | 350 |
ಅರ್ಹತೆ :
• ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು – ಕಡ್ಡಾಯವಾಗಿ ಸಿವಿಲ್ ಅಭಿಯಂತರರ ಪದವಿ ಹೊಂದಿರಬೇಕು.
• ರೇಷ್ಮೆ ಸಹಾಯಕ ನಿರ್ದೇಶಕರು – ಎಂ.ಎಸ್ಸಿ (ರೇಷ್ಮೆ/ ಎಂ.ಎಸ್ಸಿ (ಕೃಷಿ) ರೇಷ್ಮೆ ಅಥವಾ ಎಂ.ಎಸ್ಸಿ (ರೇಷ್ಮೆ ಒಂದು ವಿಷಯವನ್ನು ಒಳಗೊಂಡಂತೆ) ಅಥವಾ ಎಂ.ಎಸ್ಸಿ ರೇಷ್ಮೆ ಮತ್ತು ರೇಷ್ಮೆ ಜೈವಿಕ ತಂತ್ರಜ್ಞಾನ ಅಥವಾ ಎಂ.ಎಸ್ಸಿ (ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಜೈವಿಕ ತಂತ್ರಜ್ಞಾನ) ಅಥವಾ ಎಂ.ಎಸ್ಸಿ(ಲೈಫ್ ಸೈನ್ಸ್).
• ರೇಷ್ಮೆ ವಿಸ್ತರಣಾಧಿಕಾರಿ – ಬಿ.ಎಸ್ಸಿ (ರೇಷ್ಮೆ)/ ಬಿ.ಎಸ್ಸಿ (ಆನರ್ಸ) ರೇಷ್ಮೆ ಅಥವಾ ಬಿ.ಎಸ್ಸಿ ರೇಷ್ಮೆ ಮತ್ತು ಜೈವಿಕ ತಂತ್ರಜ್ಞಾನ ಅಥವಾ ವಿಜ್ಞಾನ ಪದವಿ ಜೊತೆಗೆ ರೇಷ್ಮೆ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ರೇಷ್ಮೆ ಕೃಷಿ ಮುಖ್ಯ ವಿಷಯವನ್ನಾಗಿ ಹೊಂದಿರುವ ವಿಜ್ಞಾನದ ಪದವಿ.
• ರೇಷ್ಮೆ ನಿರೀಕ್ಷಕರು – ರೇಷ್ಮೆ ಕೃಷಿ ಪದವಿ ಅಥವಾ ವಿಜ್ಞಾನ ಪದವಿ ಜೊತೆಗೆ ರೇಷ್ಮೆ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಲೈಫ್ ಸೈನ್ಸ್ ವಿಜ್ಞಾನದ ಪದವಿ.
ಪ್ರಥಮ ದರ್ಜೆ ಸಹಾಯಕರು – ಪದವಿ ಅಥವಾ ತತ್ಸಮಾನ ಅರ್ಹತೆ.
• ರೇಷ್ಮೆ ಪ್ರದರ್ಶಕರು & ರೇಷ್ಮೆ ಪ್ರವರ್ತಕರು – ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ ಪರೀಕ್ಷೆಯಲ್ಲಿ, ಜೀವಶಾಸ್ತ್ರ ಅಥವಾ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ಅಥವಾ ರೇಷ್ಮೆ ವಿಷಯಗಳಲ್ಲಿ ಒಂದು ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.
• ದ್ವಿತೀಯ ದರ್ಜೆ ಸಹಾಯಕರು – ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣ.
• ವಾಹನ ಚಾಲಕರು – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಅರ್ಹತೆ. ಪ್ರಸ್ತುತ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
• ಅಟೆಂಡರ್ & ಗ್ರೂಪ್-ಡಿ (ಜವಾನ) – ಕನ್ನಡವನ್ನು ಒಂದು ವಿಷಯವಾಗಿಟ್ಟುಕೊಂಡು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆಯಲ್ಲಿ ಬೃಹತ್ ನೇಮಕಾತಿ 2025
ವೇತನ :
ಹುದ್ದೆ | ವೇತನ |
ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು | 69250-134200 |
ರೇಷ್ಮೆ ಸಹಾಯಕ ನಿರ್ದೇಶಕರು | 69250-134200 |
ರೇಷ್ಮೆ ವಿಸ್ತರಣಾಧಿಕಾರಿ | 65950-124900 |
ರೇಷ್ಮೆ ನಿರೀಕ್ಷಕರು | 44425-83700 |
ಪ್ರಥಮ ದರ್ಜೆ ಸಹಾಯಕರು | 44425-83700 |
ಶೀಘ್ರಲಿಪಿಗಾರರು | 44425-83700 |
ರೇಷ್ಮೆ ಪ್ರದರ್ಶಕರು | 37500-76100 |
ದ್ವಿತೀಯ ದರ್ಜೆ ಸಹಾಯಕರು | 34100-67600 |
ರೇಷ್ಮೆ ಪ್ರವರ್ತಕರು | 34100-67600 |
ವಾಹನ ಚಾಲಕರು | 34100-67600 |
ಅಟೆಂಡರ್ | 31775-61300 |
ಗ್ರೂಪ್-ಡಿ (ಜವಾನ) | 27000-46675 |
ಆಯ್ಕೆ ವಿಧಾನ : ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಮುಂಬಡ್ತಿಯ ಮೂಲಕ ಭರ್ತಿ ಮಾಡಲಾಗುವುದು.
ಇತರೆ ಮಾಹಿತಿ :
ಅಧಿಸೂಚನೆ ಪ್ರಕಟವಾದ ದಿನಾಂಕ : ಜೂನ್ 17, 2025
ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ
Karnataka Sericulture Department Recruitment 2025 : Important Links
NOTIFICATION | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.