
DULT Karnataka Recruitment 2026 : ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಸಲುವಾಗಿ ನಗರ ಮೊಬಿಲಿಟಿ ಯೋಜನೆ, ವಿನ್ಯಾಸ ಮತ್ತು ಕ್ರಿಯಾ ಸಂಶೋಧನಾ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಅಸೋಸಿಯೇಟ್ ಸಾರಿಗೆ ಯೋಜಕರು ಮತ್ತು ಕ್ಯಾಡ್ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DULT Karnataka Recruitment 2026 : Details of Vacancies
ಹುದ್ದೆ :
ಅಸೋಸಿಯೇಟ್ ಸಾರಿಗೆ ಯೋಜಕರು, ಕ್ಯಾಡ್ ಆಪರೇಟರ್.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಲಬುರಗಿ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 03 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ಅಸೋಸಿಯೇಟ್ ಸಾರಿಗೆ ಯೋಜಕರು | 2 |
| ಕ್ಯಾಡ್ ಆಪರೇಟರ್ | 1 |
ಶೈಕ್ಷಣಿಕ ಅರ್ಹತೆ :
ಅಸೋಸಿಯೇಟ್ ಸಾರಿಗೆ ಯೋಜಕರು –
ಸ್ನಾತಕೋತ್ತರ ಪದವಿ ಅಥವಾ ಸಾರಿಗೆ ಯೋಜನೆ/ ಇಂಜಿನಿಯರಿಂಗ್ ದೊಂದಿಗೆ ಅಥವಾ ತತ್ಸಮಾನ ಪದವಿ ಹೊಂದಿರತಕ್ಕದ್ದು.
ಕ್ಯಾಡ್ ಆಪರೇಟರ್ –
ಸಿವಿಲ್ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮೊದಲ್ಲಿ ಪದವಿ ಹೊಂದಿರತಕ್ಕದ್ದು.
ಉದ್ಯೋಗ ಮಾಹಿತಿ : ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2026
ವೇತನ :
| ಹುದ್ದೆ | ವೇತನ |
| ಅಸೋಸಿಯೇಟ್ ಸಾರಿಗೆ ಯೋಜಕರು | ರೂ. 61,000 – ರೂ. 84,592 |
| ಕ್ಯಾಡ್ ಆಪರೇಟರ್ | ರೂ. 50,000 – 73,216 |
ಅನುಭವ :
ಅಸೋಸಿಯೇಟ್ ಸಾರಿಗೆ ಯೋಜಕರು –
ಯೋಜನೆ/ ವಿನ್ಯಾಸ/ ಅನುಷ್ಠಾನ/ ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಸಂಶೋಧನೆಯ ಪೂರ್ಣಾವಧಿಯ ಕಾರ್ಯಗಳಲ್ಲಿ 3-6 ವರ್ಷಗಳ ಅನುಭವ ಹೊಂದಿರಬೇಕು.
ಕ್ಯಾಡ್ ಆಪರೇಟರ್ –
ನಗರ ರಸ್ತೆ/ ಭೂ ಸಾರಿಗೆ ಯೋಜನೆಗಳಂತಹ ಪ್ರಮುಖ ನಗರ ಮೂಲಸೌಕರ್ಯಗಳಿಗೆ CAD ರೇಖಾಚಿತ್ರಗಳನ್ನು ತಯಾರಿಸುವಲ್ಲಿ 3 ರಿಂದ 6 ವರ್ಷಗಳ ವೃತ್ತಿಪರ ಅನುಭವ ಹೊಂದಿರತಕ್ಕದ್ದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಇಮೇಲ್ ಐಡಿ ಬಳಸಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 02, 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 15, 2026
DULT Karnataka Recruitment 2026 : Important Links
| NOTIFICATION | CLICK HERE |
| APPLY ONLINE (ASSOCIATE TRANSPORT PLANNER) | CLICK HERE |
| APPLY ONLINE (CAD OPERATOR) | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.