
Tumkur Home Guards Recruitment 2026 : ತುಮಕೂರು ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಾ ಗೃಹರಕ್ಷಕ/ ಗೃಹರಕ್ಷಕಿಯರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Tumkur Home Guards Recruitment 2026 : Details of Vacancies
ಹುದ್ದೆ :
ಗೃಹರಕ್ಷಕ/ ಗೃಹರಕ್ಷಕಿಯರು
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತುಮಕೂರು ಜಿಲ್ಲೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 234 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಘಟಕದ ಹೆಸರು | ಪುರುಷ ಗೃಹರಕ್ಷಕರ ಸಂಖ್ಯೆ | ಮಹಿಳಾ ಗೃಹರಕ್ಷಕಿಯರ ಸಂಖ್ಯೆ |
| ತುಮಕೂರು | 20 | 07 |
| ಕ್ಯಾತಸಂದ್ರ | 08 | 02 |
| ಊರ್ಡಿಗೆರೆ | 11 | 03 |
| ಕುಣಿಗಲ್ | 12 | 05 |
| ತುರುವೇಕೆರೆ | 05 | 08 |
| ಅಮೃತೂರು | 06 | 04 |
| ಮಧುಗಿರಿ | 05 | 02 |
| ಕೊರಟಗೆರೆ | 09 | – |
| ಮಿಡಿಗೇಶಿ | 12 | – |
| ಪಾವಗಡ | 14 | 04 |
| ವೈ. ಎನ್ ಹೊಸಕೋಟೆ | 04 | – |
| ಶಿರಾ | 09 | 03 |
| ಗುಬ್ಬಿ | 08 | 04 |
| ಕಳ್ಳಂಬೆಳ್ಳ | 07 | – |
| ತಾವರೆಕೆರೆ | 15 | – |
| ತಿಪಟೂರು | 05 | 07 |
| ಚಿಕ್ಕನಾಯಕನಹಳ್ಳಿ | 10 | – |
| ನೊಣ್ಣವಿನಕೆರೆ | 09 | 05 |
| ಹೊನ್ನವಳ್ಳಿ | 11 | – |
ಶೈಕ್ಷಣಿಕ ಅರ್ಹತೆ :
10ನೇ ತರಗತಿ ಉತ್ತೀರ್ಣರಾಗಿರಬೇಕು.
ಉದ್ಯೋಗ ಮಾಹಿತಿ : ಎಸ್ಬಿಐ ಪ್ರೊಬೇಷನರಿ ಆಫೀಸರ್ ನೇಮಕಾತಿ 2026
ವಯೋಮಾನ :
ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
• ಕನಿಷ್ಠ 19 ವರ್ಷ
• ಗರಿಷ್ಠ 50 ವರ್ಷ
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಅಭ್ಯರ್ಥಿಗಳು ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಪಡೆದುಕೊಳ್ಳಬೇಕು.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಖುದ್ದಾಗಿ ಹಾಜರಾಗಿ ಸಲ್ಲಿಸಬಹುದಾಗಿದೆ.
ಅರ್ಜಿ ವಿತರಿಸುವ & ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ ಗೃಹರಕ್ಷಕದಳದ ಕಛೇರಿ, ಬಟವಾಡಿ ತುಮಕೂರು (ಅಗ್ನಿಶಾಮಕ ಠಾಣೆ ಹತ್ತಿರ)
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದೃಢೀಕೃತ ದಾಖಲೆಗಳು :
- 10ನೇ ತರಗತಿ ಉತ್ತೀರ್ಣ ಅಥವಾ ಮೇಲ್ಪಟ್ಟು (ಅಂಕಪಟ್ಟಿ)
- ಜನ್ಮ ದಿನಾಂಕ ದೃಢೀಕರಣ (ಎಸ್. ಎಸ್. ಎಲ್. ಟಿ.ಸಿ.)
- ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
- ವೋಟರ್ ಐ.ಡಿ.
- ರೇಷನ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ 2
- ಪೋಸ್ಟ್ ಕಾರ್ಡ್ ನಲ್ಲಿ ಪೊಸ್ಟಲ್ ಪಿನ್ ಕೋಡ್ ನೊಂದಿಗೆ ಸ್ಪಷ್ಟ ವಿಳಾಸವನ್ನು ನಮೂದಿಸಿ ಸಲ್ಲಿಸುವುದು.
- ದೈಹಿಕ ಸದೃಢತಾ ಪ್ರಮಾಣ ಪತ್ರ.
- ಎಸ್.ಬಿ.ಐ ಬ್ಯಾಂಕ್ ಉಳಿತಾಯ ಖಾತೆಯ ನಕಲು ಪ್ರತಿ.
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
• ಕಚೇರಿಯಿಂದ ಅರ್ಜಿ ಪಡೆಯಲು ಪ್ರಾರಂಭದ ದಿನಾಂಕ : ಜೂನ್ 18, 2026
• ಕಚೇರಿಯಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ : ಜೂನ್ 25, 2026
• ಭರ್ತಿ ಮಾಡಿದ ಅರ್ಜಿ ಕಚೇರಿಗೆ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 30, 2026
Tumkur Home Guards Recruitment 2026 : Important Links
| NOTIFICATION | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.