ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2026 – KSP Armed Police Constable Recruitment 2026

KSP Armed Police Constable Recruitment 2026

KSP Armed Police Constable Recruitment 2026 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ (ಸಿಎಆರ್/ಡಿಎಆರ್) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಆಯ್ಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KSP Armed Police Constable Recruitment 2026 : Details of Vacancies

ಹುದ್ದೆ :

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ (ಸಿಎಆರ್/ ಡಿಎಆರ್)

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 1600 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವೃಂದಹುದ್ದೆಗಳ ಸಂಖ್ಯೆ
ಮಿಕ್ಕುಳಿದ ವೃಂದ 1421
ಕಲ್ಯಾಣ ಕರ್ನಾಟಕ ವೃಂದ 179

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಉದ್ಯೋಗ ಮಾಹಿತಿ : ಗ್ರಾಮ ಪಂಚಾಯಿತಿಯಲ್ಲಿ ಮೇಲ್ವಿಚಾರಕ ಹುದ್ದೆಗಳ ನೇಮಕಾತಿ 2026

ವಯೋಮಿತಿ :

  • ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು.
  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – ಗರಿಷ್ಠ 33 ವರ್ಷ
  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ -1 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
  • ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ

ವೇತನ :

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 37,500 ರಿಂದ ರೂ. 76,100 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ :

  • ಲಿಖಿತ ಪರೀಕ್ಷೆ (ಆಫ್‌ಲೈನ್-ಒಎಂಆರ್ ಮಾದರಿ)
  • ದೇಹದಾರ್ಢ್ಯತೆ ಪರೀಕ್ಷೆ (PST)
  • ಸಹಿಷ್ಣುತೆ ಪರೀಕ್ಷೆ (PET)
  • ವೈದ್ಯಕೀಯ ಪರೀಕ್ಷೆ

ಲಿಖಿತ ಪರೀಕ್ಷೆ –

ವಿಷಯಒಟ್ಟು ಪ್ರಶ್ನೆಗಳುಒಟ್ಟು ಅಂಕಗಳುಅವಧಿ
ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾಂತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣ ಒಳಗೊಂಡ ಸಾಮಾನ್ಯ ಅಧ್ಯಯನ10010090 ನಿಮಿಷ

ದೇಹದಾರ್ಢ್ಯತೆ ಪರೀಕ್ಷೆ –

ಪುರುಷ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆಕನಿಷ್ಠ ಎತ್ತರ : 168 ಸೆಂ.ಮೀ.
ಕನಿಷ್ಠ ಎದೆ ಸುತ್ತಳತೆ : 86 ಸೆಂ.ಮೀ. (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ 5 ಸೆಂ.ಮೀ.
ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆಕನಿಷ್ಠ ಎತ್ತರ : 155 ಸೆಂ.ಮೀ.
ಕನಿಷ್ಠ ಎದೆ ಸುತ್ತಳತೆ : 5 ಸೆಂ.ಮೀ.ಗಳ ಕನಿಷ್ಠ ವಿಸ್ತರಿಸುವುದರೊಂದಿಗೆ ಸಂಪೂರ್ಣವಾಗಿ ಹಿಗ್ಗಿಸಿದ್ಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇಲ್ಲದಂತೆ.

ಉದ್ಯೋಗ ಮಾಹಿತಿ : ಎಸ್‌ಬಿಐ ಪ್ರೊಬೇಷನರಿ ಆಫೀಸರ್ ನೇಮಕಾತಿ 2026

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

  • ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 750
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರ 1, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿಗಳು – ರೂ. 500

ಶುಲ್ಕ ಪಾವತಿಸುವ ವಿಧಾನ :

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :

  • ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಜೂನ್ 22, 2026
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜುಲೈ 22, 2026
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜುಲೈ 24, 2026
  • ಲಿಖಿತ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 06, 2026

KSP Armed Police Constable CAR DAR Recruitment 2026 : Important Links

NOTIFICATION (RPC)CLICK HERE
NOTIFICATION (KK)CLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment