
WCD Gadag Anganwadi Recruitment 2026 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗದಗ ಜಿಲ್ಲೆಯ ಗದಗ, ಶಿರಹಟ್ಟಿ, ನರಗುಂದ, ರೋಣ ಮತ್ತು ಮುಂಡರಗಿ ತಾಲ್ಲೂಕಿನಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಅರ್ಹತೆ, ವಯೋಮಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
WCD Gadag Anganwadi Recruitment 2026 : Details of Vacancies
ಹುದ್ದೆ :
ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 168 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ.
| ತಾಲ್ಲೂಕು | ಕಾರ್ಯಕರ್ತೆ | ಸಹಾಯಕಿ |
| ಶಿರಹಟ್ಟಿ | 8 | 21 |
| ನರಗುಂದ | 5 | 20 |
| ರೋಣ | 9 | 27 |
| ಮುಂಡರಗಿ | 8 | 22 |
| ಗದಗ | 7 | 41 |
ಕರ್ತವ್ಯ ಸ್ಥಳ :
ಗದಗ ಜಿಲ್ಲೆಯ ಗದಗ, ಶಿರಹಟ್ಟಿ, ನರಗುಂದ, ರೋಣ, ಮುಂಡರಗಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಹುದ್ದೆಗಳು ಖಾಲಿ ಇದೆ.
ಹುದ್ದೆಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾನದಂಡಗಳ ಪ್ರಕಾರ ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಮೇಲ್ವಿಚಾರಕ ಹುದ್ದೆಗಳ ನೇಮಕಾತಿ 2026
ವಯೋಮಾನ :
- ಕನಿಷ್ಠ 19 ವರ್ಷ ಪೊರೈಸಿರಬೇಕು.
- ಗರಿಷ್ಠ 35 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿದ ನೇಮಕಾತಿ/ ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿಕೊಂಡು ನೀಡಲಾಗಿರುವ ಸೂಚನೆಯಂತೆ ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಪತ್ರಾಂಕಿತ/ ಗೆಜೆಟೆಡ್ ಅಧಿಕಾರಿಯವರಿಂದ ದೃಢೀಕರಿಸಿ ಅರ್ಜಿಯೊಂದಿಗೆ ಸಲ್ಲಿಸುವುದು.
ಹಂತ 2 : ಅರ್ಜಿಗಳನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಕಛೇರಿ ಕೆಲಸದ ವೇಳೆ ಶಿಶು ಅಭಿವೃದ್ಧಿ ಯೋಜನಾ ಕಛೇರಿ ಅರ್ಜಿ ಸ್ವೀಕೃತ ವಹಿಯಲ್ಲಿ (ರಿಜಿಸ್ಟರ್) ತಮ್ಮ ಹೆಸರನ್ನು ದಾಖಲಿಸಿ, ತಮ್ಮ ಅರ್ಜಿಯನ್ನು ಸಂಬಂಧಿಸಿದ ಹುದ್ದೆಯ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಅಥವಾ ಅಂಗನವಾಡಿ ಸಹಾಯಕಿ ಹುದ್ದೆಗೆಂದು ಸ್ಪಷ್ಟವಾಗಿ ನಮೂದಿಸಿ ಸಂಬಂಧಿಸಿದ ಬಾಕ್ಸನಲ್ಲಿ ಹಾಕುವುದು.
ಅರ್ಜಿ ಸಲ್ಲಿಸುವ ವಿಳಾಸ :
- ಗದಗ – ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಜಿಲ್ಲಾ ಬಾಲಕರ ಬಾಲ ಮಂದಿರ ಪಾಲಾ ಬದಾಮಿ ರೋಡ ಹಾಕಿ ಗ್ರೌಂಡ್ ಹತ್ತಿರ ಬೆಟಗೇರಿ-ಗದಗ.
- ಮುಂಡರಗಿ – ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ತಾಲೂಕ ಬಾಲ ಭವನ ಕಟ್ಟಡ, ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿ, ಹಳೆ ಕಲಕೇರಿ ರಸ್ತೆ ಮುಂಡರಗಿ.
- ರೋಣ – ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಎ.ಎಮ್ ಸಾಣಿ ಕಟ್ಟಡ, ಗದಗ ರಸ್ತೆ, ರೋಣ.
- ನರಗುಂದ – ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ತಾಲೂಕ ಆಡಳಿತ ಭವನ, ರೂಮ್ ನಂಬರ – 17, ಹುಬ್ಬಳ್ಳಿ -ಸೋಲ್ಲಾಪುರ ರೋಡ ನರಗುಂದ.
- ಶಿರಹಟ್ಟಿ – ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ, ತಾಲ್ಲೂಕು ಪಂಚಾಯತ ಕಟ್ಟಡ, ಪೊಲೀಸ್ ಸ್ಟೇಶನ್ ಹತ್ತಿರ, ಶಿರಹಟ್ಟಿ.
ನಿಗದಿತ ಅರ್ಜಿ ಶುಲ್ಕದ ವಿವರ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 22, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 30, 2026
WCD Gadag Anganwadi Recruitment 2026 : Important Links
| NOTIFICATION (GADAG) | CLICK HERE |
| NOTIFICATION (MUNDARAGI) | CLICK HERE |
| NOTIFICATION (NARAGUND) | CLICK HERE |
| NOTIFICATION (RON) | CLICK HERE |
| NOTIFICATION (SHIRAHATTI) | CLICK HERE |
| Telegram Join Link | Click Here |
| WhatsApp Group Link | Click Here |
ಹೆಚ್ಚಿನ ಮಾಹಿತಿಗಾಗಿ ಹುದ್ದೆ ಖಾಲಿ ಇರುವ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದು.
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.