
Bengaluru City Civil Court Recruitment 2026 : ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು ಗ್ರೇಡ್ 3, ಬೆರಳಚ್ಚುಗಾರರು, ಚಾಲಕ, ಆದೇಶ ಜಾರಿಕಾರ ಹಾಗೂ ಜವಾನ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ವೇತನ, ಶೈಕ್ಷಣಿಕ ಅರ್ಹತೆ, ಕರ್ತವ್ಯ ಸ್ಥಳ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Bengaluru City Civil Court Recruitment 2026 : Details of Vacancies
ಹುದ್ದೆ :
ಶೀಘ್ರಲಿಪಿಗಾರರು ಗ್ರೇಡ್ 3, ಬೆರಳಚ್ಚುಗಾರರು, ಚಾಲಕ, ಆದೇಶ ಜಾರಿಕಾರ, ಜವಾನ
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 109 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಉಳಿಕೆ ಮೂಲ ವೃಂದ | ಕಲ್ಯಾಣ ಕರ್ನಾಟಕ ಪ್ರದೇಶ |
| ಶೀಘ್ರಲಿಪಿಗಾರರು ಗ್ರೇಡ್ 3 | – | 5 |
| ಬೆರಳಚ್ಚುಗಾರರು | – | 7 |
| ಚಾಲಕ | 7 | 1 |
| ಆದೇಶ ಜಾರಿಕಾರ | – | 1 |
| ಜವಾನ | 81 | 7 |
ಶೈಕ್ಷಣಿಕ ಅರ್ಹತೆ :
ಶೀಘ್ರಲಿಪಿಗಾರರು ಗ್ರೇಡ್ 3
- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಮೂರು ವರ್ಷಗಳ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಬೆರಳಚ್ಚುಗಾರರು –
- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಮೂರು ವರ್ಷಗಳ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ – ಅಂಗನವಾಡಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ 2026
ಚಾಲಕ –
- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಮತ್ತು ಅಥವಾ ತತ್ಸಮಾನ ವಿದ್ಯಾರ್ಹತೆ
- ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಆದೇಶ ಜಾರಿಕಾರ –
- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ವಾಹನ ಚಾಲನಾ ಪರವಾನಿಗೆ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಜವಾನ –
- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಕನ್ನಡ ಓದಲು, ಬರೆಯಲು ಬರಬೇಕು
ವಯೋಮಾನ :
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಾನ ಹೊಂದಿರಬೇಕು.
- ಕನಿಷ್ಠ 18 ವರ್ಷ
- ಸಾಮಾನ್ಯ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷ
- ಪ.ಜಾತಿ, ಪ. ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 45 ವರ್ಷ
ಉದ್ಯೋಗ ಮಾಹಿತಿ – ಎಸ್ಬಿಐ ಪ್ರೊಬೇಷನರಿ ಆಫೀಸರ್ ನೇಮಕಾತಿ 2026
ವೇತನ :
| ಹುದ್ದೆ | ವೇತನ |
| ಶೀಘ್ರಲಿಪಿಗಾರರು ಗ್ರೇಡ್ 3 | ರೂ. 44,425 – ರೂ. 83,700 |
| ಬೆರಳಚ್ಚುಗಾರರು | ರೂ. 34,100 – ರೂ. 67,600 |
| ಚಾಲಕ | ರೂ. 34,100 – ರೂ. 67,600 |
| ಆದೇಶ ಜಾರಿಕಾರ | ರೂ. 31,775 – ರೂ. 61,300 |
| ಜವಾನ | ರೂ. 27,000 – ರೂ. 46,675 |
ಆಯ್ಕೆ ವಿಧಾನ :
- ಶೀಘ್ರಲಿಪಿಗಾರ, ಬೆರಳಚ್ಚುಗಾರ ಹುದ್ದೆಗೆ ಅಭ್ಯರ್ಥಿಗಳು ಅರ್ಹತಾ ಶೈಕ್ಷಣಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಪ್ರಾಧಿಕಾರವು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಒಟ್ಟು ಅಂಕಗಳ ಶೇಕಡಾ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
- ಚಾಲಕರು ಹುದ್ದೆಗೆ ಅರ್ಹತಾ ಪರೀಕ್ಷೆ ನಡೆಸಿ, ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
- ಆದೇಶ ಜಾರಿಕಾರ, ಜವಾನ ಹುದ್ದೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
- ಸಾಮಾನ್ಯ ವರ್ಗದ ಅಭ್ಯರ್ಥಿಗಳು – ರೂ. 300
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 150
- ಪ.ಜಾತಿ, ಪ.ಪಂ, ಪ್ರ1, ಎದ್ದುಕಾಣುವ ಅಂಗವೈಕಲ್ಯವುಳ್ಳ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.
ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 01, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 30, 2026
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜುಲೈ 30, 2026
City Civil Court Bengaluru Recruitment 2026 : Important Links
| NOTIFICATION (RPC) | CLICK HERE |
| NOTIFICATION (KK) | CLICK HERE |
| APPLY ONLINE | CLICK HERE ಜುಲೈ 01 ರಿಂದ ಪ್ರಾರಂಭ |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.