
Indian Coast Guard Recruitment 2026 : ಇಂಡಿಯನ್ ಕೋಸ್ಟ್ ಗಾರ್ಡ್ ಇದರಲ್ಲಿ ಅಗತ್ಯವಿರುವ ನಾವಿಕ (ಜನರಲ್ ಡ್ಯೂಟಿ), ನಾವಿಕ (ಡೊಮೆಸ್ಟಿಕ್ ಬ್ರಾಂಚ್), ಹೈಜೀನಿಸ್ಟ್ ಹಾಗೂ ಯಾಂತ್ರಿಕ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Indian Coast Guard Recruitment 2025 : Details of Vacancies
ಹುದ್ದೆ :
ನಾವಿಕ (ಜನರಲ್ ಡ್ಯೂಟಿ), ನಾವಿಕ (ಡೊಮೆಸ್ಟಿಕ್ ಬ್ರಾಂಚ್), ಹೈಜೀನಿಸ್ಟ್, ಯಾಂತ್ರಿಕ.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 365 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಪುರುಷ | ಮಹಿಳೆ |
| ನಾವಿಕ (ಜನರಲ್ ಡ್ಯೂಟಿ) | 117 | 13 |
| ಯಾಂತ್ರಿಕ (ಮೆಕ್ಯಾನಿಕಲ್) | 28 | – |
| ಯಾಂತ್ರಿಕ (ಇಲೆಕ್ಟ್ರಿಕಲ್) | 23 | – |
| ಯಾಂತ್ರಿಕ (ಇಲೆಕ್ಟ್ರಾನಿಕ್ಸ್) | 9 | – |
| ನಾವಿಕ (ಜನರಲ್ ಡ್ಯೂಟಿ) | 117 | 13 |
| ನಾವಿಕ (ಡೊಮೆಸ್ಟಿಕ್ ಬ್ರಾಂಚ್) | 25 | – |
| ಹೈಜೀನಿಸ್ಟ್ | 20 | – |
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
ನಾವಿಕ (ಜನರಲ್ ಡ್ಯೂಟಿ) –
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು.
ನಾವಿಕ (ಡೊಮೆಸ್ಟಿಕ್ ಬ್ರಾಂಚ್) –
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
ಹೈಜೀನಿಸ್ಟ್ –
ಮೆಟ್ರಿಕ್ಯುಲೇಷನ್ ಅಥವಾ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಟಿಟ್ಯೂಟ್ (ಐಟಿಐ) ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.
ಯಾಂತ್ರಿಕ –
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಇಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಇಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಷನ್ (ರೇಡಿಯೋ/ ಪವರ್) ಇಂಜಿನಿಯರಿಂಗ್ ವಿಭಾಗದಲ್ಲಿ 3 ಅಥವಾ 4 ವರ್ಷಗಳ ಡಿಪ್ಲೊಮಾ ಹೊಂದಿರಬೇಕು. ಅಥವಾ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಮತ್ತು 12ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಇಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಇಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಷನ್ (ರೇಡಿಯೋ/ ಪವರ್) ಇಂಜಿನಿಯರಿಂಗ್ ವಿಭಾಗದಲ್ಲಿ 3 ಅಥವಾ 4 ವರ್ಷಗಳ ಡಿಪ್ಲೊಮಾ ಹೊಂದಿರಬೇಕು.
ವಯೋಮಿತಿ :
- ನಾವಿಕ (ಜನರಲ್ ಡ್ಯೂಟಿ) – ಅಭ್ಯರ್ಥಿಯು 01 ನವೆಂಬರ್ 2005 ರಿಂದ 01 ಮೇ 2009ರ ನಡುವೆ ಜನಿಸಿರಬೇಕು.
- ಯಾಂತ್ರಿಕ – ಅಭ್ಯರ್ಥಿಯು 01 ಮೇ 2005 ರಿಂದ 01 ಮೇ 2009ರ ನಡುವೆ ಜನಿಸಿರಬೇಕು.
- ನಾವಿಕ (ಡೊಮೆಸ್ಟಿಕ್ ಬ್ರಾಂಚ್) – ಅಭ್ಯರ್ಥಿಯು 01 ನವೆಂಬರ್ 2005 ರಿಂದ 01 ಅಕ್ಟೋಬರ್ 2009ರ ನಡುವೆ ಜನಿಸಿರಬೇಕು.
- ಹೈಜೀನಿಸ್ಟ್ – ಅಭ್ಯರ್ಥಿಯು 01 ನವೆಂಬರ್ 2002 ರಿಂದ 01 ಅಕ್ಟೋಬರ್ 2009ರ ನಡುವೆ ಜನಿಸಿರಬೇಕು.
ಉದ್ಯೋಗ ಮಾಹಿತಿ : ಸುಪ್ರೀಂ ಕೋರ್ಟ್ ಜ್ಯೂನಿಯರ್ ಕೋರ್ಟ್ ಅಸಿಸ್ಟಂಟ್ ನೇಮಕಾತಿ 2026
ವಯೋಮಿತಿ ಸಡಿಲಿಕೆ :
- ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ
ವೇತನ :
| ಹುದ್ದೆ | ಹುದ್ದೆಗಳ ಸಂಖ್ಯೆ |
| ನಾವಿಕ (ಜನರಲ್ ಡ್ಯೂಟಿ) | ರೂ. 21,700/- |
| ನಾವಿಕ (ಡೊಮೆಸ್ಟಿಕ್ ಬ್ರಾಂಚ್) | ರೂ. 21,700/- |
| ಹೈಜೀನಿಸ್ಟ್ | ರೂ. 21,700/- |
| ಯಾಂತ್ರಿಕ | ರೂ. 29,200/- |
ಆಯ್ಕೆ ವಿಧಾನ :
ಕಂಪ್ಯೂಟರ್ ಬೇಸ್ಡ್ ಆನ್ಲೈನ್ ಎಕ್ಸಾಂಮಿನೇಷನ್
ಫಿಸಿಕಲ್ ಫಿಟ್ನೆಸ್ ಟೆಸ್ಟ್, ಅಸೆಸ್ಮೆಂಟ್ & ಅಡಾಪ್ಟೇಬಿಲಿಟಿ ಟೆಸ್ಟ್, ಡಾಕ್ಯುಮೆಂಟ್ ವೆರಿಫಿಕೇಷನ್, ಮೆಡಿಕಲ್ ಎಕ್ಸಾಂಮಿನೇಷನ್.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
- ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ
- ಉಳಿದ ಅಭ್ಯರ್ಥಿಗಳು – ರೂ. 550
ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
- ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಅಕ್ಟೋಬರ್ 06, 2026
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಅಕ್ಟೋಬರ್ 21, 2026
Indian Coast Guard Recruitment 2025 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.