BMRCL Recruitment 2023 – Bangalore Metro Recruitment 2023 : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
BMRCL Recruitment 2023 : Details of Vacancies
ಹುದ್ದೆ : ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್, ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್, ಸಿವಿಲ್), ಮೇಂಟೇನರ್ಸ್ (ಸಿಸ್ಟಮ್ಸ್, ಸಿವಿಲ್)
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 207 +29 (HK) ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ | 92 + 16 | 35000-82660 |
ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್) | 10 | 40000-94500 |
ಸೆಕ್ಷನ್ ಇಂಜಿನಿಯರ್ (ಸಿವಿಲ್) | 4 | 40000-94500 |
ಮೇಂಟೇನರ್ಸ್ (ಸಿಸ್ಟಮ್ಸ್) | 44 + 6 | 25000-59060 |
ಮೇಂಟೇನರ್ಸ್ (ಸಿವಿಲ್) | 57 + 7 | 25000-59060 |
ಶೈಕ್ಷಣಿಕ ಅರ್ಹತೆ :
• ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ – ಮೆಟ್ರಿಕ್ಯುಲೇಷನ್ ಜೊತೆಗೆ ಈ ಕೆಳಗಿನ ಯಾವುದೇ ಬ್ರಾಂಚ್ ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ / ಟೆಲಿಕಮ್ಯುನಿಕೇಶನ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್ / ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ / ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ಮೂರು ವರ್ಷಗಳ ಡಿಪ್ಲೊಮಾ ತತ್ಸಮಾನ ವಿದ್ಯಾರ್ಹತೆ.
• ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್) – ಈ ಕೆಳಗಿನ ಯಾವುದಾದರು ಬ್ರಾಂಚ್ನಲ್ಲಿ ಎಂಜಿನಿಯರಿಂಗ್ ಪದವಿ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ / ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್ / ಮೆಕ್ಯಾನಿಕಲ್ / ಟೆಲಿಕಮ್ಯುನಿಕೇಶನ್ / ಅಪ್ಲೈಡ್ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ / ಕಂಪ್ಯೂಟರ್ ಸಾಯನ್ಸ್ ಅಥವಾ ಎಂಜಿನಿಯರಿಂಗ್ ಪದವಿಗೆ ತತ್ಸಮಾನ ವಿದ್ಯಾರ್ಹತೆ.
• ಸೆಕ್ಷನ್ ಇಂಜಿನಿಯರ್ (ಸಿವಿಲ್) – ಸಿವಿಲ್ ಇಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.
• ಮೇಂಟೇನರ್ (ಸಿಸ್ಟಮ್ಸ್) – ಮೆಟ್ರಿಕ್ಯುಲೇಷನ್ ಜೊತೆಗೆ ಈ ಮುಂದಿನ ಯಾವುದೇ ಇಂಜಿನಿಯರಿಂಗ್ ಟ್ರೇಡನಲ್ಲಿ ಎರಡು ವರ್ಷಗಳ ITI ಎಲೆಕ್ಟ್ರಿಷಿಯನ್ / ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ / ಮೆಕ್ಯಾನಿಕ್ ರೇಡಿಯೋ ಮತ್ತು ಟಿವಿ/ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ವೈರ್ ಮ್ಯಾನ / ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ವೇರ್ / ಮೆಕ್ಯಾನಿಕ್ – ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ / ಇನ್ಫಾರ್ಮೇಶನ್ ಟೆಕ್ನಾಲಾಜಿ ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಮಂಟೆನನ್ಸ್ / ಮೆಕ್ ಕಮುನಿಕೇಶನ್ ಇಕ್ಯೂಪ್ಮೇಂಟ್ ಮೆಂಟೇನರ್ಸ/ ರೆಫ್ರಿಜಿರೆಶನ್ ಮತ್ತು ಎಸಿ ಮೆಕ್ಯಾನಿಕ್ಸ್/ ಮೆಕಾಟ್ರಾನಿಕ್ಸ್ ಅಥವಾ ITI ತತ್ಸಮಾನ ವಿದ್ಯಾರ್ಹತೆ.
• ಮೇಂಟೇನರ್ (ಸಿವಿಲ್) – ಮೆಟ್ರಿಕ್ಯುಲೇಷನ್ ಜೊತೆಗೆ ಈ ಕೆಳಗಿನ ಯಾವುದೇ ನಿರ್ದಿಷ್ಟ ಇಂಜಿನಿಯರಿಂಗ್ ಟ್ರೇಡ್ ದಲ್ಲಿ ಎರಡು ವರ್ಷಗಳ ITI: ಮ್ಯಾಸನ್ರಿ/ ಕಾರ್ಪೆಂಟ್ರಿ/ ಬಿಲ್ಡಿಂಗ್/ಫಿಟ್ಟರ್/ವೆಲ್ಡರ್ ಅಥವಾ ITI ತತ್ಸಮಾನ ವಿದ್ಯಾರ್ಹತೆ.
ವಯೋಮಾನ : ದಿನಾಂಕ 22/03/2023 ರಂದು ಅಭ್ಯರ್ಥಿಯ ವಯಸ್ಸು ಹುದ್ದೆಗೆ ನಿಗದಿಪಡಿಸಿದ ಗರಿಷ್ಠ ವಯಸ್ಸನ್ನು ಮೀರಿರಬಾರದು.
• ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
ಆಯ್ಕೆ ವಿಧಾನ : ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು. ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗಾಗಿ ಮತ್ತು ಕನ್ನಡ ಪರೀಕ್ಷೆಗೆ ಕರೆಯಲಾಗುವುದು, ದಾಖಲಾತಿ ಮತ್ತು ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ನಂತರ ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ಮಾಡಲಾಗುವುದು.
ಉದ್ಯೋಗ ಮಾಹಿತಿ : ಕರ್ನಾಟಕ ಲೋಕಸೇವಾ ಆಯೋಗದಿಂದ ಕಿರಿಯ ಲೆಕ್ಕ ಸಹಾಯಕ ಹುದ್ದೆಗಳ ನೇಮಕಾತಿ 2023
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಪರೀಕ್ಷಾ ಶುಲ್ಕದ ವಿವರ :
• ಪ.ಜಾತಿ, ಪ.ಪಂ ಅಭ್ಯರ್ಥಿಗಳಿಗೆ – ರೂ. 590
• ಸಾಮಾನ್ಯ, ಪ್ರ1, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ರೂ. 1180
ಪರೀಕ್ಷಾ ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು ಅಥವಾ ಎಸ್.ಬಿ.ಐ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಚಲನ್ ಮೂಲಕ ನಗದು ಪಾವತಿಸುವ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 24, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 24, 2023
ಪರೀಕ್ಷಾ ಶುಲ್ಕ ಪಾವತಿಸಲು ಪ್ರಾರಂಭ ದಿನಾಂಕ : ಮಾರ್ಚ್ 27, 2023
ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಏಪ್ರಿಲ್ 27, 2023
BMRCL Recruitment 2023 : Important Links
NOTIFICATION (RPC) | CLICK HERE |
NOTIFICATION (HK) | CLICK HERE |
APPLY ONLINE (RPC) | CLICK HERE |
APPLY ONLINE (HK) | CLICK HERE |
Telegram Join Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.