KMF VIMUL Recruitment 2023 – Apply Online for 40 Assistant Manager, Administrative Assistant and Various Posts

KMF VIMUL Recruitment 2023 : ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ವಿಜಯಪುರ ಇದರಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KMF VIMUL Recruitment 2023 : Details of Vacancies

ಹುದ್ದೆ : ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ), ತಾಂತ್ರಿಕ ಅಧಿಕಾರಿ (ಡಿಸಿ/ಕ್ಯೂಸಿ), ವಿಸ್ತರಣಾಧಿಕಾರಿ ದರ್ಜೆ-3, ಕೆಮಿಸ್ಟ್ ದರ್ಜೆ-2, ಕಿರಿಯ ಸಿಸ್ಟಂ ಆಪರೇಟರ್, ಆಡಳಿತ ಸಹಾಯಕ ದರ್ಜೆ-2, ಮಾರುಕಟ್ಟೆ ಸಹಾಯಕರು ದರ್ಜೆ-2, ಕಿರಿಯ ತಾಂತ್ರಿಕ (ಬಾಯ್ಲರ್ ಅಟೆಂಡೆಂಟ್, ಇಲೆಕ್ಟ್ರೀಷಿಯನ್, ರೆಫ್ರೀಜಿರೆಷನ್, ಫಿಟ್ಟರ್), ಹಾಲು ರವಾನೆಗಾರರು.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 40 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ)652650-97100
ತಾಂತ್ರಿಕ ಅಧಿಕಾರಿ (ಡಿಸಿ/ಕ್ಯೂಸಿ)243100-83900
ವಿಸ್ತರಣಾಧಿಕಾರಿ ದರ್ಜೆ-3833450-62600
ಕೆಮಿಸ್ಟ್ ದರ್ಜೆ-2327650-52650
ಕಿರಿಯ ಸಿಸ್ಟಂ ಆಪರೇಟರ್327650-52650
ಆಡಳಿತ ಸಹಾಯಕ ದರ್ಜೆ-2227650-52650
ಮಾರುಕಟ್ಟೆ ಸಹಾಯಕರು ದರ್ಜೆ-2227650-52650
ಕಿರಿಯ ತಾಂತ್ರಿಕ (ಬಾಯ್ಲರ್ ಅಟೆಂಡೆಂಟ್)221400-42000
ಕಿರಿಯ ತಾಂತ್ರಿಕ (ಇಲೆಕ್ಟ್ರೀಷಿಯನ್)221400-42000
ಕಿರಿಯ ತಾಂತ್ರಿಕ (ರೆಫ್ರೀಜಿರೆಷನ್)221400-42000
ಕಿರಿಯ ತಾಂತ್ರಿಕ (ಫಿಟ್ಟರ್)221400-42000
ಹಾಲು ರವಾನೆಗಾರರು621400-42000

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
• ವ್ಯವಸ್ಥಾಪಕರು (ಎಹೆಚ್/ಎಐ) – ಬಿ.ವಿ.ಎಸ್ಸಿ ಪದವಿ ಜೊತೆಗೆ ಗಣಕಯಂತ್ರದ ಜ್ಞಾನ ಹೊಂದಿರಬೇಕು. ಕಹಾಮ ಮತ್ತು ಇದರ ಹಾಲು ಒಕ್ಕೂಟಗಳಲ್ಲಿ ಪಶು ವೈದ್ಯಕೀಯ ಸಮಾಲೋಚಕರಾಗಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.

• ತಾಂತ್ರಿಕ ಅಧಿಕಾರಿ (ಡಿಸಿ/ಕ್ಯೂಸಿ) – ಬಿ.ಎಸ್ಸಿ (ಡಿ.ಟಿ)/ ಬಿ.ಟೆಕ್ (ಡಿ.ಟಿ) ಪದವಿ ಜೊತೆಗೆ ಗಣಕಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.

• ವಿಸ್ತರಣಾಧಿಕಾರಿ ದರ್ಜೆ 3 – ಯಾವುದೇ ಪದವಿ ಜೊತೆಗೆ ಗಣಕಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.

• ಮಾರುಕಟ್ಟೆ ಸಹಾಯಕರು ದರ್ಜೆ 2 – ಬಿ.ಕಾಂ/ ಬಿ.ಬಿ.ಎ ಪದವಿ ಜೊತೆಗೆ ಟ್ಯಾಲಿ ಪ್ರಮಾಣ ಪತ್ರ ಮತ್ತು ಎಂಎಸ್ ಆಫೀಸ್ ಪ್ಯಾಕೇಜ್ ಜ್ಞಾನ ಹೊಂದಿರಬೇಕು.

• ಕಿರಿಯ ಸಿಸ್ಟಂ ಆಫರೇಟರ್ – ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್) ಅಥವಾ ಬಿಸಿಎ ಪದವಿ ಪಡೆದಿರಬೇಕು

• ಆಡಳಿತ ಸಹಾಯಕ ದರ್ಜೆ 2 – ಯಾವುದೇ ಪದವಿ ಜೊತೆಗೆ ಗಣಕಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.

• ಕೆಮಿಸ್ಟ್ ದರ್ಜೆ 2 – ಕೆಮೆಸ್ಟ್ರಿ ಅಥವಾ ಮೈಕ್ರೋಬೈಯಾಲಾಜಿಯನ್ನು ಒಂದು ಐಚ್ಛಿಕ ವಿಷಯವಾಗಿ ಬಿ.ಎಸ್ಸಿ ಪದವಿಯನ್ನು ಹೊಂದಿರಬೇಕು ಜೊತೆಗೆ ಗಣಕಯಂತ್ರದ ಜ್ಞಾನ ಹೊಂದಿರಬೇಕು.

• ಕಿರಿಯ ತಾಂತ್ರಿಕ (ಬಾಯ್ಲರ್ ಅಟೆಂಡೆಂಟ್) – ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಹೊಂದಿರಬೇಕು.

• ಕಿರಿಯ ತಾಂತ್ರಿಕ (ಎಲೆಕ್ಟ್ರಿಷಿಯನ್) – ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ಇಲೆಕ್ಟ್ರಿಕಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. ಜೊತೆಗೆ ಗಣಕಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.

• ಕಿರಿಯ ತಾಂತ್ರಿಕ (ರೆಪ್ರೀಜಿರೇಷನ್) – ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ರೆಪ್ರೀಜಿರೇಷನ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. ಜೊತೆಗೆ ಗಣಕಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.

• ತಾಂತ್ರಿಕ (ಫಿಟ್ಟರ್) – ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ಫಿಟ್ಟರ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. ಜೊತೆಗೆ ಗಣಕಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.

• ಹಾಲು ರವಾನೆಗಾರರು – ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು ಜೊತೆಗೆ ಗಣಕಯಂತ್ರದ ನಿರ್ವಹಣೆ ಜ್ಞಾನ ಹೊಂದಿರಬೇಕು.

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಾನ ನಿಗದಿಪಡಿಸಲಾಗಿದೆ ಹಾಗೂ
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಸಾಮಾನ್ಯ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ

ಉದ್ಯೋಗ ಮಾಹಿತಿ : ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ನೇಮಕಾತಿ 2023

ಆಯ್ಕೆ ವಿಧಾನ : ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ ನಂತರ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಆಧಾರದ ಮೇಲೆ (ಮೆರಿಟ್) 1:5ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳು – ರೂ. 500
• ಇತರೆ ವರ್ಗದ ಅಭ್ಯರ್ಥಿಗಳು – ರೂ. 1000

ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಮಾರ್ಚ್ 24, 2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಏಪ್ರಿಲ್ 25, 2023

KMF VIMUL Recruitment 2023 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment