DHFWS Chikkaballapur Recruitment 2024 : ಚಿಕ್ಕಬಳ್ಳಾಪುರ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Chikkaballapur Recruitment 2024 : Details of Vacancies
ಹುದ್ದೆ : ಆರ್.ಬಿ.ಎಸ್.ಕೆ ಆಯುಷ್ ಎಂ.ಓ, ಆರ್.ಬಿ.ಎಸ್.ಕೆ ಓಫ್ಥಲ್ಮಿಕ್ ಅಸಿಸ್ಟೆಂಟ್, ಡಿಸ್ಟ್ರಿಕ್ಟ್ ಎಪಿಡೆಮಿಯೋಲಾಜಿಸ್ಟ್, ತಾಲ್ಲೂಕು ಜನರಲ್ ಹಾಸ್ಪಿಟಲ್ ಎಪಿಡೆಮಿಯೋಲಾಜಿಸ್ಟ್, ಸ್ಟಾಫ್ ನರ್ಸ
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 20 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಆರ್.ಬಿ.ಎಸ್.ಕೆ ಆಯುಷ್ ಎಂ.ಓ | 2 | 46,894 |
ಆರ್.ಬಿ.ಎಸ್.ಕೆ ಓಫ್ಥಲ್ಮಿಕ್ ಅಸಿಸ್ಟೆಂಟ್ | 1 | 13,784 |
ಡಿಸ್ಟ್ರಿಕ್ಟ್ ಎಪಿಡೆಮಿಯೋಲಾಜಿಸ್ಟ್ | 1 | 30,000 |
ತಾಲ್ಲೂಕು ಜನರಲ್ ಹಾಸ್ಪಿಟಲ್ ಎಪಿಡೆಮಿಯೋಲಾಜಿಸ್ಟ್ | 4 | 30,000 |
ಸ್ಟಾಫ್ ನರ್ಸ | 12 | 15,554 |
ಶೈಕ್ಷಣಿಕ ಅರ್ಹತೆ :
ಆರ್.ಬಿ.ಎಸ್.ಕೆ ಆಯುಷ್ ಎಂ.ಓ – ವೈದ್ಯಾಧಿಕಾರಿಗಳು ಬಿಎಎಂಎಸ್ ಉತ್ತೀರ್ಣರಾಗಿ ಇಂಟರ್ನಷಿಪ್ ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು. ಕೆ.ಎ.ಯು.ಪಿ.ಬಿ ನೋಂದಣಿಯನ್ನು ಹೊಂದಿರತಕ್ಕದ್ದು.
ಆರ್.ಬಿ.ಎಸ್.ಕೆ ಓಫ್ಥಲ್ಮಿಕ್ ಅಸಿಸ್ಟೆಂಟ್ – ಎರಡು ವರ್ಷದ ಡಿಪ್ಲೊಮಾ ಇನ್ ಆಪ್ಟೋಮೆಟ್ರಿ ಅಥವಾ ನೇತ್ರ ಸಹಾಯಕರು ಆಗಿ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳಲ್ಲಿ NPCBನಿಯಮಾನುಸಾರ ತರಬೇತಿ ಪಡೆದಿರಬೇಕು.
ಡಿಸ್ಟ್ರಿಕ್ಟ್ ಎಪಿಡೆಮಿಯೋಲಾಜಿಸ್ಟ್, ತಾಲ್ಲೂಕು ಜನರಲ್ ಹಾಸ್ಪಿಟಲ್ ಎಪಿಡೆಮಿಯೋಲಾಜಿಸ್ಟ್ – ವೈದ್ಯಕೀಯ ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಅಥವಾ ವೈದ್ಯಕೀಯ ಪದವಿ ಜೊತೆಗೆ 2 ವರ್ಷಗಳ ಅನುಭವ ಹೊಂದಿರಬೇಕು.
ಸ್ಟಾಫ್ ನರ್ಸ – ಜಿ.ಎನ್.ಎಂ ಅರ್ಹತೆ ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನೋಂದಣಿಯಾಗಿರಬೇಕು. 2 ವರ್ಷಗಳ ಅನುಭವ ಹೊಂದಿರಬೇಕು.
ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆಯಲ್ಲಿ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ 2024
ವಯಸ್ಸಿನ ಮೀತಿ :
• ಆರ್.ಬಿ.ಎಸ್.ಕೆ ಆಯುಷ್ ಎಂ.ಓ – ಗರಿಷ್ಠ 45 ವರ್ಷ
• ಆರ್.ಬಿ.ಎಸ್.ಕೆ ಓಫ್ಥಲ್ಮಿಕ್ ಅಸಿಸ್ಟೆಂಟ್ – ಗರಿಷ್ಠ 45 ವರ್ಷ
• ಡಿಸ್ಟ್ರಿಕ್ಟ್ ಎಪಿಡೆಮಿಯೋಲಾಜಿಸ್ಟ್ – ಗರಿಷ್ಠ 40 ವರ್ಷ
• ತಾಲ್ಲೂಕು ಜನರಲ್ ಹಾಸ್ಪಿಟಲ್ಎ ಪಿಡೆಮಿಯೋಲಾಜಿಸ್ಟ್ – ಗರಿಷ್ಠ 40 ವರ್ಷ
• ಸ್ಟಾಫ್ ನರ್ಸ – ಗರಿಷ್ಠ 45 ವರ್ಷ
ಆಯ್ಕೆ ವಿಧಾನ : ಮೆರಿಟ್ ಕಂ ರೋಸ್ಟರ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜನವರಿ 19, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 29, 2024
DHFWS Chikkaballapur Recruitment 2024 : Important Links
NOTIFICATION | CLICK HERE |
APPLY ONLINE | CLICK HERE |
Telegram Join Link | Click Here |
WhatsApp Channel Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.