ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
ಹುದ್ದೆ :
ಅಪ್ರೆಂಟಿಸ್
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 8500 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕದಲ್ಲಿ ಒಟ್ಟು 600 ಹುದ್ದೆಗಳಿವೆ
ಜಿಲ್ಲೆ | ಹುದ್ದೆಗಳ ಸಂಖ್ಯೆ |
ಬಾಗಲಕೋಟೆ | 22 ಹುದ್ದೆ |
ಬೆಂಗಳೂರು ಗ್ರಾಮಾಂತರ | 07 ಹುದ್ದೆ |
ಬೆಂಗಳೂರು ನಗರ | 10 ಹುದ್ದೆ |
ಬೆಳಗಾವಿ | 28 ಹುದ್ದೆ |
ಬಳ್ಳಾರಿ | 30 ಹುದ್ದೆ |
ಬೀದರ್ | 27 ಹುದ್ದೆ |
ಬಿಜಾಪುರ್ | 14 ಹುದ್ದೆ |
ಚಾಮರಾಜನಗರ | 24 ಹುದ್ದೆ |
ಚಿಕ್ಕಮಗಳೂರು | 13 ಹುದ್ದೆ |
ಚಿಕ್ಕಬಳ್ಳಾಪುರ | 18 ಹುದ್ದೆ |
ಚಿತ್ರದುರ್ಗ | 12 ಹುದ್ದೆ |
ದಕ್ಷಿಣ ಕನ್ನಡ | 21 ಹುದ್ದೆ |
ದಾವಣಗೆರೆ | 21 ಹುದ್ದೆ |
ಧಾರವಾಡ | 09 ಹುದ್ದೆ |
ಗದಗ | 10 ಹುದ್ದೆ |
ಗುಲ್ಬರ್ಗ | 26 ಹುದ್ದೆ |
ಹಾಸನ | 29 ಹುದ್ದೆ |
ಹಾವೇರಿ | 13 ಹುದ್ದೆ |
ಕೊಡಗು | 02 ಹುದ್ದೆ |
ಕೋಲಾರ | 15 ಹುದ್ದೆ |
ಕೊಪ್ಪಳ | 19 ಹುದ್ದೆ |
ಮಂಡ್ಯ | 34 ಹುದ್ದೆ |
ಮೈಸೂರು | 27 ಹುದ್ದೆ |
ರಾಯಚೂರು | 26 ಹುದ್ದೆ |
ರಾಮನಗರ | 12 ಹುದ್ದೆ |
ಶಿವಮೊಗ್ಗ | 20 ಹುದ್ದೆ |
ತುಮಕೂರು | 64 ಹುದ್ದೆ |
ಉಡುಪಿ | 11 ಹುದ್ದೆ |
ಉತ್ತರ ಕನ್ನಡ | 18 ಹುದ್ದೆ |
ಯಾದಗಿರಿ | 18 ಹುದ್ದೆ |
ವೇತನ :
ಮೊದಲನೇ ವರ್ಷ ಮಾಸಿಕ ವೇತನ ರೂ. 15,000
ಎರಡನೇ ವರ್ಷ ಮಾಸಿಕ ವೇತನ ರೂ. 16,500
ಮೂರನೇ ವರ್ಷ ಮಾಸಿಕ ವೇತನ ರೂ. 19,000
ವಯೋಮಾನ :
ದಿನಾಂಕ ಅಕ್ಟೋಬರ್ 31, 2020ಕ್ಕೆ ಅಭ್ಯರ್ಥಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ :
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 3 ವರ್ಷ
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಉದ್ಯೋಗ ಮಾಹಿತಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2020
ಆಯ್ಕೆ ವಿಧಾನ :
ಆನ್ಲೈನ್ ಪರೀಕ್ಷೆ ನಡೆಸಿ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಅಧಿಕೃತ ವೆಬ್ಸೈಟ್. www.sbi.co.in ವಿಳಾಸಕ್ಕೆ ಭೇಟಿ ನೀಡಿ, ಆನ್ಲೈನ್ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.
ನಿಗದಿತ ಅರ್ಜಿ ಶುಲ್ಕದ ವಿವರ :
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳು ರೂ.300 ಪಾವತಿಸಬೇಕು
ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ನವೆಂಬರ್ 20, 2020
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಡಿಸೆಂಬರ್ 10, 2020
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಡಿಸೆಂಬರ್ 10, 2020
ಅಧಿಸೂಚನೆ : Click Here
ಕೊನೆಯ ಪದಗಳು :
ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.