Ayush Department Karnataka Recruitment 2023 – Apply for 32 Ayush Doctors, Multi Purpose Worker and Various Posts

Ayush Department Karnataka Recruitment 2023 : ರಾಷ್ಟ್ರೀಯ ಆಯುಷ್ ಅಭಿಯಾನದಡಿ ಮೇಲ್ದರ್ಜೆಗೇರಿಸಲಾದ ಜಿಲ್ಲಾ ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಸಂಯುಕ್ತ ಆಸ್ಪತ್ರೆ, ಕಲಬುರಗಿ, ಸರ್ಕಾರಿ ಆಯುರ್ವೇದ ಆಸ್ಪತ್ರೆ, ಸೇಡಂ/ ಅಫಜಲಪೂರ/ ಚಿತ್ತಾಪೂರ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Ayush Department Karnataka Recruitment 2023 : Details of Vacancies

ಹುದ್ದೆ : ಆಯುಷ್ ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್, ಕ್ಷಾರಸೂತ್ರ ಅಟೆಂಡರ್, ಸ್ತ್ರೀರೋಗ ಅಟೆಂಡರ್ (ಮಹಿಳೆ), ಮಲ್ಟಿ ಪರ್ಪಸ್ ವರ್ಕರ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಅಗತ್ಯವಿರುವ 32 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಆಯುಷ್ ತಜ್ಞ ವೈದ್ಯರು835000
ಔಷಧಿ ವಿತರಕರು415,821
ಮಸಾಜಿಸ್ಟ್811,356
ಕ್ಷಾರಸೂತ್ರ ಅಟೆಂಡರ್411,356
ಸ್ತ್ರೀರೋಗ ಅಟೆಂಡರ್ (ಮಹಿಳೆ)411,356
ಮಲ್ಟಿ ಪರ್ಪಸ್ ವರ್ಕರ್410,300

ಶೈಕ್ಷಣಿಕ ಅರ್ಹತೆ :
• ಆಯುಷ್ ತಜ್ಞ ವೈದ್ಯರು – ಸರ್ಕಾರದಿಂದ ಅಂಗೀಕೃತವಾದ ವಿಶ್ವವಿದ್ಯಾನಿಲಯದಿಂದ ಆಯುರ್ವೇದ ವೈದ್ಯಕೀಯ/ ಹೋಮಿಯೋಪತಿ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಂಗೀಕೃತ ನೋಂದಣಿ ಪ್ರಾಧಿಕಾರದಿಂದ ವೈದ್ಯ ವೃತ್ತಿ ನೋಂದಣಿಯನ್ನು ಮಾಡಿಕೊಂಡಿರಬೇಕು.

• ಔಷಧಿ ವಿತರಕರು – ಎಸ್.ಎಸ್.ಎಲ್.ಸಿ ಮತ್ತು ಡಿಪ್ಲೊಮಾ ಇನ್ ಫಾರ್ಮಸಿ ಅರ್ಹತೆ ಹೊಂದಿರಬೇಕು. ಅಂಗೀಕೃತ ನೋಂದಣಿ ಪ್ರಾಧಿಕಾರದಿಂದ ನೋಂದಣಿಯನ್ನು ಮಾಡಿಕೊಂಡಿರಬೇಕು.

• ಮಸಾಜಿಸ್ಟ್ – ಕನಿಷ್ಠ 7ನೇ ತರಗತಿ ಹಾಗೂ ಆಯುಷ್‌ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್‌ಗಳಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.

• ಕ್ಷಾರಸೂತ್ರ ಅಟೆಂಡರ್ & ಸ್ತ್ರೀರೋಗ ಅಟೆಂಡರ್ (ಮಹಿಳೆ) – ಕನಿಷ್ಠ 10ನೇ ತರಗತಿ ಹಾಗೂ ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.

• ಮಲ್ಟಿಪರ್ಪಸ್ ವರ್ಕರ್ – ಕನಿಷ್ಠ 10 ನೇ ತರಗತಿ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ.

ಉದ್ಯೋಗ ಮಾಹಿತಿ : ಡಿಸಿಸಿ ಬ್ಯಾಂಕ್ ನೇಮಕಾತಿ 2023

ವಯೋಮಿತಿ : ಕರ್ನಾಟಕ ಸರ್ಕಾರದ ಸಾಮಾನ್ಯ ನೇಮಕಾತಿ ನಿಯಮಗಳನ್ವಯ ವಯೋಮಿತಿಯನ್ನು ಪರಿಗಣಿಸಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಅಭ್ಯರ್ಥಿಗಳು ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಪಡೆದುಕೊಳ್ಳಬೇಕು.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಹುದ್ದೆಗೆ ಸಂಬಂಧಪಟ್ಟ ಸ್ವಯಂ ದೃಢೀಕೃತ ದಾಖಲಾತಿಗಳೊಂದಿಗೆ ವಿದ್ಯಾರ್ಹತೆ ಅಂಕ ಪಟ್ಟಿಯ ಪ್ರತಿ, ಗ್ರಾಮೀಣ, ಜಾತಿ ಪ್ರಮಾಣ ಪತ್ರ, 371ಜೆ ಪ್ರತಿ, ಹಾಗೂ ಭಾವಚಿತ್ರವನ್ನು ಲಗತ್ತಿಸಿ.
ಹಂತ 4 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆಯುಷ್ ಕಚೇರಿ, ಗಾಜಿಪೂರ, ಕಲಬುರಗಿ – 585101

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಫೆಬ್ರವರಿ 28, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 16, 2023

Ayush Department Karnataka Recruitment 2023 : Important Links

NOTIFICATIONCLICK HERE
Telegram Join Link Click Here

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆಗೆ 08472-224314 ಸಂಪರ್ಕಿಸಬಹುದು.

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment