Cantonment Board Belgaum Recruitment 2021 : ಕಂಟೋನ್ಮೆಂಟ್ ಬೋರ್ಡ್ ಬೆಳಗಾಂವನಲ್ಲಿ ಅಗತ್ಯವಿರುವ ಕ್ಲರ್ಕ್, ಸ್ಟೆನೋಗ್ರಾಫರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Cantonment Board Belgaum Recruitment 2021 : Details of Vacancies
ಹುದ್ದೆ : ಚೌಕಿದಾರ್, ಸಫಾಯಿವಾಲಾ, ವೈರಮ್ಯಾನ್, ಪ್ರೈಮರಿ ಅಸಿಸ್ಟೆಂಟ್ ಟೀಚರ್, ಸೆಕೆಂಡ್ ಡಿವಿಷನ್ ಕ್ಲರ್ಕ್ ಹಾಗೂ ಸ್ಟೆನೋಗ್ರಾಫರ್
ಕರ್ತವ್ಯ ಸ್ಥಳ : ಆಯ್ಕೆಯಾದ ಅಭ್ಯರ್ಥಿಗಳು ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸಬೇಕು
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 13 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ಗರಿಷ್ಠ ವಯೋಮಾನ |
ಚೌಕಿದಾರ್ | 01 | 28 ವರ್ಷ |
ಸಫಾಯಿವಾಲಾ | 08 | 28 ವರ್ಷ |
ವೈರಮ್ಯಾನ್ | 01 | 25 ವರ್ಷ |
ಪ್ರೈಮರಿ ಅಸಿಸ್ಟೆಂಟ್ ಟೀಚರ್ | 01 | 30 ವರ್ಷ |
ಸೆಕೆಂಡ್ ಡಿವಿಷನ್ ಕ್ಲರ್ಕ್ | 01 | 25 ವರ್ಷ |
ಸ್ಟೆನೋಗ್ರಾಫರ್ | 01 | 25 ವರ್ಷ |
ಶೈಕ್ಷಣಿಕ ಅರ್ಹತೆ :
• ಚೌಕಿದಾರ್ ಹುದ್ದೆಗೆ 7ನೇ ತರಗತಿ ಹೊಂದಿರಬೇಕು
• ಸಫಾಯಿವಾಲಾ ಹುದ್ದೆಗೆ 7ನೇ ತರಗತಿ ಹೊಂದಿರಬೇಕು
• ವೈರಮ್ಯಾನ್ ಹುದ್ದೆಗೆ 10ನೇ ತರಗತಿ ಜೊತೆಗೆ ಎಲೆಕ್ಟ್ರಿಕಲ್ ಟ್ರೇಡ್ ನಲ್ಲಿ ಐಟಿಐ ಮುಗಿಸಿರಬೇಕು.
• ಪ್ರೈಮರಿ ಅಸಿಸ್ಟೆಂಟ್ ಟೀಚರ್ ಹುದ್ದೆಗೆ ದ್ವಿತೀಯ ಪಿಯುಸಿ ಜೊತೆಗೆ ಬಿ.ಇಡಿ ಅಥವಾ ಡಿ.ಇಡಿ ಮತ್ತು ಟಿಇಟಿ ಪಾಸಾಗಿರಬೇಕು.
• ಸೆಕೆಂಡ್ ಡಿವಿಷನ್ ಕ್ಲರ್ಕ್ ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೊಮಾ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ಸ್ಟೆನೋಗ್ರಾಫರ್ ಹುದ್ದೆಗೆ ದ್ವಿತೀಯ ಪಿಯುಸಿ ಜೊತೆಗೆ ಸೀನಿಯರ್ ಶಾರ್ಟ್ ಹ್ಯಾಂಡ್ ಅಥವಾ ಸೀನಿಯರ್ ಟೈಪಿಂಗ್ ಹೊಂದಿರಬೇಕು.
ವಯೋಮಾನ : ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು
ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ. 52,650 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
ಉದ್ಯೋಗ ಮಾಹಿತಿ : Indian Navy Recruitment 2021 : 1159 ಟ್ರೇಡ್ಸ್‌ಮನ್ ಮೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕಂಟೋನ್ಮೆಂಟ್ ಬೋರ್ಡ್ ಬೆಳಗಾಂವನಲ್ಲಿ ಅಗತ್ಯವಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಕಂಟೋನ್ಮೆಂಟ್ ಬೋರ್ಡ್ ಬೆಳಗಾಂನ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ಕೊನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಕಛೇರಿಯ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ :
Chief Executive Officer,
Cantonment Board, BC No.41, Khanapur Road, Camp, Belagavi ~ 590001
ನಿಗದಿತ ಅರ್ಜಿ ಶುಲ್ಕದ ವಿವರ :
ಅಭ್ಯರ್ಥಿಗಳು ರೂ. 300 ಡಿಡಿಯನ್ನು Chief Executive Officer, Cantonment Board, Belgaum ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಫೆಬ್ರುವರಿ 15, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 19, 2021
Cantonment Board Belgaum Recruitment 2021 : Important Links
ಅಧಿಸೂಚನೆ : Click Here
ವೆಬ್‌ಸೈಟ್ : Click Here
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.