ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನೇಮಕಾತಿ 2025 – CESC Mysore Apprentice Recruitment 2025

CESC Mysore Apprentice Recruitment 2025 : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರಿನಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

CESC Mysore Apprentice Recruitment 2025 : Details of Vacancies

ಹುದ್ದೆ : ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್, ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್, ಪದವೀಧರ ಅಪ್ರೆಂಟಿಸ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮೈಸೂರು, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 250 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್80
ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್55
ಪದವೀಧರ ಅಪ್ರೆಂಟಿಸ್115

ಶೈಕ್ಷಣಿಕ ಅರ್ಹತೆ :
• ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ – ಬಿಇ/ ಬಿ.ಟೆಕ್ ಅರ್ಹತೆ ಹೊಂದಿರಬೇಕು.
• ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್ – 3 ವರ್ಷಗಳ ಡಿಪ್ಲೊಮಾ ಅರ್ಹತೆ ಹೊಂದಿರಬೇಕು.
• ಪದವೀಧರ ಅಪ್ರೆಂಟಿಸ್ – ಬಿ.ಎ/ ಬಿ.ಎಸ್ಸಿ/ ಬಿ.ಕಾಂ/ ಬಿ.ಬಿ.ಎ/ ಬಿ.ಸಿ.ಎ ಅರ್ಹತೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2025

ವಯೋಮಿತಿ : ಅಪ್ರೆಂಟಿಸ್ ನಿಯಮದ ಪ್ರಕಾರ ವಯಸ್ಸಿನ ಮೀತಿ 18 ವರ್ಷಕ್ಕಿಂತ ಕಡಿಮೆ ಇರಬಾರದು.

ಆಯ್ಕೆ ವಿಧಾನ : ಅಭ್ಯರ್ಥಿಗಳು ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.

ತರಬೇತಿ ಅವಧಿ : ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿಯು ಒಂದು ವರ್ಷದ ಅವಧಿಯಾಗಿರುತ್ತದೆ.

ಸ್ಟೈಫಂಡ್ :

ಹುದ್ದೆಸ್ಟೈಫಂಡ್
ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್9000
ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್8000
ಪದವೀಧರ ಅಪ್ರೆಂಟಿಸ್9000

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ದಾಖಲೆಗಳ ಪರಿಶೀಲನೆ ವಿಳಾಸ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ನಿಗಮ ಕಾರ್ಯಾಲಯ, ನಂ. 29, ವಿಜಯನಗರ 2ನೇ ಹಂತ, ಹಿನಕಲ್, ಮೈಸೂರು – 570017

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜನವರಿ 20, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 06, 2025
ಕಿರುಪಟ್ಟಿಯಾದ ಅಭ್ಯರ್ಥಿಗಳ ಪಟ್ಟಿಯ ಘೋಷಣೆ : ಫೆಬ್ರವರಿ 11, 2025
ದಾಖಲೆಗಳ ಪರಿಶೀಲನೆ ದಿನಾಂಕ : ಫೆಬ್ರವರಿ 17, 2025 ರಿಂದ ಫೆಬ್ರವರಿ 20, 2025

CESC Mysore Apprentice Recruitment 2025 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಇತರೆ ಮಾಹಿತಿ : ಇಂಜಿನಿಯರಿಂಗ್ ಪದವೀಧರ/ ಪದವೀಧರ/ ಡಿಪ್ಲೊಮಾ ಇಂಜಿನಿಯರಿಂಗ್ ನಲ್ಲಿ 2020, 2021, 2022, 2023 ಮತ್ತು 2024ನೇ ಸಾಲಿನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment