DHFWS Ballari Recruitment 2023 : ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವೃಂಧದ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Ballari Recruitment 2023 : Details of Vacancies
ಹುದ್ದೆ : ಶುಶ್ರೂಷಕಿಯರು, ಕಮ್ಯೂನಿಟಿ ನರ್ಸ್, ಜಿಲ್ಲಾ ಆಶಾ ಮೆಂಟರ್, ವೈದ್ಯಾಧಿಕಾರಿಗಳು, ಆಯುಷ್ ವೈದ್ಯಾಧಿಕಾರಿಗಳು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರರು, ಇ.ಎನ್.ಟಿ ತಜ್ಞರು, ಶ್ರವಣದೋಷವುಳ್ಳ ಮಕ್ಕಳ ಬೋಧಕರು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ, ಪ್ರಯೋಗಶಾಲಾ ತಂತ್ರಜ್ಞರು.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 36 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಶೈಕ್ಷಣಿಕ ಅರ್ಹತೆ :
• ಶುಶ್ರೂಷಕಿಯರು (ಮಹಿಳೆಯರು) ತಾಯಿ ಆರೋಗ್ಯ (ಹೆಚ್.ಡಿ.ಯು ವಿಭಾಗ) – ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಜಿ.ಎನ್.ಎಂ. ನರ್ಸಿಂಗ್ ತರಬೇತಿ ಹೊಂದಿರಬೇಕು ಹಾಗೂ ಕೆ.ಎನ್.ಸಿ ನೊಂದಣಿ ಹೊಂದಿರತಕ್ಕದ್ದು ಮತ್ತು ಚಾಲ್ತಿಯಲ್ಲಿರತಕ್ಕದ್ದು.
• ಶುಶ್ರೂಷಕಿಯರು (ರಕ್ತ ಶೇಖರಣಾ ವಾಹನಕ್ಕೆ) – ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಎಸ್.ಸಿ. ನರ್ಸಿಂಗ್ ಪದವಿ ಹೊಂದಿರಬೇಕು ಅಥವಾ ಡಿಪ್ಲೊಮೊ ಇನ್ ನರ್ಸಿಂಗ್ ಪದವಿ ಹೊಂದಿರಬೇಕು ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರತಕ್ಕದ್ದು.
• ಶುಶ್ರೂಷಕಿಯರು (ಡಿ.ಇ.ಐ.ಸಿ ವಿಭಾಗ) – ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಎಸ್.ಸಿ ನರ್ಸಿಂಗ್ ಪದವಿ ಹೊಂದಿರಬೇಕು. ಕನಿಷ್ಠ 2 ವರ್ಷ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಅಥವಾ ಎನ್.ಜಿ.ಓ ಗಳಲ್ಲಿ ಸೇವಾ ಅನುಭವ ಹೊಂದಿರಬೇಕು.
• ಕಮ್ಯೂನಿಟಿ ನರ್ಸ್ (ಡಿ.ಎಂ.ಹೆಚ್.ಪಿ) – ನರ್ಸಿಂಗ್ ಬಿ.ಎಸ್.ಸಿ ಅಥವಾ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ತತ್ಸಮಾನ ಪದವಿ ಪಡೆದಿರಬೇಕು ಅಥವಾ ಲಭ್ಯವಿಲ್ಲದಿದ್ದರೆ ಜನರಲ್ ನರ್ಸಿಂಗ್‌ನ್ನು ಪರಿಗಣಿಸಲಾಗುವುದು.
• ಜಿಲ್ಲಾ ಆಶಾ ಮೆಂಟರ್ (ಆಶಾ ಕಾರ್ಯಕ್ರಮ) – ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಬಿ.ಎಸ್.ಸಿ ನರ್ಸಿಂಗ್/ಜಿ.ಎನ್.ಎಂ. ನರ್ಸಿಂಗ್ ತರಬೇತಿ ಹೊಂದಿರಬೇಕು ಹಾಗೂ ಕೆ.ಎನ್.ಸಿ ನೊಂದಣಿ ಹೊಂದಿರತಕ್ಕದ್ದು ಮತ್ತು ಚಾಲ್ತಿಯಲ್ಲಿರತಕ್ಕದ್ದು, ಡಿಪ್ಲೋಮಾ ನರ್ಸಿಂಗ್ (ಎ.ಎನ್.ಎಂ), ಆಯುಷ್ ಕೋರ್ಸ್ ಗಳಲ್ಲಿ ತೇರ್ಗಡೆಯಾಗಿರತಕ್ಕದ್ದು.
• ವೈದ್ಯಾಧಿಕಾರಿಗಳು (ಮಕ್ಕಳ ಆರೋಗ್ಯ & ಐ.ಸಿ.ಯು ವಿಭಾಗ) – ಎಂ.ಬಿ.ಬಿ.ಎಸ್. ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯವಾಗಿ ಇಂಟರ್ನಷಿಪ್ ಪೂರೈಸಿರಬೇಕು ಹಾಗೂ ಕೆ.ಎಂ.ಸಿಯ ನೊಂದಣಿಯನ್ನು ಹೊಂದಿರತಕ್ಕದ್ದು.
• ಆಯುಷ್ ವೈದ್ಯಾಧಿಕಾರಿಗಳು – ಬಿ.ಎ.ಎಂ.ಎಸ್ ಉತ್ತಿರ್ಣರಾಗಿರಬೇಕು. ಹಾಗೂ ಇಂಟರ್ನಷಿಪ್ ಕಡ್ಡಾಯವಾಗಿ ಪೂರೈಸಿರಬೇಕು. ಮತ್ತು ಅಂಗೀಕೃತ ನೋಂದಣಿ ಪ್ರಾಧಿಕಾರದಿಂದ ವೃತ್ತಿ ನೋಂದಣಿ ಮಾಡಿಸಿರಬೇಕು ಹಾಗೂ ಎರಡು ವರ್ಷ ಸರ್ಕಾರಿ ಆರೋಗ್ಯ ಕೇಂದ್ರ ಕಾರ್ಯಕ್ರಮ ಅಥವಾ ಎನ್.ಜಿ.ಓ ಗಳಲ್ಲಿ ಸೇವಾ ಅನುಭವ ಹೊಂದಿರಬೇಕು.
• ಮಕ್ಕಳ ತಜ್ಞರು (ಮಕ್ಕಳ ಆರೋಗ್ಯ & ತಾಯಿ ಆರೋಗ್ಯ) – ಡಿ.ಎಂ. ನಿಯೋನಟಾಲಜಿ, ಫೆಲೋಶಿಪ್ ಇನ್ ನಿಯೋನಟಾಲಜಿ, ಎಂ.ಡಿ ಪಿಡಿಯಾಟ್ರೀಕ್ಸ್/ ಡಿ.ಎನ್.ಬಿ/ ಡಿ.ಸಿ.ಹೆಚ್ ಹಾಗೂ ಕೆ.ಎಂ.ಸಿ ನೋಂದಣಿಯನ್ನು ಹೊಂದಿರತಕ್ಕದ್ದು.
• ಅರವಳಿಕೆ ತಜ್ಞರು (ತಾಯಿ ಆರೋಗ್ಯ) – ಎಂ.ಡಿ/ ಡಿ.ಎ ಇನ್ ಅನಸ್ತೇಶಿಸ್ಟ್ ಹಾಗೂ ಕೆ.ಎಂ.ಸಿ ನೋಂದಣಿಯನ್ನು ಹೊಂದಿರತಕ್ಕದ್ದು.
• ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರರು (ಡಿ.ಸಿ.ಕ್ಯೂಎ) – ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ ಆಯುಷ್/ ನರ್ಸಿಂಗ್ ಪದವಿ
• ಇ.ಎನ್.ಟಿ ತಜ್ಞರು (ಎನ್.ಪಿ.ಪಿ.ಸಿ.ಡಿ) – ಎಂ.ಎಸ್. ಇನ್ ಇ.ಎನ್.ಟಿ/ ಡಿಪ್ಲೊಮಾ ಇನ್ ಇ.ಎನ್.ಟಿ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರವನ್ನು ಪಡೆದಿರಬೇಕು.
• ಶ್ರವಣದೋಷವುಳ್ಳ ಮಕ್ಕಳ ಬೋಧಕರು (ಎನ್.ಪಿ.ಪಿ.ಸಿ.ಡಿ) – ಯುವ ಕಿವುಡ ಮತ್ತು ಶ್ರವಣ ನೈಜತೆಯ ತರಬೇತಿಯಲ್ಲಿ ಡಿಪ್ಲೊಮಾ ಹೊಂದಿರಬೇಕು.
• ಶುಶೂಷಕಿಯರು (ಮಹಿಳೆ) (ಎನ್.ಯು.ಹೆಚ್.ಎಮ್) – ಮಾನ್ಯತೆ ಪಡೆದ ನರ್ಸಿಂಗ್ ಶಾಲೆಗಳಲ್ಲಿ ಬಿ.ಎಸ್ಸಿ ನರ್ಸಿಂಗ್ ಅಥವಾ ಜಿ.ಎನ್.ಎಂ ತರಬೇತಿ ಹೊಂದಿರಬೇಕು ಹಾಗೂ ಕೆ.ಎನ್.ಸಿ ನೊಂದಣಿ ಹೊಂದಿರತಕ್ಕದ್ದು.
• ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು (ಕಿರಿಯ ಮಹಿಳಾ ಆರೋಗ್ಯ ಸಹಾಯಕರು) – ಅಭ್ಯರ್ಥಿಗಳು ಎಸ್.ಎಲ್.ಎಲ್.ಸಿ/ಪಿ.ಯು.ಸಿ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಎ.ಎನ್.ಎಂ ತರಬೇತಿ ಹೊಂದಿರತಕ್ಕದ್ದು ಹಾಗೂ ಕೆ.ಎನ್.ಸಿ ನೊಂದಣಿ ಹೊಂದಿರತಕ್ಕದ್ದು.
• ಶುಶ್ರೂಷಕಿಯರು (ಮಹಿಳೆ) – ಬಿ.ಎಸ್ಸಿ ನರ್ಸಿಂಗ್
• ವೈದ್ಯಾಧಿಕಾರಿಗಳು (ನಮ್ಮ ಕ್ಲಿನಿಕ್) – ಎಂ.ಬಿ.ಬಿ.ಎಸ್. ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯವಾಗಿ ಇಂಟರ್ನಷಿಪ್ ಪೂರೈಸಿರಬೇಕು ಹಾಗೂ ಕೆ.ಎಂ.ಸಿಯ ನೊಂದಣಿಯನ್ನು ಹೊಂದಿರತಕ್ಕದ್ದು.
• ಪ್ರಯೋಗಶಾಲಾ ತಂತ್ರಜ್ಞರು – ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಾಲಜಿ, ಎಲ್.ಡಿ.ಸಿ, ಪಿಯುಸಿ ಯೊಂದಿಗೆ ಕಂಪ್ಯೂಟರ್ ಪ್ರಮಾಣ ಪತ್ರ ಹೊಂದಿರಬೇಕು.
ಉದ್ಯೋಗ ಮಾಹಿತಿ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನೇಮಕಾತಿ
ವೇತನ :
ಹುದ್ದೆ | ವೇತನ | ವಯೋಮಾನ |
ಶುಶ್ರೂಷಕಿಯರು (ಮಹಿಳೆಯರು) ತಾಯಿ ಆರೋಗ್ಯ (ಹೆಚ್.ಡಿ.ಯು ವಿಭಾಗ) | 14000 | 45 ವರ್ಷ |
ಶುಶ್ರೂಷಕಿಯರು (ರಕ್ತ ಶೇಖರಣಾ ವಾಹನಕ್ಕೆ) | 13225 | 40 ವರ್ಷ |
ಶುಶ್ರೂಷಕಿಯರು (ಡಿ.ಇ.ಐ.ಸಿ ವಿಭಾಗ) | 13225 | 40 ವರ್ಷ |
ಕಮ್ಯೂನಿಟಿ ನರ್ಸ್ (ಡಿ.ಎಂ.ಹೆಚ್.ಪಿ) | 14000 | – |
ಜಿಲ್ಲಾ ಆಶಾ ಮೆಂಟರ್ (ಆಶಾ ಕಾರ್ಯಕ್ರಮ) | 13225 | 40 ವರ್ಷ |
ವೈದ್ಯಾಧಿಕಾರಿಗಳು (ಮಕ್ಕಳ ಆರೋಗ್ಯ) | 55000 | 45 ವರ್ಷ |
ವೈದ್ಯಾಧಿಕಾರಿಗಳು (ಐ.ಸಿ.ಯು ವಿಭಾಗ) | 50000 | 45 ವರ್ಷ |
ಆಯುಷ್ ವೈದ್ಯಾಧಿಕಾರಿಗಳು | 25000 | 60 ವರ್ಷ |
ಮಕ್ಕಳ ತಜ್ಞರು (ಮಕ್ಕಳ ಆರೋಗ್ಯ) | 130000 | 60 ವರ್ಷ |
ಮಕ್ಕಳ ತಜ್ಞರು (ತಾಯಿ ಆರೋಗ್ಯ) | 130000 | 60 ವರ್ಷ |
ಅರವಳಿಕೆ ತಜ್ಞರು (ತಾಯಿ ಆರೋಗ್ಯ) | 130000 | 60 ವರ್ಷ |
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು (ತಾಯಿ ಆರೋಗ್ಯ) | 130000 | 60 ವರ್ಷ |
ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರರು (ಡಿ.ಸಿ.ಕ್ಯೂಎ) | 42000 | 45 ವರ್ಷ |
ಇ.ಎನ್.ಟಿ ತಜ್ಞರು (ಎನ್.ಪಿ.ಪಿ.ಸಿ.ಡಿ) | 110000 | 60 ವರ್ಷ |
ಶ್ರವಣದೋಷವುಳ್ಳ ಮಕ್ಕಳ ಬೋಧಕರು (ಎನ್.ಪಿ.ಪಿ.ಸಿ.ಡಿ) | 15000 | 42 ವರ್ಷ |
ಶುಶೂಷಕಿಯರು (ಮಹಿಳೆ) (ಎನ್.ಯು.ಹೆಚ್.ಎಮ್) | 13225 | 45 ವರ್ಷ |
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು (ಕಿರಿಯ ಮಹಿಳಾ ಆರೋಗ್ಯ ಸಹಾಯಕರು) | 12745 | 40 ವರ್ಷ |
ಶುಶ್ರೂಷಕಿಯರು (ಮಹಿಳೆ) | 13225 | 40 ವರ್ಷ |
ವೈದ್ಯಾಧಿಕಾರಿಗಳು (ನಮ್ಮ ಕ್ಲಿನಿಕ್) | 43142 | 65 ವರ್ಷ |
ವೈದ್ಯಾಧಿಕಾರಿಗಳು (ಪಿ.ಎಂ ಅಭೀಮ್ ಕಾರ್ಯಕ್ರಮ) | 43142 | 65 ವರ್ಷ |
ಶುಶ್ರೂಷಕಿಯರು (ಮಹಿಳೆ) (ಪಿ.ಎಂ ಅಭೀಮ್ ಕಾರ್ಯಕ್ರಮ) | 13932 | 45 ವರ್ಷ |
ಪ್ರಯೋಗಶಾಲಾ ತಂತ್ರಜ್ಞರು | 13827 | – |
ವೈದ್ಯಾಧಿಕಾರಿಗಳು (ಎನ್.ಯು.ಹೆಚ್.ಎಮ್) | 36750 | 65 ವರ್ಷ |
ಆಯ್ಕೆ ವಿಧಾನ : ಮೆರಿಟ್ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಸಂಬಂಧಿಸಿದ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಿಸಿ, ಇತರೆ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಕಛೇರಿಯ ವಿಳಾಸಕ್ಕೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕು
ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಾದ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬಳ್ಳಾರಿ ಜಿಲ್ಲೆ.
ದಾಖಲಾತಿ ಪರಿಶೀಲನೆ ದಿನಾಂಕದ ವಿವರ :
ದಾಖಲೆಗಳ ಪರಿಶೀಲನೆ ನಡೆಯುವ ದಿನಾಂಕ : ಜುಲೈ 07, 2023 ರಂದು ಬೆಳಿಗ್ಗೆ 09.30 ಗಂಟೆಗೆ
DHFWS Ballari Recruitment 2023 : Important Links
NOTIFICATION & APPLICATION FORM | CLICK HERE |
Telegram Join Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.