DHFWS Haveri Recruitment 2022 – Apply for 119 Medical Officer and Various Posts

DHFWS Haveri Recruitment 2022 : ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Haveri Recruitment 2022 : Details of Vacancies

ಹುದ್ದೆ : ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ, ಶುಶ್ರೂಷಾಧಿಕಾರಿಗಳು, ಆಶಾ ಮೇಲ್ವಿಚಾರಕರು, ಆಯುಷ್ ಮೆಡಿಕಲ್ ಆಫೀಸರ್, ಆಪ್ತಲಮಿಕ್ ಅಸಿಸ್ಟೆಂಟ್/ ಫಾರ್ಮಾಸಿಸ್ಟ್ (ಆರ್.ಬಿ.ಎಸ್.ಕೆ), ಡಯಟ್ ಕೌನ್ಸಿಲರ್, ಸಿವಿಲ್ ಇಂಜಿನಿಯರ್, ಬಯೋ ಮೆಡಿಕಲ್ ಇಂಜಿನಿಯರ್, ಪಂಚಕರ್ಮ ಥೆರಪಿಸ್ಟ್, ಮೇಲ್ ಹೆಲ್ತ್ ವರ್ಕರ್ (ಎನ್.ಯು.ಎಚ್.ಎಂ) ಫಾರ್ಮಾಸಿಸ್ಟ್, ಡೆಂಟಲ್ ಹೈಜನಿಸ್ಟ್, ಡೆಂಟಲ್ ಟೆಕ್ನಿಷಿಯನ್, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೇರ್ಮೆಂಟ್ ಚಿಲ್ಡ್ರನ್, ಇ.ಎನ್.ಟಿ ಸ್ಪೆಷಲಿಸ್ಟ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಾವೇರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 119 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ17
ಶುಶ್ರೂಷಾಧಿಕಾರಿಗಳು82
ಆಶಾ ಮೇಲ್ವಿಚಾರಕರು5
ಆಯುಷ್ ಮೆಡಿಕಲ್ ಆಫೀಸರ್3
ಆಪ್ತಲಮಿಕ್ ಅಸಿಸ್ಟೆಂಟ್/ ಫಾರ್ಮಾಸಿಸ್ಟ್ (ಆರ್.ಬಿ.ಎಸ್.ಕೆ)2
ಡಯಟ್ ಕೌನ್ಸಿಲರ್1
ಸಿವಿಲ್ ಇಂಜಿನಿಯರ್1
ಬಯೋ ಮೆಡಿಕಲ್ ಇಂಜಿನಿಯರ್1
ಪಂಚಕರ್ಮ ಥೆರಪಿಸ್ಟ್1
ಮೇಲ್ ಹೆಲ್ತ್ ವರ್ಕರ್ (ಎನ್.ಯು.ಎಚ್.ಎಂ) ಫಾರ್ಮಾಸಿಸ್ಟ್1
ಡೆಂಟಲ್ ಹೈಜನಿಸ್ಟ್1
ಡೆಂಟಲ್ ಟೆಕ್ನಿಷಿಯನ್1
ಆಡಿಯೋಮೆಟ್ರಿಕ್ ಅಸಿಸ್ಟೆಂಟ್1
ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೇರ್ಮೆಂಟ್ ಚಿಲ್ಡ್ರನ್1
ಇ.ಎನ್.ಟಿ ಸ್ಪೆಷಲಿಸ್ಟ್1

ಶೈಕ್ಷಣಿಕ ಅರ್ಹತೆ :
• ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ – ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.

• ಶುಶ್ರೂಷಾಧಿಕಾರಿಗಳು – ಜಿ.ಎನ್.ಎಂ ತರಬೇತಿ ಪಡೆದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.

• ಆಶಾ ಮೇಲ್ವಿಚಾರಕರು – ಜಿ.ಎನ್.ಎಂ/ ಐ.ಎನ್.ಎಂ/ ಬಿ.ಎಸ್ಸಿ (ನರ್ಸಿಂಗ್) ಮಾಡಿರಬೇಕು ಅಥವಾ ಪಬ್ಲಿಕ್ ಹೆಲ್ತ್ ಡಿಪ್ಲೊಮಾ/ ಸೋಷಿಯಲ್ ವರ್ಕ್/ ಸೋಷಿಯಲ್ ಸೈನ್ಸ್ ನಲ್ಲಿ ಪದವಿ/ ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಜ್ಞಾನ ಇರಬೇಕು.

• ಆಯುಷ್ ಮೆಡಿಕಲ್ ಆಫೀಸರ್ – ಬಿಎಎಂಎಸ್/ ಎಂಬಿಬಿಎಸ್ ಮಾಡಿರಬೇಕು.

• ಆಪ್ತಲಮಿಕ್ ಅಸಿಸ್ಟೆಂಟ್/ ಫಾರ್ಮಾಸಿಸ್ಟ್ (ಆರ್.ಬಿ.ಎಸ್.ಕೆ) – 2 ವರ್ಷಗಳ ಆಪ್ಟಿಮೆಟ್ರಿ ಡಿಪ್ಲೊಮಾ ಮಾಡಿರಬೇಕು ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ನೇತ್ರ ಸಹಾಯಕರು (ಆಪ್ತಲಮಿಕ್ ಅಸಿಸ್ಟೆಂಟ್) ಆಗಿ ಎನ್.ಪಿ.ಸಿ.ಬಿ ತರಬೇತಿ ಪಡೆದಿರಬೇಕು. ಫಾರ್ಮಾಸಿಸ್ಟಗಳು ಬಿ-ಫಾರ್ಮ್ ಮಾಡಿರಬೇಕು.

• ಡಯಟ್ ಕೌನ್ಸಿಲರ್ – ಬಿ.ಎಸ್ಸಿ/ ಬಿ.ಎ ನ್ಯೂಟ್ರಿಷನ್ ಪದವಿ/ ಗೃಹ ವಿಜ್ಞಾನ ಪದವಿ ಮಾಡಿರಬೇಕು.

• ಸಿವಿಲ್ ಇಂಜಿನಿಯರ್ – ಸಿವಿಲ್/ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್ ವಿಷಯದಲ್ಲಿ ಬಿಇ/ ಬಿ.ಟೆಕ್ ಮಾಡಿರಬೇಕು.

• ಬಯೋ ಮೆಡಿಕಲ್ ಇಂಜಿನಿಯರ್ – ಬಯೋ ಮೆಡಿಕಲ್ ಇಂಜಿನಿಯರಿಂಗ್/ ಮೆಡಿಕಲ್ ಎಲೆಕ್ಟ್ರಾನಿಕ್ಸ್/ ಎಂ.ಎಸ್ಸಿ ಇನ್ ಬಯೋ ಮೆಡಿಕಲ್ ಇನ್ಸ್ಟ್ರುಮೆಂಟೇಷನ್ ವಿಷಯದಲ್ಲಿ ಬಿಇ/ ಬಿ.ಟೆಕ್ ಮಾಡಿರಬೇಕು.

• ಪಂಚಕರ್ಮ ಥೆರಪಿಸ್ಟ್ – ಬಿ.ಎಸ್ಸಿ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ), ಅಥವಾ ಮಸ್ಸಾಜಿಸ್ಟ್ ತರಬೇತಿ ಪಡೆದಿರಬೇಕು. ಜನರಲ್ ನರ್ಸಿಂಗ್ ಕೋರ್ಸ್/ ಡಿಪ್ಲೊಮಾ ನರ್ಸಿಂಗ್/ ಬಿ.ಎಸ್ಸಿ ನರ್ಸಿಂಗ್ ಮಾಡಿರಬೇಕು.

• ಮೇಲ್ ಹೆಲ್ತ್ ವರ್ಕರ್ (ಎನ್.ಯು.ಎಚ್.ಎಂ) ಫಾರ್ಮಾಸಿಸ್ಟ್ – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತರಬೇತಿ ಪಡೆದಿರಬೇಕು. 2 ಅಥವಾ 3 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಹೊಂದಿರಬೇಕು.

• ಡೆಂಟಲ್ ಹೈಜನಿಸ್ಟ್ – ಪಿಯುಸಿ ಸೈನ್ಸ್ ಮತ್ತು ಡೆಂಟಲ್ ಹೈಜನಿಸ್ಟ್ ನಲ್ಲಿ ಡಿಪ್ಲೊಮಾ ಮಾಡಿರಬೇಕು.

• ಡೆಂಟಲ್ ಟೆಕ್ನಿಷಿಯನ್ – ಪಿಯುಸಿ ಸೈನ್ಸ್, ಡೆಂಟಲ್ ಟೆಕ್ನಿಷಿಯನ್ ನಲ್ಲಿ ಡಿಪ್ಲೊಮಾ ಮಾಡಿರಬೇಕು.

• ಆಡಿಯೋಮೆಟ್ರಿಕ್ ಅಸಿಸ್ಟೆಂಟ್ – ಹಿಯರಿಂಗ್ ಲಾಂಗ್ವೇಜ್ (ಕೇಳುವ ಭಾಷೆ) ಮತ್ತು ಸ್ಪಿಚ್ ನಲ್ಲಿ (ಡಿ.ಎಚ್.ಎಲ್.ಎಸ್) ಒಂದು ವರ್ಷದ ಡಿಪ್ಲೊಮಾ ಮಾಡಿರಬೇಕು.

• ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೇರ್ಮೆಂಟ್ ಚಿಲ್ಡ್ರನ್ – ಯಂಗ್ ಡಫ್ ಅಂಡ್ ಹಿಯರಿಂಗ್ ಹ್ಯಾಂಡಿಕ್ಯಾಪ್ಡ್ (ಯುವ ಕಿವುಡು ಮತ್ತು ಶ್ರವಣ ವಿಕಲಚೇತನರಿಗೆ ಡಿಟಿಯುಡಿಎಚ್) ತರಬೇತಿ ನೀಡುವಲ್ಲಿ ಡಿಪ್ಲೊಮಾ ಮಾಡಿರಬೇಕು.

• ಇ.ಎನ್.ಟಿ ಸ್ಪೆಷಲಿಸ್ಟ್ – ಎಂ.ಎಸ್ ಇನ್ ಇ.ಎನ್.ಟಿ/ ಡಿಪ್ಲೊಮಾ ಇನ್ ಇ.ಎನ್.ಟಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರವನ್ನು ಪಡೆದಿರಬೇಕು.

ಉದ್ಯೋಗ ಮಾಹಿತಿ : ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2022

ಅರ್ಜಿ ಸಲ್ಲಿಕೆಯ ವಿಧಾನ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅಥವಾ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಬಿ ಬ್ಲಾಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ – 581110

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 07, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 17, 2022

DHFWS Haveri Recruitment 2022 : Important Links

NOTIFICATIONCLICK HERE
Telegram Join Link Click Here

ಹೆಚ್ಚಿನ ಮಾಹಿತಿಗೆ ಮೊಬೈಲ್ ನಂಬರ್ 9449843198 ಸಂಪರ್ಕಿಸಬಹುದು ಅಥವಾ ಕಚೇರಿ ಅವಧಿಯಲ್ಲಿ ಹಾವೇರಿಯ ಜಿಲ್ಲಾಡಳಿತ ಭವನ ದೇವಗಿರಿ (ಆರೋಗ್ಯ ಇಲಾಖೆ) ಜಿಲ್ಲಾ ಯೋಜನಾ ನಿರ್ವಹಣಾ ಘಟಕಕ್ಕೆ ಭೇಟಿ ನೀಡಬಹುದು.

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment