DWCD Karnataka Recruitment 2024 : ಕೇಂದ್ರ ಪುರಸ್ಕೃತ ಮಿಷನ್ ಶಕ್ತಿ ಯೋಜನೆಯಡಿ ರಾಜ್ಯ ಮಹಿಳಾ ಸಬಲೀಕರಣ ಘಟಕದ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ವೇತನ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DWCD Karnataka Recruitment 2024 : Details of Vacancies
ಹುದ್ದೆ : ಸ್ಟೇಟ್ ಮಿಷನ್ ಕೋಆರ್ಡಿನೇಟರ್, ಜೆಂಡರ್ ಸ್ಪೆಷಲಿಸ್ಟ್, ಪಿಎಂಎಂವಿವೈಯ್ ಸ್ಟೇಟ್ ಕೋಆರ್ಡಿನೇಟರ್, ರಿಸರ್ಚ್ & ಟ್ರೈನಿಂಗ್ ಸ್ಪೆಷಲಿಸ್ಟ್, ಅಕೌಂಟ್ಸ್ ಅಸಿಸ್ಟಂಟ್, ಆಫೀಸ್ ಅಸಿಸ್ಟಂಟ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 06 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಸ್ಟೇಟ್ ಮಿಷನ್ ಕೋಆರ್ಡಿನೇಟರ್ | 1 | 60,000 |
ಜೆಂಡರ್ ಸ್ಪೆಷಲಿಸ್ಟ್ | 1 | 45,000 |
ಪಿಎಂಎಂವಿವೈಯ್ ಸ್ಟೇಟ್ ಕೋಆರ್ಡಿನೇಟರ್ | 1 | 45,000 |
ರಿಸರ್ಚ್ & ಟ್ರೈನಿಂಗ್ ಸ್ಪೆಷಲಿಸ್ಟ್ | 1 | 35,000 |
ಅಕೌಂಟ್ಸ್ ಅಸಿಸ್ಟಂಟ್ | 1 | 25,000 |
ಆಫೀಸ್ ಅಸಿಸ್ಟಂಟ್ | 1 | 25,000 |
ಶೈಕ್ಷಣಿಕ ಅರ್ಹತೆ :
ಸ್ಟೇಟ್ ಮಿಷನ್ ಕೋಆರ್ಡಿನೇಟರ್, ಪಿಎಂಎಂವಿವೈಯ್ ಸ್ಟೇಟ್ ಕೋಆರ್ಡಿನೇಟರ್ – ಸೋಷಿಯಲ್ ಸೈನ್ಸ್/ ಲೈಪ್ ಸೈನ್ಸ್/ ನ್ಯೂಟ್ರಿಷನ್/ ಮೆಡಿಸಿನ್/ ಹೆಲ್ತ್ ಮ್ಯಾನೇಜ್ಮೆಂಟ್/ ಸೋಷಿಯಲ್ ವರ್ಕ್/ ರೂರಲ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಜೆಂಡರ್ ಸ್ಪೆಷಲಿಸ್ಟ್ – ಸೋಷಿಯಲ್ ವರ್ಕ್/ ಇತರೆ ಸೋಷಿಯಲ್ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
ರಿಸರ್ಚ್ & ಟ್ರೈನಿಂಗ್ ಸ್ಪೆಷಲಿಸ್ಟ್ – ಸೋಷಿಯಲ್ ವರ್ಕ್/ ಇತರೆ ಸೋಷಿಯಲ್ ವಿಭಾಗಗಳಲ್ಲಿ ಪದವಿ ಹೊಂದಿರಬೇಕು.
ಅಕೌಂಟ್ಸ್ ಅಸಿಸ್ಟಂಟ್ – ಪದವಿ/ ಡಿಪ್ಲೊಮಾ ಇನ್ ಅಕೌಂಟ್ಸ್.
ಆಫೀಸ್ ಅಸಿಸ್ಟಂಟ್ – ಪದವಿ ಜೊತೆಗೆ ಡಿಪ್ಲೊಮಾ ಇನ್ ಕಂಪ್ಯೂಟರ್ಸ್/ ಐಟಿ.
ಉದ್ಯೋಗ ಮಾಹಿತಿ : ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ನೇಮಕಾತಿ 2024
ಅನುಭವ : ಹುದ್ದೆಗೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 45 ಮೀರಿರಬಾರದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ) ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 3ನೇ ಮಹಡಿ, ಪಿಡಬ್ಲ್ಯೂಡಿ ಕಟ್ಟಡದ ಆವರಣ, ಆನಂದರಾವ್ ವೃತ್ತ, ಬೆಂಗಳೂರು – 560009
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜನವರಿ 24, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 07, 2024
DWCD Karnataka Recruitment 2024 : Important Links
NOTIFICATION & APPLICATION FORM | CLICK HERE |
Telegram Join Link | Click Here |
WhatsApp Channel Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.