ಐಬಿಪಿಎಸ್ ನಿಂದ ಗ್ರಾಮೀಣ ಬ್ಯಾಂಕುಗಳಲ್ಲಿ ನೇಮಕಾತಿ 2024 – IBPS RRB Recruitment 2024

IBPS RRB Recruitment 2024 : ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ ವಿವಿಧ ಗ್ರಾಮೀಣ ಬ್ಯಾಂಕುಗಳಲ್ಲಿ ಅಗತ್ಯವಿರುವ ಆಫೀಸರ್ಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

IBPS RRB Recruitment 2024 : Details of Vacancies

ಹುದ್ದೆ : ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್), ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್), ಆಫೀಸರ್ ಸ್ಕೇಲ್ 2 ಜನರಲ್ ಬ್ಯಾಂಕಿಂಗ್ ಆಫೀಸರ್ (ಮ್ಯಾನೇಜರ್), ಆಫೀಸರ್ ಸ್ಕೇಲ್ 2 ಸ್ಪೆಷಲಿಸ್ಟ್ ಆಫೀಸರ್ಸ್ (ಮ್ಯಾನೇಜರ್) (ಐಟಿ ಆಫೀಸರ್, ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಆಫೀಸರ್, ಟ್ರೆಜರಿ ಆಫೀಸರ್, ಮಾರ್ಕೆಟಿಂಗ್ ಆಫೀಸರ್, ಅಗ್ರಿಕಲ್ಚರ್ ಆಫೀಸರ್), ಆಫೀಸರ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್)

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಗ್ರಾಮೀಣ ಬ್ಯಾಂಕುಗಳಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 9995 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ :
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಆಫೀಸರ್ ಸ್ಕೇಲ್ 2 ಜನರಲ್ ಬ್ಯಾಂಕಿಂಗ್ ಆಫೀಸರ್ (ಮ್ಯಾನೇಜರ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿಯಲ್ಲಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ 2 ವರ್ಷ ಆಫೀಸರ್ ಆಗಿ ಅನುಭವ ಹೊಂದಿರಬೇಕು.

ಆಫೀಸರ್ ಸ್ಕೇಲ್ 2 ಸ್ಪೆಷಲಿಸ್ಟ್ ಆಫೀಸರ್ಸ್ (ಮ್ಯಾನೇಜರ್)
ಐಟಿ ಆಫೀಸರ್ –
ಇಲೆಕ್ಟ್ರಾನಿಕ್ಸ್/ ಕಮ್ಯುನಿಕೇಷನ್/ ಕಂಪ್ಯೂಟರ್ ಸೈನ್ಸ್/ ಐಟಿ ವಿಷಯದಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.

ಚಾರ್ಟರ್ಡ್ ಅಕೌಂಟೆಂಟ್ – ಸಿಎ ಅರ್ಹತೆ ಹೊಂದಿರಬೇಕು. ಸಿಎ ಆಗಿ 1 ವರ್ಷದ ಅನುಭವ ಹೊಂದಿರಬೇಕು.

ಕಾನೂನು ಆಫೀಸರ್ – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಕಾನೂನು ಪದವಿ ಹೊಂದಿರಬೇಕು. 2 ವರ್ಷ ಅನುಭವ ಹೊಂದಿರಬೇಕು.

ಟ್ರೆಜರಿ ಆಫೀಸರ್ – ಸಿಎ ಅಥವಾ ಎಂಬಿಎ ಫೈನಾನ್ಸ್ ಅರ್ಹತೆ ಹೊಂದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.

ಮಾರ್ಕೆಟಿಂಗ್ ಆಫೀಸರ್ – ಎಂಬಿಎ ಮಾರ್ಕೆಟಿಂಗ್ ಅರ್ಹತೆ ಹೊಂದಿರಬೇಕು. 1 ವರ್ಷದ ಅನುಭವ ಹೊಂದಿರಬೇಕು.

ಅಗ್ರಿಕಲ್ಚರ್ ಆಫೀಸರ್ – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಅಗ್ರಿಕಲ್ಚರ್/ ಹೊರ್ಟಿಕಲ್ಚರ್/ ಡೈರಿ/ ಅನಿಮಲ್ ಹಸ್ಬಂಡರಿ/ ಫಾರೆಸ್ಟ್ರಿ/ ವೆಟರ್ನರಿ ಸೈನ್ಸ್/ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಅರ್ಹತೆ ಹೊಂದಿರಬೇಕು. 2 ವರ್ಷಗಳ ಅನುಭವ ಹೊಂದಿರಬೇಕು.

ಆಫೀಸರ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್) – ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿಯಲ್ಲಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ ಸರಾಸರಿ ಶೇಕಡಾ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.

ಉದ್ಯೋಗ ಮಾಹಿತಿ : ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ 2024

ವಯೋಮಾನ : ದಿನಾಂಕ 01/06/2024ಕ್ಕೆ

ಹುದ್ದೆವಯೋಮಾನ
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್)18-28 ವರ್ಷ
ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್)18-30 ವರ್ಷ
ಆಫೀಸರ್ ಸ್ಕೇಲ್ 2 (ಮ್ಯಾನೇಜರ್)21-32 ವರ್ಷ
ಆಫೀಸರ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್)21-40 ವರ್ಷ

ವಯೋಮಿತಿ ಸಡಿಲಿಕೆ :
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
• ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷ

ಆಯ್ಕೆ ವಿಧಾನ : ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಅರ್ಜಿ ಶುಲ್ಕ :
• ಪ.ಜಾತಿ/ ಪ.ಪಂ./ ಪಿಡಬ್ಲ್ಯೂಡಿ/ಮಾಜಿ ಸೈನಿಕ ಅಭ್ಯರ್ಥಿಗಳು – ರೂ. 175
• ಉಳಿದ ಅಭ್ಯರ್ಥಿಗಳು – ರೂ. 850

ಶುಲ್ಕ ಪಾವತಿಸುವ ವಿಧಾನ : ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 07, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 27, 2024
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜೂನ್ 27, 2024

IBPS RRB Recruitment 2024 : Important Links

NOTIFICATIONCLICK HERE
APPLY ONLINECLICK HERE
Telegram Join LinkClick Here
WhatsApp Group LinkClick Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment