Karnataka Gram Panchayat Library Recruitment 2022 : ಬಾಗಲಕೋಟೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯ್ತಿ ಮತ್ತು ಪಟ್ಟಣ ಪಂಚಾಯ್ತಿ ಗ್ರಂಥಾಲಯದಲ್ಲಿ ಖಾಲಿ ಇರುವ ಹುದ್ದೆಯ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
Karnataka Gram Panchayat Library Recruitment 2022 : Details of Vacancies
ಹುದ್ದೆ : ಗ್ರಂಥಾಲಯ ಮೇಲ್ವಿಚಾರಕರು
ಕರ್ತವ್ಯ ಸ್ಥಳ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸಿದ್ದಾಪುರ ಗ್ರಾ.ಪಂ ಗ್ರಂಥಾಲಯ, ಮುಧೋಳ ತಾಲೂಕಿನ ಲೋಕಾಪುರ ಪಟ್ಟಣ ಪಂಚಾಯಿತಿ ಗ್ರಂಥಾಲಯ, ಬಾದಾಮಿ ತಾಲೂಕಿನ ನೀರಲಕೇರಿ ಗ್ರಾ.ಪಂ ಗ್ರಂಥಾಲಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮ ಪಂಚಾಯಿತಿ ಗ್ರಂಥಾಲಯ, ಕಂಬಳೀಪುರ ಗ್ರಾಮ ಪಂಚಾಯಿತಿ ಗ್ರಂಥಾಲಯ, ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿ ಹುದ್ದೆಗಳು ಖಾಲಿ ಇದೆ.
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಾನ ಪೂರೈಸಿರಬೇಕು.
ಆಯ್ಕೆ ವಿಧಾನ : ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಉದ್ಯೋಗ ಮಾಹಿತಿ : ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೇಮಕಾತಿ 2022
ಗ್ರಾಮ ಪಂಚಾಯ್ತಿ ಮತ್ತು ಪಟ್ಟಣ ಪಂಚಾಯ್ತಿ ಗ್ರಂಥಾಲಯದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕಛೇರಿಗೆ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಹುದ್ದೆ ಖಾಲಿಯಿರುವ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಕಛೇರಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದು, ನಂತರ ಅರ್ಜಿ ನಮೂನೆಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಹುದ್ದೆ ಖಾಲಿಯಿರುವ ಆಯಾ ಗ್ರಾಮ ಪಂಚಾಯ್ತಿ ಮತ್ತು ಪಟ್ಟಣ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು : ಆಧಾರ್ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಮೀಸಲಾತಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ, ಸ್ಥಳೀಯ ವಾಸಸ್ಥಳ ದೃಢೀಕರಣ ಪತ್ರ.
ಅರ್ಜಿ ಶುಲ್ಕ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಇತರೆ ಮಾಹಿತಿ : ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ನಿಗದಿಪಡಿಸಿದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
(ಬಾಗಲಕೋಟೆ) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 30, 2022
(ಬೆಂ. ಗ್ರಾಮಾಂತರ) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 06, 2022
Karnataka Gram Panchayat Library Recruitment 2022 : Important Links
ಬಾಗಲಕೋಟೆ (ಪ್ರಕಟಣೆ) | Click Here |
ಬೆಂ. ಗ್ರಾಮಾಂತರ (ಪ್ರಕಟಣೆ) | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.