ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2023 – Karnataka Gruha Jyothi Scheme 2023

Karnataka Gruha Jyothi Scheme 2023 : ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ರಾಜ್ಯದ ನಾಗರೀಕರಿಗೆ ಒದಗಿಸಲು ಕರ್ನಾಟಕ ಸರ್ಕಾರವು “ಗೃಹ ಜ್ಯೋತಿ” ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಯೋಜನೆಯ ವಿವರ, ಷರತ್ತುಗಳು, ಅರ್ಜಿ ಸಲ್ಲಿಸಲು ಅವವಶ್ಯವಿರುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Karnataka Gruha Jyothi Scheme 2023 : Details of Scheme

ಗೃಹ ಜ್ಯೋತಿ : ‘ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇಕಡ 10 ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಈ ಯೋಜನೆಯನ್ನು ಜಾರಿಗೆ ತಂದಿದೆ.

ಗೃಹ ಜ್ಯೋತಿ ಯೋಜನೆಗೆ ಷರತ್ತುಗಳು :
• ಈ ಯೋಜನೆಯು ಗೃಹ ಬಳಕೆಯ ವಿದ್ಯುತ್‌ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
• ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
• ಪ್ರತಿ ಫಲಾನುಭವಿಯು ತನ್ನ Customer ID / Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು.

ಗೃಹ ಜ್ಯೋತಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು :
• ವಿದ್ಯುತ್ ಬಿಲ್
• ಆಧಾರ್ ಸಂಖ್ಯೆ
• ದೂರವಾಣಿ ಸಂಖ್ಯೆ

Karnataka Gruha Jyothi Scheme 2023 : How to Apply Online

ಗೃಹ ಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಕೆ ವಿಧಾನ : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ (ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌) ರಾಜ್ಯಾದ್ಯಂತ ಜೂನ್ 18 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹಂತ 1 : ಸೇವಾ ಸಿಂಧು ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2023 – Karnataka Gruha Jyothi Scheme 2023

ಹಂತ 2 : ಅಪ್ಲಿಕೇಷನ್ ನಲ್ಲಿ ಕೇಳಿರುವ ಮಾಹಿತಿಗಳನ್ನು ಈ ಕೆಳಗೆ ತಿಳಿಸಿರುವಂತೆ ಭರ್ತಿ ಮಾಡಿ.
• ಆದ್ಯತೆಯ ಭಾಷೆ – ಇಂಗ್ಲೀಷ್/ ಕನ್ನಡ ಆಯ್ಕೆಯಲ್ಲಿ ಕನ್ನಡ ಆಯ್ಕೆಯನ್ನು ಕ್ಲಿಕ್ ಮಾಡಿ. (ಕನ್ನಡ ಭಾಷೆ ಕ್ಲಿಕ್ ಮಾಡುವುದರಿಂದ ಅಪ್ಲಿಕೇಷನ್ ನಲ್ಲಿ ಕೇಳಿರುವ ಮಾಹಿತಿ ನಿಮಗೆ ಕನ್ನಡ ಭಾಷೆಯಲ್ಲಿ ತೋರಿಸುತ್ತದೆ)

• ಎಸ್ಕಾಂ ಹೆಸರು – ಎಸ್ಕಾಂ ಹೆಸರು ಸೆಲೆಕ್ಟ್ ಮಾಡಿ. (ಹೆಸ್ಕಾಂ/ಜೆಸ್ಕಾಂ/ಮೆಸ್ಕಾಂ…..)

• ಖಾತೆ ಸಂಖ್ಯೆ/ ಸಂಪರ್ಕ ಸಂಖ್ಯೆ – ನಿಮ್ಮ ವಿದ್ಯುತ್ ಬಿಲ್ ನಲ್ಲಿ ಇರುವ ಖಾತೆ ಸಂಖ್ಯೆ/ ಸಂಪರ್ಕ ಸಂಖ್ಯೆ ನಮೂದಿಸಿ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2023 – Karnataka Gruha Jyothi Scheme 2023

• ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ – ಖಾತೆ ಸಂಖ್ಯೆ/ ಸಂಪರ್ಕ ಸಂಖ್ಯೆ ನಮೂದಿಸಿದ ನಂತರ ಖಾತೆದಾರರ ಹೆಸರು ಬಾಕ್ಸ್ ನಲ್ಲಿ ತೋರಿಸುತ್ತದೆ. ಖಾತೆದಾರರ ಹೆಸರು ಟೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ.

• ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ – ಖಾತೆ ಸಂಖ್ಯೆ/ ಸಂಪರ್ಕ ಸಂಖ್ಯೆ ನಮೂದಿಸಿದ ನಂತರ ಖಾತೆದಾರರ ವಿಳಾಸ ಕೂಡ ಬಾಕ್ಸ್ ನಲ್ಲಿ ತೋರಿಸುತ್ತದೆ. ಖಾತೆದಾರರ ವಿಳಾಸ ಟೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ.

• ನಿವಾಸಿ ವಿಧ – ಇದರಲ್ಲಿ ಮಾಲೀಕ/ ಬಾಡಿಗೆದಾರ ಮಾಹಿತಿ ಕ್ಲಿಕ್ ಮಾಡಿ. ಗ್ರಾಹಕ ಮಾಲೀಕನಾಗಿದ್ದರೆ ಮಾಲೀಕ ಎಂದು ಕ್ಲಿಕ್ ಮಾಡಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಬಾಡಿಗೆದಾರ ಎಂದು ಕ್ಲಿಕ್ ಮಾಡಿ.

• ಆಧಾರ್ ಸಂಖ್ಯೆ – ಗ್ರಾಹಕರು ತಮ್ಮ ಆಧಾರ್ ಸಂಖ್ಯೆ ನಮೂದಿಸಬೇಕು.

• ಅರ್ಜಿದಾರರ ಹೆಸರು – ಆಧಾರ್ ಸಂಖ್ಯೆ ನಮೂದಿಸಿದ ನಂತರ ಅರ್ಜಿದಾರರ ಹೆಸರು ಬಾಕ್ಸ್ ನಲ್ಲಿ ತೋರಿಸುತ್ತದೆ. ಟೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ.

• ಸಂವಹನಕ್ಕಾಗಿ ದೂರವಾಣಿ ಸಂಖ್ಯೆ – ಈ ಮಾಹಿತಿಯಲ್ಲಿ ಗ್ರಾಹಕರ ದೂರವಾಣಿ ಸಂಖ್ಯೆ ನಮೂದಿಸಬೇಕು.

ಹಂತ 3 : ದೂರವಾಣಿ ಸಂಖ್ಯೆ ನಮೂದಿಸಿದ ನಂತರ ಈ ದೂರವಾಣಿ ಸಂಖ್ಯೆಗೆ OTP ಬರುವುದು. ಈ OTP ಅನ್ನು ನಮೂದಿಸಿ Validate ಆಪ್ಷನ್ ಕ್ಲಿಕ್ ಮಾಡಿ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2023 – Karnataka Gruha Jyothi Scheme 2023

ಹಂತ 4 : ಎಲ್ಲಾ ಮಾಹಿತಿ ಭರ್ತಿ ಮಾಡಿದ ನಂತರ ಅಪ್ಲಿಕೇಷನ್ ನಲ್ಲಿ ನೀಡಿರುವ Declaration/ ಘೋಷಣೆಯನ್ನು ಪೂರ್ತಿ ಓದಿ I Agree ಮೇಲೆ ಕ್ಲಿಕ್ ಮಾಡಿ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2023 – Karnataka Gruha Jyothi Scheme 2023

ಹಂತ 5 : ಈ ಅಪ್ಲಿಕೇಷನ್ ಕೊನೆಯಲ್ಲಿ word verification ಟೈಪ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2023 – Karnataka Gruha Jyothi Scheme 2023

ಹಂತ 6 : ಅಪ್ಲಿಕೇಷನ್ Submit ಮಾಡಿದ ಮೇಲೆ ನೀವು ತುಂಬಿರುವ ಮಾಹಿತಿ ಒಳಗೊಂಡಿರುವ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಈ ಪೇಜ್ ನಲ್ಲಿ ಬಂದಿರುವ ಮಾಹಿತಿಯನ್ನು ಸರಿಯಾಗಿ ಗಮನಿಸಿ ಏನಾದರೂ ತಪ್ಪಾಗಿದ್ದರೆ Edit ಬಟನ್ ಕ್ಲಿಕ್ ಮಾಡಿ ಸರಿಪಡಿಸಿಕೊಳ್ಳಿ. ನಂತರ Submit ಮೇಲೆ ಕ್ಲಿಕ್ ಮಾಡಿ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2023 – Karnataka Gruha Jyothi Scheme 2023

ಹಂತ 7 : ಕೊನೆಯದಾಗಿ, ಅರ್ಜಿ ಸಲ್ಲಿಸಿದ ಬಗ್ಗೆ ನಿಮಗೆ ಸ್ವೀಕೃತಿ ಪತ್ರ ತೆರೆದುಕೊಳ್ಳುತ್ತದೆ. Export to PDF ಕ್ಲಿಕ್ ಮಾಡಿ ಪೈಲ್ ಸೇವ್ ಮಾಡಿಕೊಳ್ಳಿ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2023 – Karnataka Gruha Jyothi Scheme 2023

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಜೂನ್ 18, 2023

Karnataka Gruha Jyothi Scheme 2023 : Important Links

APPLY NOWCLICK HERE
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment