ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನೇಮಕಾತಿ 2024 – KEA GTTC Recruitment 2024

KEA GTTC Recruitment 2024 : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KEA ಈಗಾಗಲೇ ಹೊರಡಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ. ಹೀಗಾಗಿ ವಯೋಮಿತಿ ಸಡಿಲಿಕೆ ಅನ್ವಯಿಸುವಂತಹ ಅಭ್ಯರ್ಥಿಗಳಿಗೆ ಹಾಗೂ ಈ ಹಿಂದೆ ತಾಂತ್ರಿಕ & ಇತರೆ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೂ ಕೂಡ ಅರ್ಜಿ ಸಲ್ಲಿಸಲು ಮತ್ತೋಮ್ಮೆ ಕಾಲಾವಕಾಶ ನೀಡಲಾಗಿದೆ.

KEA GTTC Recruitment 2024 : Details of Vacancies

ಹುದ್ದೆ : ಲೆಕ್ಚರರ್ (ಇಂಜಿನಿಯರಿಂಗ್), ಇಂಜಿನಿಯರ್, ಆಫೀಸರ್ ಗ್ರೇಡ್ 2, ಫೋರ್ಮನ್ ಗ್ರೇಡ್ 2, ಇನ್‌ಸ್ಟ್ರಕ್ಟರ್ ಗ್ರೇಡ್ 1, ಟೆಕ್ನಿಷಿಯನ್ ಗ್ರೇಡ್ 2, ಇನ್‌ಸ್ಟ್ರಕ್ಟರ್ ಗ್ರೇಡ್ 2, ಟೆಕ್ನಿಷಿಯನ್ ಗ್ರೇಡ್ 3, ಟೆಕ್ನಿಷಿಯನ್ ಗ್ರೇಡ್ 4, ಅಸಿಸ್ಟೆಂಟ್ ಗ್ರೇಡ್ 2

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 74+24 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಲೆಕ್ಚರರ್ (ಇಂಜಿನಿಯರಿಂಗ್)18+1245300-88300
ಇಂಜಿನಿಯರ್245300-88300
ಆಫೀಸರ್ ಗ್ರೇಡ್ 2240900-78200
ಫೋರ್ಮನ್ ಗ್ರೇಡ್ 2437900-70850
ಇನ್‌ಸ್ಟ್ರಕ್ಟರ್ ಗ್ರೇಡ್ 17+830350-58250
ಟೆಕ್ನಿಷಿಯನ್ ಗ್ರೇಡ್ 27+130350-58250
ಇನ್‌ಸ್ಟ್ರಕ್ಟರ್ ಗ್ರೇಡ್ 2527650-52650
ಟೆಕ್ನಿಷಿಯನ್ ಗ್ರೇಡ್ 320+327650-52650
ಟೆಕ್ನಿಷಿಯನ್ ಗ್ರೇಡ್ 4423500-47650
ಅಸಿಸ್ಟೆಂಟ್ ಗ್ರೇಡ್ 2527650-52650

ಶೈಕ್ಷಣಿಕ ಅರ್ಹತೆ :
ಲೆಕ್ಚರರ್ (ಇಂಜಿನಿಯರಿಂಗ್) – ಪ್ರಥಮ ದರ್ಜೆ ಮಾಸ್ಟರ್ಸ್ ಡಿಗ್ರಿ ಇನ್ ಮ್ಯಾಕೆಟ್ರಾನಿಕ್ಸ ಇಂಜಿನಿಯರಿಂಗ್/ ಟೆಕ್ನಾಲಜಿ, ಪ್ರಥಮ ದರ್ಜೆ ಮಾಸ್ಟರ್ಸ್ ಡಿಗ್ರಿ ಇನ್ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್/ ಟೆಕ್ನಾಲಜಿ, ಪ್ರಥಮ ದರ್ಜೆ ಮಾಸ್ಟರ್ಸ್ ಡಿಗ್ರಿ ಇನ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ ಟೆಕ್ನಾಲಜಿ.

ಇಂಜಿನಿಯರ್ – ಮೆಕ್ಯಾನಿಕಲ್ ಇಂಜಿನಿಯರಿಂಗ್/ ಪ್ರೊಡಕ್ಷನ್ಸ್ ಇಂಜಿನಿಯರಿಂಗ್ ಪದವಿ.

ಆಫೀಸರ್ ಗ್ರೇಡ್ 2 – ಆರ್ಟ್ಸ್/ ಸೈನ್ಸ್/ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ.

ಫೋರ್ಮನ್ ಗ್ರೇಡ್ 2 – ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್/ ಟೂಲ್ & ಡೈ ಮೇಕಿಂಗ್.

ಇನ್‌ಸ್ಟ್ರಕ್ಟರ್ ಗ್ರೇಡ್ 1 & ಟೆಕ್ನಿಷಿಯನ್ ಗ್ರೇಡ್ 2 – ಡಿಪ್ಲೊಮಾ ಇನ್ ಟೂಲ್ & ಡೈ ಮೇಕಿಂಗ್.

ಇನ್‌ಸ್ಟ್ರಕ್ಟರ್ ಗ್ರೇಡ್ 2 – ಡಿಪ್ಲೊಮಾ ಇನ್ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್.

ಟೆಕ್ನಿಷಿಯನ್ ಗ್ರೇಡ್ 3 – ಡಿಪ್ಲೊಮಾ ಇನ್ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್/ ಡಿಪ್ಲೊಮಾ ಇನ್ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಡಿಪ್ಲೊಮಾ ಇನ್ ಮೆಟ್ರಾನಿಕ್ಸ್/ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್.

ಟೆಕ್ನಿಷಿಯನ್ ಗ್ರೇಡ್ 4 – 2 ವರ್ಷದ ಐಟಿಐ ಇಲೆಕ್ಟ್ರಿಕಲ್ ಟ್ರೇಡ್ ಸರ್ಟಿಫಿಕೇಟ್/ 2 ವರ್ಷದ ಐಟಿಐ ಮೆಕ್ಯಾನಿಕ್ ಮಶಿನ್ ಟೂಲ್ ಮೆಂಟೆನನ್ಸ್ ಟ್ರೇಡ್ ಸರ್ಟಿಫಿಕೇಟ್.

ಅಸಿಸ್ಟೆಂಟ್ ಗ್ರೇಡ್ 2 – ಆರ್ಟ್ಸ್/ ಕಾಮರ್ಸ್/ ಸೈನ್ಸ್ ಪದವಿ/ ಡಿಪ್ಲೊಮಾ ಇನ್ ಸೆಕ್ರೆಟರಿಯಲ್ ಪ್ರಾಕ್ಟಿಸ್/ ಮಾಡರ್ನ್ ಆಫೀಸ್ ಪ್ರಾಕ್ಟೀಸ್/ ಕಮರ್ಷಿಯಲ್ ಪ್ರಾಕ್ಟಿಸ್/ ಬಿಜಿನೆಸ್ ಮ್ಯಾನೇಜ್ಮೆಂಟ್.

ಉದ್ಯೋಗ ಮಾಹಿತಿ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ನೇಮಕಾತಿ

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಲೆಕ್ಚರರ್ (ಇಂಜಿನಿಯರಿಂಗ್), ಇನ್‌ಸ್ಪೆಕ್ಟರ್ ಗ್ರೇಡ್ 1, ಟೆಕ್ನಿಷಿಯನ್ ಗ್ರೇಡ್ 2, ಇನ್‌ಸ್ಪೆಕ್ಟರ್ ಗ್ರೇಡ್ 2, ಟೆಕ್ನಿಷಿಯನ್ ಗ್ರೇಡ್ 4, ಅಸಿಸ್ಟೆಂಟ್ ಗ್ರೇಡ್ 2 ಹುದ್ದೆಗೆ ಕನಿಷ್ಠ 18 ವರ್ಷ ಹಾಗೂ ಇಂಜಿನಿಯರ್, ಆಫೀಸರ್ ಗ್ರೇಡ್ 2, ಫೋರ್ಮನ್ ಗ್ರೇಡ್ 2, ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗೆ ಕನಿಷ್ಠ 21 ವರ್ಷ ನಿಗದಿಪಡಿಸಲಾಗಿದೆ.
• ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – ಗರಿಷ್ಠ 27 ವರ್ಷ 30 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 30 ವರ್ಷ 33 ವರ್ಷ
• ಎಸ್ಸಿ, ಎಸ್ಟಿ, ಪ್ರವರ್ಗ 1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಗರಿಷ್ಠ 32 ವರ್ಷ 35 ವರ್ಷ

ಆಯ್ಕೆ ವಿಧಾನ : ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಪರೀಕ್ಷಾ ಕೇಂದ್ರಗಳು : ಬೆಂಗಳೂರು ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುವುದು.

ಉದ್ಯೋಗ ಮಾಹಿತಿ : ಕಂದಾಯ ಇಲಾಖೆಯಲ್ಲಿ ಖಾಲಿಯಿರುವ ವಿಲೇಜ್ ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :
• ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 750
• ಎಸ್ಸಿ, ಎಸ್ಟಿ, ಪ್ರ 1, ಮಾಜಿ ಸೈನಿಕ, ಅಭ್ಯರ್ಥಿಗಳು – ರೂ. 500
• ವಿಕಲಚೇತನ ಅಭ್ಯರ್ಥಿಗಳು – ರೂ. 250

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಏಪ್ರಿಲ್ 19, 2024 ಮೇ 16, 2024 ಸೆಪ್ಟೆಂಬರ್ 19, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 18, 2024 ಜೂನ್ 15, 2024 ಜೂನ್ 29, 2024 ಸೆಪ್ಟೆಂಬರ್ 28, 2024
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಮೇ 19, 2024 ಜೂನ್ 18, 2024 ಜುಲೈ 01, 2024 ಸೆಪ್ಟೆಂಬರ್ 29, 2024

KEA GTTC Recruitment 2024 : Important Links

CORRIGENDUM NOTIFICATION CLICK HERE
Date Extension Notification Click Here
NEW NOTIFICATION CLICK HERE
NOTIFICATIONCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment