KEA MSIL Recruitment 2023 : ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
KEA MSIL Recruitment 2023 : Details of Vacancies
ಹುದ್ದೆ : ಸಹಾಯಕ ವ್ಯವಸ್ಥಾಪಕರು (ಸೇಲ್ಸ್), ಸಹಾಯಕ ವ್ಯವಸ್ಥಾಪಕರು (ಅಕೌಂಟ್ಸ್), ಸಹಾಯಕ ವ್ಯವಸ್ಥಾಪಕರು (ಪರ್ಸನಲ್), ಸಹಾಯಕ ವ್ಯವಸ್ಥಾಪಕರು (ಫಾರ್ಮ), ಸಹಾಯಕ ವ್ಯವಸ್ಥಾಪಕರು (ಟೂರ್ಸ್ & ಟ್ರಾವೆಲ್ಸ್), ಸಹಾಯಕ ವ್ಯವಸ್ಥಾಪಕರು (ಇ.ಡಿ.ಪಿ), ಸೇಲ್ಸ್ ಮೇಲ್ವಿಚಾರಕರು, ಮಾರಾಟ ಪ್ರತಿನಿಧಿ, ಸೇಲ್ಸ್ ಇಂಜಿನಿಯರ್ (ಮೆಕ್ಯಾನಿಕಲ್), ಸೇಲ್ಸ್ ಇಂಜಿನಿಯರ್ (ಎಲೆಕ್ಟ್ರಿಕಲ್), ಸೇಲ್ಸ್ ಇಂಜಿನಿಯರ್ (ಸಿವಿಲ್), ಸೇಲ್ಸ್ ಇಂಜಿನಿಯರ್ (ಇ&ಸಿ), ಲೆಕ್ಕ ಗುಮಾಸ್ತರು, ಗುಮಾಸ್ತರು
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 72 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಸಹಾಯಕ ವ್ಯವಸ್ಥಾಪಕರು (ಸೇಲ್ಸ್) | 14 | 44200-80100 |
ಸಹಾಯಕ ವ್ಯವಸ್ಥಾಪಕರು (ಅಕೌಂಟ್ಸ್) | 4 | 44200-80100 |
ಸಹಾಯಕ ವ್ಯವಸ್ಥಾಪಕರು (ಪರ್ಸನಲ್) | 1 | 44200-80100 |
ಸಹಾಯಕ ವ್ಯವಸ್ಥಾಪಕರು (ಫಾರ್ಮ) | 1 | 44200-80100 |
ಸಹಾಯಕ ವ್ಯವಸ್ಥಾಪಕರು (ಟೂರ್ಸ್ & ಟ್ರಾವೆಲ್ಸ್) | 1 | 44200-80100 |
ಸಹಾಯಕ ವ್ಯವಸ್ಥಾಪಕರು (ಇ.ಡಿ.ಪಿ) | 2 | 44200-80100 |
ಸೇಲ್ಸ್ ಮೇಲ್ವಿಚಾರಕರು | 19 | 35150-64250 |
ಮಾರಾಟ ಪ್ರತಿನಿಧಿ | 6 | 28950-55350 |
ಸೇಲ್ಸ್ ಇಂಜಿನಿಯರ್ (ಮೆಕ್ಯಾನಿಕಲ್) | 1 | 35150-64250 |
ಸೇಲ್ಸ್ ಇಂಜಿನಿಯರ್ (ಎಲೆಕ್ಟ್ರಿಕಲ್) | 1 | 35150-64250 |
ಸೇಲ್ಸ್ ಇಂಜಿನಿಯರ್ (ಸಿವಿಲ್) | 1 | 35150-64250 |
ಸೇಲ್ಸ್ ಇಂಜಿನಿಯರ್ (ಇ&ಸಿ) | 1 | 35150-64250 |
ಲೆಕ್ಕ ಗುಮಾಸ್ತರು | 6 | 25200-50150 |
ಗುಮಾಸ್ತರು | 14 | 21900-43100 |
ಶೈಕ್ಷಣಿಕ ಅರ್ಹತೆ :
• ಸಹಾಯಕ ವ್ಯವಸ್ಥಾಪಕರು (ಸೇಲ್ಸ್) : ಎಂಬಿಎ ಅಥವಾ ತತ್ಸಮಾನ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಇನ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಜೊತೆಗೆ 2 ವರ್ಷಗಳ ಅನುಭವ ಹೊಂದಿರಬೇಕು.
• ಸಹಾಯಕ ವ್ಯವಸ್ಥಾಪಕರು (ಅಕೌಂಟ್ಸ್) : ಸಿಎ/ ಐಸಿಡಬ್ಲ್ಯೂಎ/ ಎಂಬಿಎ (ಫೈನಾನ್ಸ್) ಅರ್ಹತೆ ಹೊಂದಿರಬೇಕು ಅಥವಾ ಇಂಟರ್ ಸಿಎ/ ಐಸಿಡಬ್ಲ್ಯೂಎ/ ಎಂ.ಕಾಂ ಜೊತೆಗೆ 5 ವರ್ಷಗಳ ಅನುಭವ ಹೊಂದಿರಬೇಕು.
• ಸಹಾಯಕ ವ್ಯವಸ್ಥಾಪಕರು (ಪರ್ಸನಲ್) : ಎಂ.ಎಸ್.ಡಬ್ಲ್ಯೂ/ ಎಂಬಿಎ ಅಥವಾ ತತ್ಸಮಾನ ಸ್ನಾತಕೋತ್ತರ ಡಿಪ್ಲೊಮಾ ಇನ್ ಪರ್ಸನಲ್ ಮ್ಯಾನೇಜ್‌ಮೆಂಟ್/ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಜೊತೆಗೆ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
• ಸಹಾಯಕ ವ್ಯವಸ್ಥಾಪಕರು (ಫಾರ್ಮ) : ಎಂ.ಎಸ್ಸಿ ಇನ್ ಕೆಮಿಸ್ಟ್ರಿ ಅಥವಾ ಎಂ.ಫಾರ್ಮಾ/ಡಾಕ್ಟರ್ ಜೊತೆಗೆ 5 ವರ್ಷಗಳ ಅನುಭವ ಹೊಂದಿರಬೇಕು.
• ಸಹಾಯಕ ವ್ಯವಸ್ಥಾಪಕರು (ಟೂರ್ಸ್ & ಟ್ರಾವೆಲ್ಸ್) : ಸ್ನಾತಕೋತ್ತರ ಪದವಿ, ಐಎಟಿಎ ಇನ್ ಟೂರ್ಸ್ & ಟ್ರಾವೆಲ್ಸ್ ಜೊತೆಗೆ 5 ವರ್ಷಗಳ ಅನುಭವ ಹೊಂದಿರಬೇಕು.
• ಸಹಾಯಕ ವ್ಯವಸ್ಥಾಪಕರು (ಇ.ಡಿ.ಪಿ) : ಇಂಜಿನಿಯರಿಂಗ್ ಪದವಿ (ಕಂಪ್ಯೂಟರ್ ಸೈನ್ಸ್)/ ಎಂಸಿಎ ಜೊತೆಗೆ 2 ವರ್ಷಗಳ ಅನುಭವ ಅಥವಾ ಕಂಪ್ಯೂಟರ್ ಸೈನ್ಸ್ ಪದವಿ ಜೊತೆಗೆ 5 ವರ್ಷಗಳ ಅನುಭವ ಹೊಂದಿರಬೇಕು.
• ಸೇಲ್ಸ್ ಮೇಲ್ವಿಚಾರಕರು : ಪದವಿ ಜೊತೆಗೆ ಸೇಲ್ಸ್ ಫೀಲ್ಡ್ ನಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು.
ಉದ್ಯೋಗ ಮಾಹಿತಿ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನೇಮಕಾತಿ 2023
• ಮಾರಾಟ ಪ್ರತಿನಿಧಿ : ಪದವಿ ಜೊತೆಗೆ ಮಾರ್ಕೆಟಿಂಗ್/ ಸೇಲ್ಸ್ ಫೀಲ್ಡ್ ನಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು.
• ಸೇಲ್ಸ್ ಇಂಜಿನಿಯರ್ (ಮೆಕ್ಯಾನಿಕಲ್) : ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಜೊತೆಗೆ ಮಾರ್ಕೆಟಿಂಗ್/ ಸೇಲ್ಸ್ ಫೀಲ್ಡ್ ನಲ್ಲಿ 5 ವರ್ಷಗಳ ಅನುಭವ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರಬೇಕು.
• ಸೇಲ್ಸ್ ಇಂಜಿನಿಯರ್ (ಎಲೆಕ್ಟ್ರಿಕಲ್) : ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಜೊತೆಗೆ ಮಾರ್ಕೆಟಿಂಗ್/ ಸೇಲ್ಸ್ ಫೀಲ್ಡ್ ನಲ್ಲಿ 5 ವರ್ಷಗಳ ಅನುಭವ ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾಗಿರಬೇಕು.
• ಸೇಲ್ಸ್ ಇಂಜಿನಿಯರ್ (ಸಿವಿಲ್) : ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಜೊತೆಗೆ ಮಾರ್ಕೆಟಿಂಗ್/ ಸೇಲ್ಸ್ ಫೀಲ್ಡ್ ನಲ್ಲಿ 5 ವರ್ಷಗಳ ಅನುಭವ ಅಥವಾ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿರಬೇಕು.
• ಸೇಲ್ಸ್ ಇಂಜಿನಿಯರ್ (ಇ&ಸಿ) : ಇಲೆಕ್ಟ್ರಿಕಲ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ಡಿಪ್ಲೊಮಾ ಜೊತೆಗೆ ಮಾರ್ಕೆಟಿಂಗ್/ ಸೇಲ್ಸ್ ಫೀಲ್ಡ್ ನಲ್ಲಿ 5 ವರ್ಷಗಳ ಅನುಭವ ಅಥವಾ ಇಲೆಕ್ಟ್ರಿಕಲ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ಪದವೀಧರರಾಗಿರಬೇಕು.
• ಲೆಕ್ಕ ಗುಮಾಸ್ತರು : ಬಿ.ಕಾಂ/ ಬಿಬಿಎ/ ಸ್ಟ್ಯಾಟಿಸ್ಟಿಕ್ಸ್/ ಅರ್ಥಶಾಸ್ತ್ರ/ ಗಣಿತ ಜೊತೆಗೆ 3 ವರ್ಷಗಳ ಅನುಭವ ಹೊಂದಿರಬೇಕು.
• ಗುಮಾಸ್ತರು : ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.
ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ,
• ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
ಉದ್ಯೋಗ ಮಾಹಿತಿ : ಕರ್ನಾಟಕ ಹೈಕೋರ್ಟ್ ನೇಮಕಾತಿ 2023
ಆಯ್ಕೆ ವಿಧಾನ : ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶ ದಷ್ಟು ¼ ಅಂಕಗಳನ್ನು ಕಳೆಯಲಾಗುವುದು)
ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು : ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ, ಬಿಜಾಪುರ, ಶಿವಮೊಗ್ಗ ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
• ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು – ರೂ. 1000 ರೂ. 500
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 1000 ರೂ. 300
• ಎಸ್ಸಿ, ಎಸ್ಟಿ, ಪ್ರ 1 ಅಭ್ಯರ್ಥಿಗಳು – ರೂ. 750 ರೂ. 200
• ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು – ರೂ. 250 ರೂ. 100
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಕಂಪ್ಯೂಟರೈಸ್ಡ್ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 23, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 22, 2023 ಜುಲೈ 31, 2023 ಆಗಸ್ಟ್ 07, 2023
ಇ-ಅಂಚೆ ಕಛೇರಿಗಳಲ್ಲಿ ಶುಲ್ಕ ಪಾವತಿಸಲು ಪ್ರಾರಂಭದ ದಿನಾಂಕ : ಜೂನ್ 26, 2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜುಲೈ 25, 2023 ಆಗಸ್ಟ್ 03, 2023 ಆಗಸ್ಟ್ 10, 2023 ಆಗಸ್ಟ್ 18, 2023
KEA MSIL Recruitment 2023 : Important Links
NOTIFICATION | CLICK HERE |
Fees Date Extended Notification | Click Here |
New Date Extend Notification | Click Here |
Date Extend Notification | Click Here |
APPLY ONLINE | CLICK HERE |
Telegram Join Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.