KMF Tumkur (TUMUL) Recruitment 2023 : ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಮಲ್ಲಸಂದ್ರ ಇದರಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಪುನಃ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
KMF Tumkur (TUMUL) Recruitment 2023 : Details of Vacancies
ವಿಶೇಷ ಸೂಚನೆ : ಈ ಎಲ್ಲಾ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಆದರೆ ಈಗ ಒಕ್ಕೂಟವು ಈ ಹಿಂದೆ ಹೊರಡಿಸಿದ ಅಧಿಸೂಚನೆಯಲ್ಲಿ ಕೆಲವು ಹುದ್ದೆಗಳ ಮೀಸಲಾತಿಯನ್ನು ರದ್ದುಪಡಿಸಿ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸಿ, ಪುನಃ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಹುದ್ದೆ : ಸಹಾಯಕ ವ್ಯವಸ್ಥಾಪಕರು (ಪ.ವೈ&ಕೃ.ಗ), ಸಹಾಯಕ ವ್ಯವಸ್ಥಾಪಕರು (ಅಭಿಯಂತರ)(ಮೆಕ್ಯಾನಿಕಲ್), ಸಹಾಯಕ ವ್ಯವಸ್ಥಾಪಕರು (ಅಭಿಯಂತರ)(ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್), ಸಹಾಯಕ ವ್ಯವಸ್ಥಾಪಕರು (ಎಫ್&ಎಫ್), ವೈದ್ಯಾಧಿಕಾರಿ, ಆಡಳಿತಾಧಿಕಾರಿ, ಖರೀದಿ/ ಉಗ್ರಾಣಾಧಿಕಾರಿ, ಎಂ.ಐ.ಎಸ್/ ಸಿಸ್ಟಮ್ಸ್ ಅಧಿಕಾರಿ, ಲೆಕ್ಕಾಧಿಕಾರಿ, ಮಾರುಕಟ್ಟೆ ಅಧಿಕಾರಿ, ತಾಂತ್ರಿಕ ಅಧಿಕಾರಿ (ಡಿ.ಟಿ), ತಾಂತ್ರಿಕಾಧಿಕಾರಿ (ಅಭಿಯಂತರ) (ಮೆಕ್ಯಾನಿಕಲ್, ಸಿವಿಲ್ & ಗು.ನಿ), ವಿಸ್ತರಣಾಧಿಕಾರಿ ದರ್ಜೆ-3, ಎಂ.ಐ.ಎಸ್. ಸಹಾಯಕ ದರ್ಜೆ -1, ಆಡಳಿತ ಸಹಾಯಕ ದರ್ಜೆ-2, ಲೆಕ್ಕ ಸಹಾಯಕ ದರ್ಜೆ-2, ಮಾರುಕಟ್ಟೆ ಸಹಾಯಕ ದರ್ಜೆ-2, ಖರೀದಿ ಸಹಾಯಕ ದರ್ಜೆ-2, ಕೆಮಿಸ್ಟ್ ದರ್ಜೆ-2, ಕಿರಿಯ ಸಿಸ್ಟಮ್ ಆಪರೇಟರ್, ಕೋ-ಆರ್ಡಿನೇಟರ್ (ಪ್ರೊಟೆಕ್ಷನ್), ಟೆಲಿಫೋನ್ ಆಪರೇಟರ್, ಕಿರಿಯ ತಾಂತ್ರಿಕ (ಮೆಕ್ಯಾನಿಕಲ್, ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ರೆಪ್ರಿಜಿರೇಷನ್ & ಏರ್ ಕಂಡೀಷನಿಂಗ್, ಫಿಟ್ಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ವೆಲ್ಡರ್, ಬಾಯ್ಲರ್), ಚಾಲಕರು , ಲ್ಯಾಬ್ ಸಹಾಯಕ
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 219 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಸಹಾಯಕ ವ್ಯವಸ್ಥಾಪಕರು | 28 | 52650-97100 |
ವೈದ್ಯಾಧಿಕಾರಿ | 1 | 52650-97100 |
ಆಡಳಿತಾಧಿಕಾರಿ | 1 | 43100-83900 |
ಖರೀದಿ/ ಉಗ್ರಾಣಾಧಿಕಾರಿ | 3 | 43100-83900 |
ಎಂ.ಐ.ಎಸ್/ ಸಿಸ್ಟಮ್ಸ್ ಅಧಿಕಾರಿ | 1 | 43100-83900 |
ಲೆಕ್ಕಾಧಿಕಾರಿ | 2 | 43100-83900 |
ಮಾರುಕಟ್ಟೆ ಅಧಿಕಾರಿ | 3 | 43100-83900 |
ತಾಂತ್ರಿಕ ಅಧಿಕಾರಿ (ಡಿ.ಟಿ) | 11 | 43100-83900 |
ತಾಂತ್ರಿಕಾಧಿಕಾರಿ (ಅಭಿಯಂತರ) (ಮೆಕ್ಯಾನಿಕಲ್, ಸಿವಿಲ್ & ಗು.ನಿ) | 4 | 43100-83900 |
ವಿಸ್ತರಣಾಧಿಕಾರಿ ದರ್ಜೆ-3 | 22 | 33450-62600 |
ಎಂ.ಐ.ಎಸ್. ಸಹಾಯಕ ದರ್ಜೆ -1 | 2 | 33450-62600 |
ಆಡಳಿತ ಸಹಾಯಕ ದರ್ಜೆ-2 | 13 | 27650-52650 |
ಲೆಕ್ಕ ಸಹಾಯಕ ದರ್ಜೆ-2 | 12 | 27650-52650 |
ಮಾರುಕಟ್ಟೆ ಸಹಾಯಕ ದರ್ಜೆ-2 | 18 | 27650-52650 |
ಖರೀದಿ ಸಹಾಯಕ ದರ್ಜೆ-2 | 6 | 27650-52650 |
ಕೆಮಿಸ್ಟ್ ದರ್ಜೆ-2 | 4 | 27650-52650 |
ಕಿರಿಯ ಸಿಸ್ಟಮ್ ಆಪರೇಟರ್ | 10 | 27650-52650 |
ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) | 2 | 27650-52650 |
ಟೆಲಿಫೋನ್ ಆಪರೇಟರ್ | 2 | 27650-52650 |
ಕಿರಿಯ ತಾಂತ್ರಿಕ | 64 | 21400-42000 |
ಚಾಲಕರು | 8 | 21400-42000 |
ಲ್ಯಾಬ್ ಸಹಾಯಕ | 2 | 21400-42000 |
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
• ಸಹಾಯಕ ವ್ಯವಸ್ಥಾಪಕರು (ಪ.ವೈ&ಕೃ.ಗ) – ಬಿ.ವಿ.ಎಸ್ಸಿ ಅಂಡ್ ಎ.ಹೆಚ್ ಪದವಿಯನ್ನು ಹೊಂದಿರಬೇಕು. ಕರ್ನಾಟಕ ವೆಟರ್ನರಿ ಕೌನ್ಸಿಲ್ (KVC) ಪ್ರಮಾಣ ಪತ್ರ ಪಡೆದಿರಬೇಕು.
• ಸಹಾಯಕ ವ್ಯವಸ್ಥಾಪಕರು (ಅಭಿಯಂತರ)(ಮೆಕ್ಯಾನಿಕಲ್) – ಮೆಕ್ಯಾನಿಕಲ್ ನಲ್ಲಿ ಇಂಜಿನಿಯರಿಂಗ್ ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
• ಸಹಾಯಕ ವ್ಯವಸ್ಥಾಪಕರು (ಅಭಿಯಂತರ)(ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್) – ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ನಲ್ಲಿ ಇಂಜಿನಿಯರಿಂಗ್ ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
• ಸಹಾಯಕ ವ್ಯವಸ್ಥಾಪಕರು (ಎಫ್&ಎಫ್) – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ವಿಷಯದಲ್ಲಿ ಎಂಎಸ್ಸಿ (ಅಗ್ರಿ) ಸ್ನಾತಕೋತ್ತರ ಪದವಿಯನ್ನು ಅಗ್ರೋನಮಿ/ ಸೀಡ್ ಟೆಕ್ನಾಲಜಿಯಲ್ಲಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
• ವೈದ್ಯಾಧಿಕಾರಿ – ಎಂ.ಬಿ.ಬಿ.ಎಸ್ ಪದವಿ ಹೊಂದಿರಬೇಕು. ಕರ್ನಾಟಕ ಮೆಡಿಕಲ್ ಕೌನ್ಸಿಲ್ (KMC) ಪ್ರಮಾಣ ಪತ್ರ ಪಡೆದಿರಬೇಕು.
• ಆಡಳಿತಾಧಿಕಾರಿ – ಎಲ್.ಎಲ್.ಬಿ/ ಬಿ.ಎ.ಎಲ್. ಎಲ್.ಎಲ್.ಬಿ (05 ವರ್ಷ)/ ಎಂ.ಬಿ.ಎ (ಹೆಚ್ ಆರ್)/ ಎಂ.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
• ಎಂ.ಐ.ಎಸ್/ ಸಿಸ್ಟಮ್ಸ್ ಅಧಿಕಾರಿ – ಎಂ.ಸಿ.ಎ/ ಬಿಇ (ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮಶನ್ ಸೈನ್ಸ್/ ಇ & ಸಿ) ರಲ್ಲಿ ವಿದ್ಯಾರ್ಹತೆ ಹೊಂದಿರಬೇಕು.
• ಲೆಕ್ಕಾಧಿಕಾರಿ – ಎಂ.ಕಾ/ ಎಂ.ಬಿ.ಎ (ಫೈನಾನ್ಸ್) ವಿದ್ಯಾರ್ಹತೆ ಹೊಂದಿರಬೇಕು.
• ಮಾರುಕಟ್ಟೆ ಅಧಿಕಾರಿ – ಯಾವುದೇ ಪದವಿಯೊಂದಿಗೆ ಎಂ.ಬಿ.ಎ (ಮಾರುಕಟ್ಟೆ) / ಬಿಎಸ್ಸಿ (ಅಗ್ರಿಕಲ್ಬರಲ್ ಮಾರ್ಕೆಟಿಂಗ್ ಅಂಡ್ ಕೋ-ಆಪರೇಷನ್) ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ತಾಂತ್ರಿಕ ಅಧಿಕಾರಿ (ಡಿಟಿ) – ಬಿ.ಟೆಕ್ (ಡಿಟಿ) ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ತಾಂತ್ರಿಕ ಅಧಿಕಾರಿ (ಅಭಿಯಂತರ) ಮೆಕ್ಯಾನಿಕಲ್ – ಬಿಇ (ಮೆಕ್ಯಾನಿಕಲ್) ಇಂಜಿನಿಯರಿಂಗ್ ಪದವಿ ಹೊಂದಿರಬೇಕು.
• ತಾಂತ್ರಿಕ ಅಧಿಕಾರಿ (ಅಭಿಯಂತರ) ಸಿವಿಲ್ – ಬಿಇ (ಸಿವಿಲ್) ಇಂಜಿನಿಯರಿಂಗ್ ಪದವಿ ಹೊಂದಿರಬೇಕು.
• ತಾಂತ್ರಿಕ ಅಧಿಕಾರಿ (ಗು.ನಿ) – ಯಾವುದೇ ಪದವಿಯೊಂದಿಗೆ ಎಂ.ಎಸ್ಸಿ (ಮೈಕ್ರೊಬಯಾಲಜಿ/ ಕೆಮಿಸ್ಟ್ರಿ) ಪದವಿ ಹೊಂದಿರಬೇಕು.
• ವಿಸ್ತರಣಾಧಿಕಾರಿ ದರ್ಜೆ 3 – ಯಾವುದೇ ಪದವಿಯೊಂದಿಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ಎಂ.ಐ.ಎಸ್. ಸಹಾಯಕ ದರ್ಜೆ -1 – ಬಿಸಿಎ/ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್)/ ಬಿಇ (ಸಿಎಸ್) ವಿದ್ಯಾರ್ಹತೆ ಹೊಂದಿರಬೇಕು.
• ಆಡಳಿತ ಸಹಾಯಕ ದರ್ಜೆ 2 – ಯಾವುದೇ ಪದವಿ ಹೊಂದಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಅವಶ್ಯಕ.
• ಲೆಕ್ಕ ಸಹಾಯಕ ದರ್ಜೆ 2 – ಬಿ.ಕಾಂ ಪದವಿ ಜೊತೆಗೆ ಕಡ್ಡಾಯವಾಗಿ ಟ್ಯಾಲಿ ಪ್ಯಾಕೇಜ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ಮಾರುಕಟ್ಟೆ ಸಹಾಯಕ ದರ್ಜೆ 2 – ಮಾರುಕಟ್ಟೆ ಒಂದು ಮುಖ್ಯ ವಿಷಯವಾಗಿ ಬಿಬಿಎ/ ಬಿಬಿಎಂ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ಖರೀದಿ ಸಹಾಯಕ ದರ್ಜೆ-2 – ಯಾವುದೇ ಪದವಿ ಹೊಂದಿರಬೇಕು. ಎಂ.ಎಸ್ ವರ್ಡ್ ಮತ್ತು ಎಂ.ಎಸ್ ಎಕ್ಸೆಲ್ ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ಕೆಮಿಸ್ಟ್ ದರ್ಜೆ-2 – ಕೆಮಿಸ್ಟ್ರಿ/ ಮೈಕ್ರೋ ಬಯಾಲಜಿಯಲ್ಲಿ ಒಂದು ಮುಖ್ಯ ವಿಷಯವಾಗಿ ವಿಜ್ಞಾನ ಪದವಿ ಹೊಂದಿರಬೇಕು. ಎಂ.ಎಸ್ ವರ್ಡ್ ಮತ್ತು ಎಂ.ಎಸ್ ಎಕ್ಸೆಲ್ ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ಕಿರಿಯ ಸಿಸ್ಟಂ ಆಪರೇಟರ್ – ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್)/ ಬಿಸಿಎ/ ಬಿಇ (ಸಿ.ಎಸ್/ ಐ.ಎಸ್) ವಿದ್ಯಾರ್ಹತೆ ಹೊಂದಿರಬೇಕು.
• ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯೊಂದಿಗೆ ಮಾಜಿ ಸೈನಿಕರಾಗಿರಬೇಕು.
• ಟೆಲಿಫೋನ್ ಆಪರೇಟರ್ – ಯಾವುದೇ ಪದವಿ ಹೊಂದಿರಬೇಕು ಜೊತೆಗೆ ಟೆಲಿಫೋನ್ ನಿರ್ವಹಣೆಯಲ್ಲಿ ಪ್ರಮಾಣ ಪತ್ರ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ಕಿರಿಯ ತಾಂತ್ರಿಕ (ಮೆಕ್ಯಾನಿಕಲ್) – ಮೆಕ್ಯಾನಿಕಲ್ ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.
• ಕಿರಿಯ ತಾಂತ್ರಿಕ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) – ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.
• ಕಿರಿಯ ತಾಂತ್ರಿಕ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್) – ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.
• ಕಿರಿಯ ತಾಂತ್ರಿಕ (ರೆಪ್ರಿಜಿರೇಷನ್ & ಏರ್ ಕಂಡೀಷನಿಂಗ್) – ಐಟಿಐ ವಿದ್ಯಾರ್ಹತೆ ಹೊಂದಿ ರೆಪ್ರಿಜಿರೇಷನ್ & ಏರ್ ಕಂಡೀಷನಿಂಗ್ ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
• ಕಿರಿಯ ತಾಂತ್ರಿಕ (ಫಿಟ್ಟರ್) – ಐಟಿಐ ವಿದ್ಯಾರ್ಹತೆ ಹೊಂದಿ ಫಿಟ್ಟರ್ ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
• ಕಿರಿಯ ತಾಂತ್ರಿಕ (ವೆಲ್ಡರ್) – ಐಟಿಐ ವಿದ್ಯಾರ್ಹತೆ ಹೊಂದಿ ವೆಲ್ಡರ್ ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
• ಕಿರಿಯ ತಾಂತ್ರಿಕ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್) – ಐಟಿಐ ವಿದ್ಯಾರ್ಹತೆ ಹೊಂದಿ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
• ಕಿರಿಯ ತಾಂತ್ರಿಕ (ಎಲೆಕ್ಟ್ರಾನಿಕ್ ಮೆಕ್ಯಾನಿಕ್) – ಐಟಿಐ ವಿದ್ಯಾರ್ಹತೆ ಹೊಂದಿ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
• ಕಿರಿಯ ತಾಂತ್ರಿಕ (ಬಾಯ್ಲರ್) – ಎಸ್.ಎಸ್.ಎಲ್.ಸಿ ಉತ್ತೀರ್ಣತೆಯೊಂದಿಗೆ ಡೈರೆಕ್ಟರ್ ಆಫ್ ಫ್ಯಾಕ್ಟರಿ & ಬಾಯ್ಲರ್ ರವರಿಂದ ಎರಡನೇ ದರ್ಜೆ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಹೊಂದಿರಬೇಕು.
• ಚಾಲಕರು – ಕನ್ನಡ ಒಂದು ವಿಷಯವಾಗಿ ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು ಹಾಗೂ ಎಲ್.ಎಂ.ವಿ/ ಹೆಚ್.ಎಂ.ವಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
• ಲ್ಯಾಬ್ ಸಹಾಯಕ – ಕೆಮಿಸ್ಟ್ರಿ/ ಮೈಕ್ರೋ ಬಯಾಲಜಿ ಒಂದು ವಿಷಯವಾಗಿ ಪಿಯುಸಿ ತೇರ್ಗಡೆ ಹೊಂದಿರಬೇಕು. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಉದ್ಯೋಗ ಮಾಹಿತಿ : ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ 2023
ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
ಆಯ್ಕೆ ವಿಧಾನ : ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಉದ್ಯೋಗ ಮಾಹಿತಿ : ಭಾರತೀಯ ಅಂಚೆ ಇಲಾಖೆ ಬೃಹತ್ ನೇಮಕಾತಿ 2023
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ :
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳು – ರೂ. 500
ಇತರೆ ವರ್ಗದ ಅಭ್ಯರ್ಥಿಗಳು – ರೂ. 1000
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್ಲೈನ್ ಮೂಲಕ ನಿಗದಿತ ಶುಲ್ಕ ಹಾಗೂ ಅನ್ವಯಿಸುವ ಬ್ಯಾಂಕ್ ಶುಲ್ಕ ಪಾವತಿಸಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಮಾರ್ಚ್ 18, 2023 ಮೇ 23, 2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಏಪ್ರಿಲ್ 17, 2023 ಜೂನ್ 06, 2023
KMF Tumkur (TUMUL) Recruitment 2023 : Important Links
NOTIFICATION | CLICK HERE |
AMENDMENT NOTIFICATION | CLICK HERE |
APPLY ONLINE (RE OPEN) | CLICK HERE |
Telegram Join Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.