KOF Bangalore Recruitment 2023 – Apply Online for 20 Marketing Officers, Assistant Executive and Various Posts

KOF Bangalore Recruitment 2023 : ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳದ ಕೇಂದ್ರ ಕಛೇರಿ ಹಾಗೂ ಇದರ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KOF Bangalore Recruitment 2023 : Details of Vacancies

ಹುದ್ದೆ : ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕ (ಪ್ರಕ್ಯೂರ್ ಮೆಂಟ್ & ಇನ್ ಪುಟ್), ಸಹಾಯಕ ವ್ಯವಸ್ಥಾಪಕರು (ಗುಣಭರವಸೆ), ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ), ಮಾರುಕಟ್ಟೆ ಅಧಿಕಾರಿಗಳು, ಕಾರ್ಯನಿರ್ವಾಹಕರು (ತಾಂತ್ರಿಕ), ಸಹಾಯಕ ಕಾರ್ಯನಿರ್ವಾಹಕರು, ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ)

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕು

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 20 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಸಹಾಯಕ ಪ್ರಧಾನ ವ್ಯವಸ್ಥಾಪಕರು174400-109600
ಸಹಾಯಕ ವ್ಯವಸ್ಥಾಪಕ (ಪ್ರಕ್ಯೂರ್ ಮೆಂಟ್ & ಇನ್ ಪುಟ್)243100-83900
ಸಹಾಯಕ ವ್ಯವಸ್ಥಾಪಕರು (ಗುಣಭರವಸೆ)143100-83900
ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ)143100-83900
ಮಾರುಕಟ್ಟೆ ಅಧಿಕಾರಿಗಳು933450-62600
ಕಾರ್ಯನಿರ್ವಾಹಕರು (ತಾಂತ್ರಿಕ)227650-52650
ಸಹಾಯಕ ಕಾರ್ಯನಿರ್ವಾಹಕರು321400-42000
ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ)121400-42000

ಶೈಕ್ಷಣಿಕ ಅರ್ಹತೆ :
• ಸಹಾಯಕ ಪ್ರಧಾನ ವ್ಯವಸ್ಥಾಪಕರು – ಅಂಗೀಕೃತ ಕೃಷಿ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ, ಕೃಷಿ (ಕೃಷಿ ಮಾರಾಟ/ ಬೀಜ ತಂತ್ರಜ್ಞಾನ/ ಅಗ್ರೋನಮಿ/ ಅಗ್ರಿಕಲ್ಚರ್ ಎಕ್ಸಟನ್ಷನ್/ ಅಗ್ರಿಕಲ್ಚರ್ ಎಕನಾಮಿಕ್ಸ್/ ಸಾಯಿಲ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ) ಅಥವಾ ಹುದ್ದೆಗೆ ನಿಗದಿಪಡಿಸಿದ ವಿಷಯದಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಹೊಂದಿರಬೇಕು.

• ಸಹಾಯಕ ವ್ಯವಸ್ಥಾಪಕರು (ಪ್ರಕ್ಯೂರ್ ಮೆಂಟ್ & ಇನ್ ಪುಟ್) – ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ ಅಗ್ರಿಕಲ್ಚರ್ (ಅಗ್ರೋನಮಿ/ ಸೀಡ್ ಟೆಕ್ನಾಲಜಿ/ ಪ್ಲಾಂಟ್ ಬ್ರೀಡಿಂಗ್ & ಜೆನೆಟಿಕ್ಸ್) ಸ್ನಾತಕೋತ್ತರ ಪದವಿ.

• ಸಹಾಯಕ ವ್ಯವಸ್ಥಾಪಕರು (ಗುಣಭರವಸೆ) – ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ (ಕೆಮಿಸ್ಟ್ರಿ/ ಬಯೋಕೆಮಿಸ್ಟ್ರಿ/ ಫುಡ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ.

• ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ) & ಮಾರುಕಟ್ಟೆ ಅಧಿಕಾರಿಗಳು – ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂಬಿಎ (ಮಾರ್ಕೆಟಿಂಗ್) ಅಥವಾ ಸಮಾನಾಂತರ ಸ್ನಾತಕೋತ್ತರ ಪದವಿ.

• ಕಾರ್ಯನಿರ್ವಾಹಕರು (ತಾಂತ್ರಿಕ) – ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ ಡಿಪ್ಲೊಮಾದಲ್ಲಿ ಎಲೆಕ್ಟ್ರಿಕಲ್/ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಅಥವಾ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್/ ಮೆಕಾನಿಕಲ್ ವಿದ್ಯಾರ್ಹತೆ.

• ಸಹಾಯಕ ಕಾರ್ಯನಿರ್ವಾಹಕರು – ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದ ಬಿಕಾಂ/ ಬಿಬಿಎ/ ಬಿಬಿಎಂ/ ಬಿಎಸ್ಸಿ ಪದವಿ.

• ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ) – ಬಿ.ಎಸ್ಸಿ (ಕೆಮಿಸ್ಟ್ರಿ/ ಬಯೋಕೆಮಿಸ್ಟ್ರಿ/ ಬಯೋಟೆಕ್/ ಫುಡ್ ಸೈನ್ಸ್) ಪದವಿ.

ಕೆಲಸದ ಅನುಭವ :

ಹುದ್ದೆಕೆಲಸದ ಅನುಭವ
ಸಹಾಯಕ ಪ್ರಧಾನ ವ್ಯವಸ್ಥಾಪಕರು5 ವರ್ಷಗಳು
ಸಹಾಯಕ ವ್ಯವಸ್ಥಾಪಕ (ಪ್ರಕ್ಯೂರ್ ಮೆಂಟ್ & ಇನ್ ಪುಟ್)5 ವರ್ಷಗಳು
ಸಹಾಯಕ ವ್ಯವಸ್ಥಾಪಕರು (ಗುಣಭರವಸೆ)5 ವರ್ಷಗಳು
ಸಹಾಯಕ ವ್ಯವಸ್ಥಾಪಕರು (ಮಾರುಕಟ್ಟೆ)5 ವರ್ಷಗಳು
ಮಾರುಕಟ್ಟೆ ಅಧಿಕಾರಿಗಳು3 ವರ್ಷಗಳು
ಕಾರ್ಯನಿರ್ವಾಹಕರು (ತಾಂತ್ರಿಕ)3 ವರ್ಷಗಳು
ಸಹಾಯಕ ಕಾರ್ಯನಿರ್ವಾಹಕರು2 ವರ್ಷಗಳು
ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ)2 ವರ್ಷಗಳು

ವಯೋಮಾನ :
• ಸಾಮಾನ್ಯ ವರ್ಗ – ಗರಿಷ್ಠ 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ – ಗರಿಷ್ಠ 38 ವರ್ಷ
• ಪ.ಜಾತಿ, ಪ.ಪಂ, ಪ್ರವರ್ಗ 1 – ಗರಿಷ್ಠ 40 ವರ್ಷ

ಆಯ್ಕೆ ವಿಧಾನ : ವಿದ್ಯಾರ್ಹತೆ, ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಉದ್ಯೋಗ ಮಾಹಿತಿ : ಕರ್ನಾಟಕ ಹೈಕೋರ್ಟ್ ಡ್ರೈವರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಆನ್‌ಲೈನ್‌ ಮೂಲಕ ಸಲ್ಲಿಸಿದ ಅರ್ಜಿಯ ಪ್ರತಿ/ ಅರ್ಜಿ ಶುಲ್ಕದ ಡಿಡಿ ಹಾಗೂ ಅಪ್ಲೋಡ್ ಮಾಡಿದ ಎಲ್ಲಾ ದಾಖಲಾತಿಗಳನ್ನು ಒಳಗೊಂಡ ಲಕೋಟೆಯನ್ನು ಕಛೇರಿಯ ವಿಳಾಸಕ್ಕೆ ತಲುಪಿಸತಕ್ಕದ್ದು.

ಅರ್ಜಿ ಸಲ್ಲಿಸುವ ವಿಳಾಸ :
ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ, ಬೆಂಗಳೂರು (ಕೆಓಎಫ್) ನಂ. 11, 4ನೇ ಮಹಡಿ, ಬ್ಲೂ ಕ್ರಾಸ್ ಛೇಂಬರ್ಸ್, ಇನ್ ಫೆಂಟರಿ ಅಡ್ಡ ರಸ್ತೆ, ಬೆಂಗಳೂರು – 01

ಅರ್ಜಿ ಶುಲ್ಕ :
• ಪ.ಜಾತಿ, ಪ.ಪಂಗಡ, ಪ್ರವರ್ಗ 1, ಅಂಗವಿಕಲ – ರೂ. 500
• ಸಾಮಾನ್ಯ ವರ್ಗದ ಅಭ್ಯರ್ಥಿಗಳು – ರೂ. 1000

ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಕೆ.ಸಿ.ಓ.ಜಿ.ಎಫ್.ಲಿ., ಬೆಂಗಳೂರು ಇವರ ಹೆಸರಿಗೆ ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನ ಡಿಡಿಯ ಮೂಲಕ ಸಲ್ಲಿಸಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 11, 2023
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 25, 2023
ಅರ್ಜಿಯ ಪ್ರತಿ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 31, 2023

KOF Bangalore Recruitment 2023 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment