ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನೇಮಕಾತಿ 2023 – Sreenidhi Cooperative Bank Recruitment 2023

Sreenidhi Cooperative Bank Recruitment 2023 : ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ, ಬೆಂಗಳೂರು ಇದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Sreenidhi Cooperative Bank Recruitment 2023 : Details of Vacancies

ಹುದ್ದೆ : ಶಾಖಾ ವ್ಯವಸ್ಥಾಪಕರು/ ಉಪ ವ್ಯವಸ್ಥಾಪಕರು/ ಲೆಕ್ಕಾಧಿಕಾರಿ, ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಡಿ.ಬಿ.ಎ, ಸಹಾಯಕ ವ್ಯವಸ್ಥಾಪಕರು/ ಸಹಾಯಕ ಲೆಕ್ಕಾಧಿಕಾರಿಗಳು/ ಕ್ಷೇತ್ರಾಧಿಕಾರಿಗಳು/ ವಸೂಲಾಧಿಕಾರಿಗಳು/ ಸಹಾಯಕ ಡಿ.ಬಿ.ಎ, ಹಿರಿಯ ಸಹಾಯಕರು/ ಹಿರಿಯ ದತ್ತಾಂಶ ನಮೂದು ಆಯೋಜಕರು, ಕಿರಿಯ ಸಹಾಯಕರು/ ಗುಮಾಸ್ತ/ ಬೆರಳಚ್ಚುಗಾರ/ ದತ್ತಾಂಶ ನಮೂದು ಆಯೋಜಕರು, ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 18 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ
ಶಾಖಾ ವ್ಯವಸ್ಥಾಪಕರು/ ಉಪ ವ್ಯವಸ್ಥಾಪಕರು/ ಲೆಕ್ಕಾಧಿಕಾರಿ343100-83900
ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಡಿ.ಬಿ.ಎ143100-83900
ಸಹಾಯಕ ವ್ಯವಸ್ಥಾಪಕರು/ ಸಹಾಯಕ ಲೆಕ್ಕಾಧಿಕಾರಿಗಳು/ ಕ್ಷೇತ್ರಾಧಿಕಾರಿಗಳು/ ವಸೂಲಾಧಿಕಾರಿಗಳು/ ಸಹಾಯಕ ಡಿ.ಬಿ.ಎ537900-70850
ಹಿರಿಯ ಸಹಾಯಕರು/ ಹಿರಿಯ ದತ್ತಾಂಶ ನಮೂದು ಆಯೋಜಕರು233450-62600
ಕಿರಿಯ ಸಹಾಯಕರು/ ಗುಮಾಸ್ತ/ ಬೆರಳಚ್ಚುಗಾರ/ ದತ್ತಾಂಶ ನಮೂದು ಆಯೋಜಕರು630350-58250
ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು121400-42000

ಶೈಕ್ಷಣಿಕ ಅರ್ಹತೆ :
ಶಾಖಾ ವ್ಯವಸ್ಥಾಪಕರು/ ಉಪ ವ್ಯವಸ್ಥಾಪಕರು/ ಲೆಕ್ಕಾಧಿಕಾರಿ – ಬ್ಯಾಂಕಿಂಗ್/ ಅಕೌಂಟೆನ್ಸಿ/ ಎಕನಾಮಿಕ್ಸ್/ ಮಾಥ್ಸ್/ ಸ್ಟ್ಯಾಟಿಸ್ಟಿಕ್ಸ್/ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಯಾವುದಾದರು ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಕನಿಷ್ಠ 3 ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಡಿ.ಬಿ.ಎ – ಬಿಸಿಎ/ ಬಿ.ಟೆಕ್ (ಕಂಪ್ಯೂಟರ್ಸ್) ಯಾವುದಾದರು ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಕನಿಷ್ಠ 3 ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ಸಹಾಯಕ ವ್ಯವಸ್ಥಾಪಕರು/ ಸಹಾಯಕ ಲೆಕ್ಕಾಧಿಕಾರಿಗಳು/ ಕ್ಷೇತ್ರಾಧಿಕಾರಿಗಳು/ ವಸೂಲಾಧಿಕಾರಿಗಳು/ ಸಹಾಯಕ ಡಿ.ಬಿ.ಎ – ಬ್ಯಾಂಕಿಂಗ್/ ಅಕೌಂಟೆನ್ಸಿ/ ಎಕನಾಮಿಕ್ಸ್/ ಮಾಥ್ಸ್/ ಸ್ಟ್ಯಾಟಿಸ್ಟಿಕ್ಸ್/ ಬಿಸಿನೆಸ್ ಅಡ್ಮಿನಿಸ್ಟ್ರೇಷನ್/ ಬಿಸಿಎ/ ಬಿ.ಟೆಕ್ (ಕಂಪ್ಯೂಟರ್ಸ್) ಯಾವುದಾದರು ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ದ್ವಿತೀಯ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಕನಿಷ್ಠ 3 ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ಹಿರಿಯ ಸಹಾಯಕರು/ ಹಿರಿಯ ದತ್ತಾಂಶ ನಮೂದು ಆಯೋಜಕರು – ಬ್ಯಾಂಕಿಂಗ್/ ಅಕೌಂಟೆನ್ಸಿ/ ಎಕನಾಮಿಕ್ಸ್/ ಮಾಥ್ಸ್/ ಸ್ಟ್ಯಾಟಿಸ್ಟಿಕ್ಸ್/ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಯಾವುದಾದರು ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ದ್ವಿತೀಯ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ಕಿರಿಯ ಸಹಾಯಕರು/ ಗುಮಾಸ್ತ/ ಬೆರಳಚ್ಚುಗಾರ/ ದತ್ತಾಂಶ ನಮೂದು ಆಯೋಜಕರು – ಯಾವುದಾದರೂ ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು – ಎಸ್.ಎಸ್.ಎಲ್.ಸಿ/ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಚಾಲನಾ ಪರವಾನಗಿಯೊಂದಿಗೆ ಅನುಭವ ಹೊಂದಿರಬೇಕು.

ಉದ್ಯೋಗ ಮಾಹಿತಿ : FDA, SDA ಹುದ್ದೆಗಳ ನೇಮಕಾತಿ 2023

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಇರತಕ್ಕದ್ದು.

ಆಯ್ಕೆ ವಿಧಾನ : ಆಯ್ಕೆಯನ್ನು ಬ್ಯಾಂಕಿನ ಸಿಬ್ಬಂದಿ ನೇಮಕಾತಿ ಮತ್ತು ಸೇವಾ ನಿಯಮಾವಳಿಯಂತೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗಳಿಗನುಸಾರವಾಗಿ 1:5ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಬ್ಯಾಂಕಿನ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಡಿ.ಡಿ ಮೂಲಕ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಸೀಲ್ ಮಾಡಿದ ಲಕೋಟೆಯ ಮೇಲೆ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ 2023 ಎಂದು ನಮೂದಿಸಿ ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಅಂಚೆ/ ಕೋರಿಯರ್ ಅಥವಾ ಖುದ್ದಾಗಿ ತಲುಪಿಸತಕ್ಕದ್ದು.

ಅರ್ಜಿ ಸಲ್ಲಿಸುವ ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ, ಆಡಳಿತ ಕಛೇರಿ, ನಂ. 113, ಆರ್.ವಿ.ರಸ್ತೆ, ವಿ.ವಿ.ಪುರಂ, ಬೆಂಗಳೂರು – 560004

ನಿಗದಿತ ಅರ್ಜಿ ಶುಲ್ಕದ ವಿವರ :
ಸೇವಕರು/ ಜವಾನರು/ ಭದ್ರತಾ ರಕ್ಷಕರು/ ವಾಹನ ಚಾಲಕರು ಹುದ್ದೆಗೆ – ರೂ. 177
ಉಳಿದ ಹುದ್ದೆಗಳಿಗೆ – ರೂ. 354

ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಈ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಡಿ.ಡಿ (ಡಿಮ್ಯಾಂಡ್ ಡ್ರಾಪ್ಟ್) ಮೂಲಕ ಪಾವತಿಸಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 02, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 17, 2023

Sreenidhi Cooperative Bank Recruitment 2023 : Important Links

NOTIFICATION CLICK HERE
APPLICATION FORM CLICK HERE
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment