VIMS Bellary Recruitment 2022 : ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಗತ್ಯವಿರುವ ಗ್ರೂಪ್ ‘ಸಿ’ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ಸಂದರ್ಶನ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
VIMS Bellary Recruitment 2022 : Details of Vacancies
ಹುದ್ದೆ :
• ಶುಶ್ರೂಷಾಧಿಕಾರಿ : 110 ಹುದ್ದೆ
ಶೈಕ್ಷಣಿಕ ಅರ್ಹತೆ – ಜಿ.ಎನ್.ಎಂ ಶುಶ್ರೂಷ ತರಬೇತಿ (Not less than 3 years) ಹೊಂದಿರತಕ್ಕದ್ದು. ಬಿ.ಎಸ್.ಸಿ ನರ್ಸಿಂಗ್ ಹೊಂದಿದ್ದಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು.
• ರೇಡಿಯೋಗ್ರಾಫರ್ : 1 ಹುದ್ದೆ
ಶೈಕ್ಷಣಿಕ ಅರ್ಹತೆ – ಪಿಯುಸಿ ಮತ್ತು ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮಾ ಹೊಂದಿರತಕ್ಕದ್ದು.
• ಫಾರ್ಮಸಿ ಅಧಿಕಾರಿ : 2 ಹುದ್ದೆ
ಶೈಕ್ಷಣಿಕ ಅರ್ಹತೆ – ಪಿಯುಸಿ ಮತ್ತು ‘ಡಿ’ ಫಾರ್ಮಾ ಪದವಿ ಹೊಂದಿರಬೇಕು. ‘ಬಿ’ ಫಾರ್ಮಾ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
• ಕ್ಷ-ಕಿರಣ ತಂತ್ರಜ್ಞರು : 3 ಹುದ್ದೆ
ಶೈಕ್ಷಣಿಕ ಅರ್ಹತೆ – ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮಾ ಹೊಂದಿರತಕ್ಕದ್ದು.
• ಫಿಜಿಯೋಥೆರಪಿಸ್ಟ್ : 1 ಹುದ್ದೆ
ಶೈಕ್ಷಣಿಕ ಅರ್ಹತೆ – ಪಿಯುಸಿ & ಡಿಪ್ಲೋಮಾ ಇನ್ ಫಿಜಿಯೋಥೆರಪಿಸ್ಟ್ ಕೋರ್ಸ್ ಹೊಂದಿರತಕ್ಕದ್ದು.
• ಡಯೆಟಿಷಿಯನ್ : 1 ಹುದ್ದೆ
ಶೈಕ್ಷಣಿಕ ಅರ್ಹತೆ – ಹೋಂ ಸೈನ್ಸ್ ನಲ್ಲಿ ಪದವಿ ಹಾಗೂ ಬಿ.ಎಸ್ಸಿ ನ್ಯೂಟ್ರಿಷಿಯನ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
• ಲ್ಯಾಬ್ ಟೆಕ್ನಿಷಿಯನ್ : 3 ಹುದ್ದೆ
ಶೈಕ್ಷಣಿಕ ಅರ್ಹತೆ – ಲ್ಯಾಬ್ ಟೆಕ್ನಿಷಿಯನ್ ತಾಂತ್ರಿಕ ಡಿಪ್ಲೊಮಾ ಹೊಂದಿರಬೇಕು.
• ಡ್ರೈವರ್ : 6 ಹುದ್ದೆ
ಶೈಕ್ಷಣಿಕ ಅರ್ಹತೆ – ಎಸ್.ಎಸ್.ಎಲ್.ಸಿ ಮತ್ತು ಹೆವಿ ಮೋಟರ್ ವೆಹಿಕಲ್ ಚಾಲನೆ ಪರವಾನಿಗೆ ಮತ್ತು 3 ವರ್ಷದ ಅನುಭವ ಹೊಂದಿರಬೇಕು.
• ಡಯಾಲಿಸಿಸ್ ಟೆಕ್ನಿಷಿಯನ್ : 1 ಹುದ್ದೆ
ಶೈಕ್ಷಣಿಕ ಅರ್ಹತೆ – ಪಿಯುಸಿ ಮತ್ತು ಡಿಪ್ಲೋಮಾ ಇನ್ ಡಯಾಲಿಸಿಸ್ ಟೆಕ್ನಿಷಿಯನ್ ಕೋರ್ಸ್ ಹೊಂದಿರತಕ್ಕದ್ದು.
• ಸಿಟಿ ಟೆಕ್ನಿಷಿಯನ್ : 2 ಹುದ್ದೆ
ಶೈಕ್ಷಣಿಕ ಅರ್ಹತೆ – ಪಿಯುಸಿ ಮತ್ತು ಡಿಪ್ಲೋಮಾ ಇನ್ ಸಿಟಿ ಟೆಕ್ನಿಷಿಯನ್ ಕೋರ್ಸ್ ಹೊಂದಿರಬೇಕು.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 130 ಹುದ್ದೆಗಳ ಭರ್ತಿಗೆ ಸಂದರ್ಶನಕ್ಕೆ ಕರೆಯಲಾಗಿದೆ.
ವಯೋಮಾನ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ವೇತನ : ಕಾರ್ಮಿಕ ಕಾಯ್ದೆಯನ್ವಯ ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ : ಹೊರಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಉದ್ಯೋಗ ಮಾಹಿತಿ : ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿ ನೇರ ನೇಮಕಾತಿ 2022
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಗತ್ಯವಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು, ನಂತರ ಅದನ್ನು ಭರ್ತಿ ಮಾಡಿ ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ದಾಖಲಾತಿಗಳ ಒಂದು ಪ್ರತಿ ಹಾಗೂ ಮೂಲ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ಸ್ಥಳ : ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ, ಬಳ್ಳಾರಿ
ಅರ್ಜಿ ಶುಲ್ಕ : ಅಭ್ಯರ್ಥಿಗಳು ಅರ್ಜಿಯೊಂದಿಗೆ ರೂ. 500 ಶುಲ್ಕವನ್ನು ನಿರ್ದೇಶಕರು, ವಿಮ್ಸ್, ಬಳ್ಳಾರಿ ಇವರ ಹೆಸರಿನಲ್ಲಿ ಡಿ.ಡಿ. ಮೂಲಕ ಪಡೆದು ಸಲ್ಲಿಸಬೇಕು.
ಸಂದರ್ಶನ ನಡೆಯುವ ದಿನಾಂಕದ ವಿವರ :
ನೇರ ಸಂದರ್ಶನ ದಿನಾಂಕ : ಜನವರಿ 10, 2022 ರಂದು ಬೆಳಿಗ್ಗೆ 10.30 ಗಂಟೆಗೆ
VIMS Bellary Recruitment 2022 : Important Links
ಪ್ರಕಟಣೆ : Click Here
ವೆಬ್‌ಸೈಟ್ : Click Here
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.