WCD Tumkur Recruitment 2022 – Apply Now Computer Operator, Consultant Posts

WCD Tumkur Recruitment 2022 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ವಹಣೆ ಹಾಗೂ ನಿಗಮದ ಯೋಜನೆ ಕುರಿತು ಅರಿವು ಮೂಡಿಸಲು ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ವೇತನ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

WCD Tumkur Recruitment 2022 : Details of Vacancies

ಹುದ್ದೆ : ಸಮಾಲೋಚಕರು, ಕ್ಲರ್ಕ್/ ಕಂಪ್ಯೂಟರ್ ಆಪರೇಟರ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತುಮಕೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕು.

ಅರ್ಹತೆ :
• ಸಮಾಲೋಚಕರ ಹುದ್ದೆಗೆ ಎಂ.ಎಸ್.ಡಬ್ಲ್ಯು/ ಮಹಿಳಾ ಅಧ್ಯಯನದಲ್ಲಿ ಎಂ.ಎ ಪದವಿ ತೇರ್ಗಡೆ ಹೊಂದಿದ್ದು, ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ 3 ರಿಂದ 5 ವರ್ಷಗಳ ಅನುಭವ (ಪ್ರಮಾಣ ಪತ್ರ ಸಲ್ಲಿಸಬೇಕು) ಹೊಂದಿರಬೇಕು. ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಲು ದೈಹಿಕವಾಗಿ ಸಾಮರ್ಥ್ಯ ಇರಬೇಕು.
• ಕ್ಲರ್ಕ್/ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಪಿಯುಸಿ ಉತ್ತೀರ್ಣರಾಗಿದ್ದು, ಎಲ್ಲ ಯೋಜನೆಗಳ ಕೆಲಸ ಕಾರ್ಯಗಳನ್ನು ಮಾಡಲು ಸಾಮರ್ಥ್ಯ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ (ಪ್ರಮಾಣಪತ್ರ ಸಲ್ಲಿಸಬೇಕು) ಹೊಂದಿರಬೇಕು.

ವೇತನ : ಸಮಾಲೋಚಕರ ಹುದ್ದೆಗೆ 12 ಸಾವಿರ ಗೌರವಧನ ಮತ್ತು 2 ಸಾವಿರ ರೂ.ಗಳ ಪ್ರಯಾಣಭತ್ಯೆ ನೀಡಲಾಗುವುದು. ಕ್ಲರ್ಕ್/ಕಂಪ್ಯೂಟರ್ ಆಪರೇಟರ್ ಹುದ್ದೆಗೆ 10 ಸಾವಿರವನ್ನು ಗೌರವಧನವಾಗಿ ನೀಡಲಾಗುವುದು.

ಉದ್ಯೋಗ ಮಾಹಿತಿ : ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2022

ಹುದ್ದೆಯ ವಿಧ : ಹುದ್ದೆಗಳು ತಾತ್ಕಾಲಿಕವಾಗಿದ್ದು, ಕಾರ್ಯದಕ್ಷತೆಯ ಆಧಾರದ ಮೇಲೆ ಮುಂದುವರಿಸಲಾಗುವುದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ತುಮಕೂರು ನಗರದ ಎಂ.ಜಿ. ರಸ್ತೆ, ಬಾಲಭವನ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಜುಲೈ 30ರೊಳಗೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 8ರೊಳಗೆ ಸಲ್ಲಿಸಬೇಕು.

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಕಚೇರಿಯಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ : ಜುಲೈ 30, 2022
ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 08, 2022

WCD Tumkur Recruitment 2022 : Important Links

ಪ್ರಕಟಣೆNotification

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 0816-2272590

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

One Comment on “WCD Tumkur Recruitment 2022 – Apply Now Computer Operator, Consultant Posts”

Leave a Reply

Your email address will not be published. Required fields are marked *