ಆಯುಷ್ ಇಲಾಖೆ ನೇಮಕಾತಿ 2020 | 20 ತಜ್ಞ ವೈದ್ಯರು, ಅರೆ ವೈದ್ಯಕೀಯ ಹುದ್ದೆಗಳ ಭರ್ತಿ

ಆಯುಷ್ ಇಲಾಖೆ ನೇಮಕಾತಿ 2020 | ಕರ್ನಾಟಕ ಜಾಬ್ ಇನ್ಫೋಗೆ ಸ್ವಾಗತ | ಜಿಲ್ಲಾ ಆಯುಷ್ ಇಲಾಖೆ, ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಅಗತ್ಯವಿರುವ ತಜ್ಞ ವೈದ್ಯರು/ ಅರೆ ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಮಾಸಿಕ ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

1) ಹುದ್ದೆ : ತಜ್ಞ ವೈದ್ಯರು ಆಯುರ್ವೇದ
ಕರ್ತವ್ಯ ಸ್ಥಳ : ಅರಸೀಕೆರೆ ಹಾಗೂ ಸಕಲೇಶಪುರ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 02 ಹುದ್ದೆ
ವೇತನ : ಮಾಸಿಕ ರೂ. 35,000/- (5,000 ಸ್ನಾತಕೋತ್ತರ ಭತ್ಯೆ)
ಶೈಕ್ಷಣಿಕ ಅರ್ಹತೆ : MS in Shalyatantra MD in Panchakarma/ Kayachikitsa

2) ಹುದ್ದೆ : ತಜ್ಞ ವೈದ್ಯರು ಯುನಾನಿ
ಕರ್ತವ್ಯ ಸ್ಥಳ :
ಚನ್ನರಾಯಪಟ್ಟಣ ಹಾಗೂ ಅರಕಲಗೂಡು
ಖಾಲಿಯಿರುವ ಹುದ್ದೆಗಳ ಸಂಖ್ಯೆ : 02 ಹುದ್ದೆ
ವೇತನ : ಮಾಸಿಕ ರೂ. 35,000/- (5,000 ಸ್ನಾತಕೋತ್ತರ ಭತ್ಯೆ)
ಶೈಕ್ಷಣಿಕ ಅರ್ಹತೆ : Post Graduate Degree in in Unani Medicine if Post Graduates are not available Unani Degree may be considered with 3 years of experience, without PG allowance

3) ಹುದ್ದೆ : ತಜ್ಞ ವೈದ್ಯರು ಹೋಮಿಯೋಪಥಿ
ಕರ್ತವ್ಯ ಸ್ಥಳ : ಅರಸೀಕೆರೆ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 01 ಹುದ್ದೆ
ವೇತನ : ಮಾಸಿಕ ರೂ. 35,000/- (5,000 ಸ್ನಾತಕೋತ್ತರ ಭತ್ಯೆ)
ಶೈಕ್ಷಣಿಕ ಅರ್ಹತೆ : Post Graduate Degree in in Homeopathy Medicine if Post Graduates are not available Homeopathy Degree may be considered with 3 years of experience, without PG allowance

4) ಹುದ್ದೆ : ತಜ್ಞ ವೈದ್ಯರು ಪ್ರ.ಚಿ&ಯೋ
ಕರ್ತವ್ಯ ಸ್ಥಳ : ಸಕಲೇಶಪುರ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 01 ಹುದ್ದೆ
ವೇತನ : ಮಾಸಿಕ ರೂ. 35,000/- (5,000 ಸ್ನಾತಕೋತ್ತರ ಭತ್ಯೆ)
ಶೈಕ್ಷಣಿಕ ಅರ್ಹತೆ : Post Graduate Degree in in Naturopathy & Yoga Science if Post Graduates are not available BNYS Degree may be considered with 3 years of experience, without PG allowance

ಉದ್ಯೋಗ ಮಾಹಿತಿ : ಚಾಮರಾಜನಗರ ಜಿಲ್ಲಾ ಪಂಚಾಯತ್ ನೇಮಕಾತಿ

5) ಹುದ್ದೆ : ಆಯುಷ್ ಔಷಧಿ ವಿತರಕರು
ಕರ್ತವ್ಯ ಸ್ಥಳ : ಹಾಸನ, ಹೊಳೆನರಸೀಪುರ, ಚೆನ್ನರಾಯಪಟ್ಟಣ, ಸಕಲೇಶಪುರ, ಅರಸೀಕೆರೆ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 06 ಹುದ್ದೆ
ವೇತನ : ಮಾಸಿಕ ರೂ. 15,821/-
ಶೈಕ್ಷಣಿಕ ಅರ್ಹತೆ : ಎಸ್.ಎಸ್.ಎಲ್.ಸಿ ಶೈಕ್ಷಣಿಕ ಅರ್ಹತೆ ಮತ್ತು ಔಷಧಿ ವಿಜ್ಞಾನದಲ್ಲಿ ಡಿಪ್ಲೋಮಾ ತರಬೇತಿ ಹೊಂದಿರಬೇಕು.

6) ಹುದ್ದೆ : ಮಸಾಜಿಸ್ಟ್
ಕರ್ತವ್ಯ ಸ್ಥಳ : ಹೊಳೆನರಸೀಪುರ, ಅರಸೀಕೆರೆ, ಸಕಲೇಶಪುರ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 04 ಹುದ್ದೆ
ವೇತನ : ಮಾಸಿಕ ರೂ. 11,356/-
ಶೈಕ್ಷಣಿಕ ಅರ್ಹತೆ : ಕನಿಷ್ಠ ಏಳನೇ ತರಗತಿ ಶೈಕ್ಷಣಿಕ ಅರ್ಹತೆ ಮತ್ತು ಆಯುಷ್ ಆಸ್ಪತ್ರೆ ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಗಳಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರಬೇಕು.

7) ಹುದ್ದೆ : ಕ್ಷಾರಸೂತ್ರ ಅಟೆಂಡರ್
ಕರ್ತವ್ಯ ಸ್ಥಳ : ಅರಸೀಕೆರೆ, ಹೊಳೆನರಸೀಪುರ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 02 ಹುದ್ದೆ
ವೇತನ : ಮಾಸಿಕ ರೂ. 11,356/-
ಶೈಕ್ಷಣಿಕ ಅರ್ಹತೆ : ಕನಿಷ್ಠ ಹತ್ತನೇ ತರಗತಿ ಶೈಕ್ಷಣಿಕ ಅರ್ಹತೆ ಹಾಗೂ ಆಯುಷ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.

8) ಹುದ್ದೆ : ಸ್ತ್ರೀ ರೋಗ ಅಟೆಂಡರ್
ಕರ್ತವ್ಯ ಸ್ಥಳ : ಅರಸೀಕೆರೆ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 01 ಹುದ್ದೆ
ವೇತನ : ಮಾಸಿಕ ರೂ. 11,356/-
ಶೈಕ್ಷಣಿಕ ಅರ್ಹತೆ : ಕನಿಷ್ಠ ಹತ್ತನೇ ತರಗತಿ ಶೈಕ್ಷಣಿಕ ಅರ್ಹತೆ ಹಾಗೂ ಆಯುಷ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.

9) ಹುದ್ದೆ : ಮಲ್ಟಿಪರ್ಪಸ್ ವರ್ಕರ್
ಕರ್ತವ್ಯ ಸ್ಥಳ : ಅರಸೀಕೆರೆ
ಖಾಲಿಯಿರುವ ಹುದ್ದೆಗಳ ಸಂಖ್ಯೆ : 01 ಹುದ್ದೆ
ವೇತನ : ಮಾಸಿಕ ರೂ. 10,300/-
ಶೈಕ್ಷಣಿಕ ಅರ್ಹತೆ : ಕನಿಷ್ಠ ಹತ್ತನೇ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರತಕ್ಕದ್ದು.

ವಯೋಮಾನ :
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ನಿಗದಿಪಡಿಸಲಾಗಿದೆ. ಹಾಗೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ – ಗರಿಷ್ಠ 40 ವರ್ಷ
ಪ್ರ1, 2ಎ, 2ಬಿ, 3ಎ, 3ಬಿ – ಗರಿಷ್ಠ 38 ವರ್ಷ
ಸಾಮಾನ್ಯ ಅಭ್ಯರ್ಥಿಗಳು – ಗರಿಷ್ಠ 35 ವರ್ಷ

ಹುದ್ದೆಯ ವಿಧ :
ಗುತ್ತಿಗೆ ಆಧಾರದ ಮೇಲೆ ಹುದ್ದೆಗಳಿಗೆ ನೇಮಕ

ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಯಲ್ಲಿ ಪಡೆದಿರುವ ಎಲ್ಲಾ ಪರೀಕ್ಷೆಗಳ ಅಂಕಗಳನ್ನು ಒಟ್ಟುಗೂಡಿಸಿ ಶೇಕಡವಾರು ಅಂಕಗಳಿಗೆ ಲೆಕ್ಕ ಮಾಡಿ ಮೆರಿಟ್, ಸಂದರ್ಶನ ಹಾಗೂ ಮೀಸಲಾತಿಯನ್ವಯ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು

ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಗಳು ಹಾಸನ ಜಿಲ್ಲಾ ಅಧಿಕೃತ ವೆಬ್‌ಸೈಟ್ www.hassan.nic.in ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ನಂತರ ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಕೆಯ ವಿಳಾಸ :
ಆಯುಷ್ ಇಲಾಖೆ, ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹೊಸಲೈನ್ ರಸ್ತೆ, ಹಾಸನ

ನಿಗದಿತ ಅರ್ಜಿ ಶುಲ್ಕದ ವಿವರ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಅಕ್ಟೋಬರ್ 09, 2020
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ನವೆಂಬರ್ 10, 2020

ಅಧಿಸೂಚನೆ : Click Here

ಕೊನೆಯ ಪದಗಳು :
ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.