KKRTC Recruitment 2024 : ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ, ಜಿಲ್ಲಾಧಿಕಾರಿಗಳ ಕಛೇರಿ, ಬೀದರ ರವರ ಮೂಲಕ ಹೊರಗುತ್ತಿಗೆಯ ಮೇಲೆ ನಿಯೋಜಿಸಿಕೊಳ್ಳಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ ವಿಭಾಗದ ವ್ಯಾಪ್ತಿಯ ಘಟಕಗಳ ಬಸ್ ಚಾಲನೆಗೆ ಚಾಲಕರು ಹಾಗೂ ವಾಹನಗಳ ನಿರ್ವಹಣೆಗೆ ತಾಂತ್ರಿಕ ಸಹಾಯಕರು ಬೇಕಿರುವದರಿಂದ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ Walk in Interview ಅನ್ನು ಏರ್ಪಡಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವಯೋಮಾನ, ವೇತನ, ನೇರ ಸಂದರ್ಶನ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
KKRTC Recruitment 2024 : Details of Vacancies
ಹುದ್ದೆ : ಚಾಲಕರು, ತಾಂತ್ರಿಕ ಸಹಾಯಕರು
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೀದರ ವಿಭಾಗದ ಬೀದರ-1, ಬೀದರ-2, ಭಾಲ್ಕಿ, ಔರಾದ ಬಸವಕಲ್ಯಾಣ ಮತ್ತು ಹುಮನಾಬಾದ ಘಟಕಗಳಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 150 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ |
ಚಾಲಕರು | 100 |
ತಾಂತ್ರಿಕ ಸಹಾಯಕರು | 50 |
ಶೈಕ್ಷಣಿಕ ಅರ್ಹತೆ :
• ಚಾಲಕ – ಎಸ್.ಎಸ್.ಎಲ್.ಸಿ ಜೊತೆಗೆ ಭಾರೀ ಪ್ರಯಾಣಿಕ/ಸರಕು ವಾಹನವನ್ನು ಓಡಿಸಲು ಎರಡು ವರ್ಷಗಳ HTV (Heavy Transport Vehicle) ಲೈಸೆನ್ಸ್ ಮತ್ತು ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕು.
• ತಾಂತ್ರಿಕ ಸಹಾಯಕ – ಎಸ್.ಎಸ್.ಎಲ್.ಸಿ ಜೊತೆಗೆ ಐ.ಟಿ.ಐ./ ಐ.ಟಿ.ಸಿ./ ಎನ್.ಎ.ಸಿ ಯನ್ನು ಮೆಕ್ಯಾನಿಕ್ (ಮೋಟಾರ್ ವೆಹಿಕಲ್)/ ಡಿಸೇಲ್ ಮೆಕ್ಯಾನಿಕ್/ ಆಟೋ ಇಲೆಕ್ಟ್ರಿಷಿಯನ್/ ವೆಲ್ಡರ್/ ಶೀಟ್ ಮೆಟಲ್ ವರ್ಕರ್/ ಇಲೆಕ್ಟ್ರಾನಿಕ್ ಮೆಕ್ಯಾನಿಕ್/ ಅಪ್ಹೋಲ್ಸ್ಟರಿ ಡ್ರಾಪ್ಟ್ ಮನ್ (ಮೆಕ್ಯಾನಿಕ್)/ ಫಿಟ್ಟರ್ ಮಶಿನಿಷ್ಟ್/ ಟೈರ್ ಫಿಟ್ಟಿಂಗ್/ ಪೇಂಟಿಂಗ್/ ರೆಫ್ರಿಜರೇಷನ್ & ಏರ್ ಕಂಡೀಷನಿಂಗ್/ ಟರ್ನರ್/ ಆಟೋಮೊಬೈಲ್/ ಇಲೆಕ್ಟ್ರಿಕಲ್/ ಇಲೆಕ್ಟ್ರಾನಿಕ್ಸ್/ ಪ್ಯಾಬ್ರಿಕೇಷನ್ ನಲ್ಲಿ ಹೊಂದಿರಬೇಕು.
ಉದ್ಯೋಗ ಮಾಹಿತಿ : ರೈಲ್ವೆ ಇಲಾಖೆ ನೇಮಕಾತಿ 2024
ವಯೋಮಾನ : ಅಭ್ಯರ್ಥಿಗಳು ದಿನಾಂಕ 04/12/2024ಕ್ಕೆ ಚಾಲಕ ಹುದ್ದೆಗೆ ಕನಿಷ್ಠ 24 ವರ್ಷ ಹಾಗೂ 07/12/2024ಕ್ಕೆ ತಾಂತ್ರಿಕ ಸಹಾಯಕ ಹುದ್ದೆಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
ವೇತನ :
ಹುದ್ದೆ | ವೇತನ |
ಚಾಲಕರು | 16973 |
ತಾಂತ್ರಿಕ ಸಹಾಯಕರು | 16550 |
ದೇಹದಾರ್ಢ್ಯತೆ :
• ಪುರುಷ (ಕನಿಷ್ಠ) – ಎತ್ತರ 163 ಸೆಂ.ಮೀ., ತೂಕ 55 ಕೆ.ಜಿ.
• ಮಹಿಳೆ (ಕನಿಷ್ಠ) – ಎತ್ತರ 153 ಸೆಂ.ಮೀ., ತೂಕ 50 ಕೆ.ಜಿ.
ಆಯ್ಕೆ ವಿಧಾನ : ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಉದ್ಯೋಗ ಮಾಹಿತಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಪೌರಕಾರ್ಮಿಕ ಹುದ್ದೆಗಳ ನೇಮಕಾತಿ 2024
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಕಛೇರಿಗೆ ಖುದ್ದಾಗಿ ಹಾಜರಾಗಿ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಹಂತ 1 : ನೇರ ಸಂದರ್ಶನಕ್ಕೆ ಹಾಜರಾಗುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಹಂತ 2 : ಅಭ್ಯರ್ಥಿಗಳು ನೇರ ಸಂದರ್ಶನ ದಿನದಂದು 12.00 ಗಂಟೆಯ ಒಳಗಾಗಿ ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಹಂತ 3 : ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳು, ಭಾವಚಿತ್ರ ಹಾಗೂ ಜೆರಾಕ್ಸ್ ಪ್ರತಿಯೊಂದಿಗೆ ಈ ಕೆಳಗಡೆ ನೀಡಲಾಗಿರುವ ಕಛೇರಿಯ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ಸ್ಥಳ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಛೇರಿ, ಬೀದರ್
ಸಂದರ್ಶನ ನಡೆಯುವ ದಿನಾಂಕದ ವಿವರ :
ಚಾಲಕ ಹುದ್ದೆಗೆ ನೇರ ಸಂದರ್ಶನ ದಿನಾಂಕ : ಡಿಸೆಂಬರ್ 02, 2024 ರಿಂದ ಡಿಸೆಂಬರ್ 04, 2024
ತಾಂತ್ರಿಕ ಸಹಾಯಕ ಹುದ್ದೆಗೆ ನೇರ ಸಂದರ್ಶನ ದಿನಾಂಕ : ಡಿಸೆಂಬರ್ 06, 2024 ರಿಂದ ಡಿಸೆಂಬರ್ 07, 2024
KKRTC Recruitment 2024 : Important Links
NOTIFICATION | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.