ಕೆಇಎಯಿಂದ ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳ ನೇಮಕಾತಿ 2026 – KEA SDA FDA Recruitment 2026

KEA SDA FDA Recruitment 2026

KEA SDA FDA Recruitment 2026 : ಕರ್ನಾಟಕ ರಾಜ್ಯದ ವಿವಿಧ ಇಲಾಖೆ/ ಸಂಸ್ಥೆ/ ನಿಗಮ/ ಮಂಡಳಿಗಳಲ್ಲಿನ ಉಳಿದ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಪದವಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹಾಗೂ ದ್ವಿತೀಯ ಪಿಯುಸಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

KEA SDA FDA Recruitment 2026 : Details of Vacancies

ಹುದ್ದೆ :

ಪದವಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳು –

ಲೆಕ್ಕ ಸಹಾಯಕರು, ವಾರ್ಡನ್ (ಪುರುಷ & ಮಹಿಳೆ), ಪ್ರಥಮ ದರ್ಜೆ ಸಹಾಯಕರು, ನಿಲಯ ಮೇಲ್ವಿಚಾರಕರು (ಪುರುಷ & ಮಹಿಳೆ), ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 (ಗ್ರಾಮ ಪಂಚಾಯಿತಿ), ಪ್ರಥಮ ದರ್ಜೆ ಸಹಾಯಕ ಕಂ. ಕಂಪ್ಯೂಟರ್ ಆಪರೇಟರ್, ನಿಲಯ ಪಾಲಕರು, ವಾಣಿಜ್ಯ ತೆರಿಗೆ ಪರಿವೀಕ್ಷಕರು, ಸಹಾಯಕರು, ಸಹಕಾರ ಸಂಘಗಳ ಲೆಕ್ಕಪರಿಶೋಧಕರು, ಉಪನೋಂದಣಾಧಿಕಾರಿ, ಪ್ರವಾಸೋದ್ಯಮ ಪ್ರಚಾರ ಅಧಿಕಾರಿ, ಹಿರಿಯ ಪ್ರವಾಸಿ ಪ್ರವರ್ತಕರು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು (ನಗರ ಸ್ಥಳೀಯ ಸಂಸ್ಥೆ), KMAS ಮುಖ್ಯಾಧಿಕಾರಿ ಶ್ರೇಣಿ-2 (ನಗರ ಸ್ಥಳೀಯ ಸಂಸ್ಥೆ), ಸಾಂಖ್ಯಿಕ ನಿರೀಕ್ಷಕರು, ಲೆಕ್ಕಿಗರು, ವಾರ್ತಾ ಸಹಾಯಕ, ಅಧೀಕ್ಷಕರು.

ದ್ವಿತೀಯ ಪಿಯುಸಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳು –

ದ್ವಿತೀಯ ದರ್ಜೆ ಸಹಾಯಕರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 (ಗ್ರಾಮ ಪಂಚಾಯಿತಿ), ಕಿರಿಯ ಲೆಕ್ಕ ಸಹಾಯಕ, ಕಿರಿಯ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಕಂ. ರೆಕಾರ್ಡ್ ಸಾರ್ಟರ್, ಪ್ರವಾಸಿ ಪ್ರವರ್ತಕರು, ಮಾರಾಟ ಸಹಾಯಕರು, ಗಣತಿದಾರರು ಕಂ. ಡಾಟಾ ಎಂಟ್ರಿ ಆಪರೇಟರ್.

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 5,431 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವೃಂದಪದವಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳ ಸಂಖ್ಯೆ ಪಿಯುಸಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳ ಸಂಖ್ಯೆ
ಉಳಿದ ಮೂಲ ವೃಂದ 21632070
ಕಲ್ಯಾಣ ಕರ್ನಾಟಕ ವೃಂದ 563635

ಶೈಕ್ಷಣಿಕ ಅರ್ಹತೆ :

ಪದವಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳು –

  • ಲೆಕ್ಕ ಸಹಾಯಕರು – ಬಿ.ಕಾಂ/ ಬಿ.ಬಿ.ಎಂ/ ಬಿ.ಬಿ.ಎ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.
  • ವಾರ್ಡನ್ (ಪುರುಷ)/ ವಾರ್ಡನ್ (ಮಹಿಳೆ) – ಪದವಿ ಮತ್ತು ಬ್ಯಾಚುಲರ್ ಆಫ್ ಎಜ್ಯುಕೇಷನ್(ಬಿ.ಇಡಿ) ಪದವಿ.
  • ನಿಲಯ ಮೇಲ್ವಿಚಾರಕರು (ಪುರುಷ & ಮಹಿಳೆ) – ಯಾವುದಾದರೂ ಒಂದು ಪದವಿ ಮತ್ತು ಬ್ಯಾಚುಲರ್ ಆಫ್ ಎಜ್ಯುಕೇಷನ್ (ಬಿ.ಇಡಿ) ಪದವಿ.
  • ಪ್ರಥಮ ದರ್ಜೆ ಸಹಾಯಕ ಕಂ. ಕಂಪ್ಯೂಟರ್ ಆಪರೇಟರ್ – ಸ್ನಾತಕೋತ್ತರ ಪದವಿ ಮತ್ತು ಒಂದು ವರ್ಷದ ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರ.
  • ನಿಲಯ ಪಾಲಕರು – ಸ್ನಾತಕ ಪದವಿ ಮತ್ತು ಬ್ಯಾಚುಲರ್ ಆಫ್ ಎಜ್ಯುಕೇಷನ್ (ಬಿ.ಇಡಿ) ಪದವಿ.
  • ವಾಣಿಜ್ಯ ತೆರಿಗೆ ಪರಿವೀಕ್ಷಕರು – ಅರ್ಥಶಾಸ್ತ್ರ / ಗಣಿತವನ್ನು ಒಂದು ವಿಷಯವಾಗಿ ಹೊಂದಿರುವ ಪದವಿ ಅಥವಾ ವಾಣಿಜ್ಯಶಾಸ್ತ್ರದಲ್ಲಿ ಪದವಿ.
  • ಸಹಕಾರ ಸಂಘಗಳ ಲೆಕ್ಕಪರಿಶೋಧಕರು – ವಾಣಿಜ್ಯಶಾಸ್ತ್ರ ಪದವಿ (ಅಕೌಂಟೆನ್ಸಿ ಮತ್ತು ಆಡಿಟಿಂಗ್ ಒಂದು ವಿಷಯವಾಗಿ ಹೊಂದಿರಬೇಕು)
  • ಪ್ರವಾಸೋದ್ಯಮ ಪ್ರಚಾರ ಅಧಿಕಾರಿ – ಡಿಗ್ರಿ ಇನ್ ಟ್ಯೂರಿಸಮ್ ಕಮ್ಯೂನಿಕೇಶನ್, ಹಿಸ್ಟರಿ, ಐಡಿಯಾಲಜಿ, ಆರ್ಕಿಯಾಲಜಿ, ಜರ್ನಲಿಸಂ ಅಥವಾ ಪದವಿ ಮತ್ತು ಡಿಪ್ಲೊಮಾ ಇನ್ ಹೊಟೇಲ್ ಮ್ಯಾನೇಜ್ಮೆಂಟ್.
  • ಸಹಾಯಕ/ ಪ್ರಥಮ ದರ್ಜೆ ಸಹಾಯಕರು/ ಉಪ ನೋಂದಣಾಧಿಕಾರಿ/ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1/ ಹಿರಿಯ ಪ್ರವಾಸಿ ಪ್ರವರ್ತಕರು/ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು/ KMAS ಮುಖ್ಯಾಧಿಕಾರಿ ಶ್ರೇಣಿ-2 – ಪದವಿ ವಿದ್ಯಾರ್ಹತೆ.
  • ಸಾಂಖ್ಯಿಕ ನಿರೀಕ್ಷಕರು – ಬ್ಯಾಚುಲರ್ ಡಿಗ್ರಿ (ಎಕಾನಾಮಿಕ್ಸ್/ ಸ್ಟ್ಯಾಟಿಸ್ಟಿಕ್ಸ್/ ಮೆಥೆಮೆಟಿಕ್ಸ್/ ಕಂಪ್ಯೂಟರ್ ಸೈನ್ಸ್)
  • ಲೆಕ್ಕಿಗರು – ಬಿ.ಕಾಂ ಪದವಿ (ಅಕೌಂಟೆನ್ಸಿ ಮತ್ತು ಕಾಮರ್ಸ್)
  • ವಾರ್ತಾ ಸಹಾಯಕ – ಪದವಿ ವಿದ್ಯಾರ್ಹತೆ ಮತ್ತು ಪತ್ರಿಕೆ, ಸುದ್ದಿ ಸಂಸ್ಥೆ, ಗವರ್ನಮೆಂಟ್ ಪಬ್ಲಿಸಿಟಿ ಆಫೀಸರ್ ಆಗಿ ಪ್ರಚಾರ ಕಾರ್ಯದಲ್ಲಿ ಒಂದು ವರ್ಷದ ಅನುಭವ.
  • ಅಧೀಕ್ಷಕರು – ವಾಣಿಜ್ಯಶಾಸ್ತ್ರ (ಬಿ.ಕಾಂ.) ಪದವಿ ಮತ್ತು ಕಂಪ್ಯೂಟರ್ ಜ್ಞಾನ ಪ್ರಮಾಣ ಪತ್ರ.

ದ್ವಿತೀಯ ಪಿಯುಸಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳು –

  • ಕಿರಿಯ ಲೆಕ್ಕ ಸಹಾಯಕ – ವಾಣಿಜ್ಯ ವಿಭಾಗದಲ್ಲಿ ಅಕೌಂಟೆನ್ಸಿ ವಿಷಯವನ್ನು ಐಚ್ಛಿಕ ವಿಷಯವಾಗಿ ಪಿಯುಸಿ ವಿದ್ಯಾರ್ಹತೆ.
  • ದ್ವಿತೀಯ ದರ್ಜೆ ಲೆಕ್ಕ ಸಹಾಯಕ – ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯಶಾಸ್ತ್ರ ವಿದ್ಯಾರ್ಹತೆ.
  • ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ/ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2/ ದ್ವಿತೀಯ ದರ್ಜೆ ಸಹಾಯಕ ಕಂ. ರೆಕಾರ್ಡ್ ಸಾರ್ಟರ್/ ಪ್ರವಾಸಿ ಪ್ರವರ್ತಕರು/ ಮಾರಾಟ ಸಹಾಯಕ – ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ.
  • ಗಣತಿದಾರರು ಕಂ. ಡಾಟಾ ಎಂಟ್ರಿ ಆಪರೇಟರ್ – ದ್ವಿತೀಯ ಪಿಯುಸಿ ವಿದ್ಯಾರ್ಹತೆ.

ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆಗಳ ಬೃಹತ್ ನೇಮಕಾತಿ 2026

ವಯೋಮಾನ (ದಿನಾಂಕ 25/11/2026ಕ್ಕೆ) :

  • ಕನಿಷ್ಠ 18 ವರ್ಷ ಪೂರೈಸಿರಬೇಕು.
  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷ
  • ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 45 ವರ್ಷ

ವೇತನ :

ಹುದ್ದೆವೇತನ
ಪ್ರವಾಸೋದ್ಯಮ ಪ್ರಚಾರ ಅಧಿಕಾರಿ, ಅಧೀಕ್ಷಕರು (ಲೆಕ್ಕಪತ್ರ)ರೂ. 61,300 – ರೂ. 1,12,900
ವಾಣಿಜ್ಯ ತೆರಿಗೆ ಪರಿವೀಕ್ಷಕರು, ಉಪನೋಂದಣಾಧಿಕಾರಿ, KMAS ಮುಖ್ಯಾಧಿಕಾರಿ ಶ್ರೇಣಿ-2 (ನಗರ ಸ್ಥಳೀಯ ಸಂಸ್ಥೆ), ವಾರ್ತಾ ಸಹಾಯಕರೂ. 54,175 – ರೂ. 99,400
ಸಹಾಯಕ, ಲೆಕ್ಕಿಗರುರೂ. 49,050 – ರೂ. 92,500
ಲೆಕ್ಕ ಸಹಾಯಕರು/ ಪ್ರಥಮ ದರ್ಜೆ ಸಹಾಯಕ/ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 (ಗ್ರಾಮ ಪಂಚಾಯಿತಿ)/ ನಿಲಯ ಮೇಲ್ವಿಚಾರಕರು/ ನಿಲಯಪಾಲಕರು/ ವಾರ್ಡನ್/ ಸಹಕಾರ ಸಂಘಗಳ ಲೆಕ್ಕಪರಿಶೋಧಕರು/ ಪ್ರಥಮ ದರ್ಜೆ ಸಹಾಯಕರು ಕಂ. ಕಂಪ್ಯೂಟರ್ ಆಪರೇಟರ್/ ಹಿರಿಯ ಪ್ರವಾಸಿ ಪ್ರವರ್ತಕರು/ ಸಾಂಖ್ಯಿಕ ನಿರೀಕ್ಷಕರು/ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಸಹಾಯಕರೂ. 44,425 – ರೂ. 83,700
ಕಿರಿಯ ಲೆಕ್ಕ ಸಹಾಯಕ/ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2/ ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ ಕಂ. ರೆಕಾರ್ಡ್ ಸಾರ್ಟರ್/ ಪ್ರವಾಸಿ ಪ್ರವರ್ತಕರು/ ಗಣತಿದಾರರು ಕಂ. ಡಾಟಾ ಎಂಟ್ರಿ ಆಪರೇಟರ್/ ಮಾರಾಟ ಸಹಾಯಕರು/ ದ್ವಿತೀಯ ದರ್ಜೆ ಲೆಕ್ಕ ಸಹಾಯಕರೂ. 34,100 – ರೂ. 67,600

ಆಯ್ಕೆ ವಿಧಾನ :

ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್‌ಲೈನ್‌-ಒಎಂಆರ್ ಮಾದರಿಯಲ್ಲಿ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದು ಭಾಗದಷ್ಟು ಅಂಕಗಳನ್ನು ಕಳೆಯಲಾಗುವುದು)

ಸ್ಪರ್ಧಾತ್ಮಕ ಪರೀಕ್ಷಾ ಮಾದರಿ –

ಪದವಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳ ಪರೀಕ್ಷಾ ಮಾದರಿ –

ಕೆಇಎಯಿಂದ ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳ ನೇಮಕಾತಿ 2026 – KEA SDA FDA Recruitment 2026

ದ್ವಿತೀಯ ಪಿಯುಸಿ ಮಟ್ಟದ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳ ಪರೀಕ್ಷಾ ಮಾದರಿ –

ಕೆಇಎಯಿಂದ ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳ ನೇಮಕಾತಿ 2026 – KEA SDA FDA Recruitment 2026

ಉದ್ಯೋಗ ಮಾಹಿತಿ : ಇಸ್ರೋದಲ್ಲಿ ಹುದ್ದೆಗಳ ನೇಮಕಾತಿ 2026

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

  • ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 750
  • ಎಸ್ಸಿ, ಎಸ್ಟಿ, ಪ್ರ 1, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿಗಳು – ರೂ. 500
  • ವಿಕಲಚೇತನ ಅಭ್ಯರ್ಥಿಗಳು – ರೂ. 250

ಶುಲ್ಕ ಪಾವತಿಸುವ ವಿಧಾನ :

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಅಕ್ಟೋಬರ್ 30, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 25, 2026
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ : ನವೆಂಬರ್ 26, 2026

KEA SDA FDA Recruitment 2026 : Important Links

FDA NOTIFICATION – RPCCLICK HERE
SDA NOTIFICATION – RPCCLICK HERE
FDA NOTIFICATION – KKCLICK HERE
SDA NOTIFICATION – KKCLICK HERE
APPLY ONLINE CLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment