DHFWS Ballari Recruitment 2024 : ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Ballari Recruitment 2024 : Details of Vacancies
ಹುದ್ದೆ : ಬ್ಲಾಕ್ ಎಪಿಡೆಮಿಯೋಲಾಜಿಸ್ಟ್, ಶುಶ್ರೂಷಕಿಯರು, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೈರ್ಡ್ ಚಿಲ್ಡ್ರನ್, ಡಿಸ್ಟ್ರಿಕ್ಟ್ ಕೋಆರ್ಡಿನೇಟರ್, ಕಿರಿಯ ಆರೋಗ್ಯ ಸಹಾಯಕರು, ಆಪ್ತ ಸಮಾಲೋಚಕರು.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 62 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
ಬ್ಲಾಕ್ ಎಪಿಡೆಮಿಯೋಲಾಜಿಸ್ಟ್ | 1 | 30,000 |
ಶುಶ್ರೂಷಕಿಯರು | 45 | 14,186-17,059 |
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ | 1 | 15,000 |
ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೈರ್ಡ್ ಚಿಲ್ಡ್ರನ್ | 1 | 15,000 |
ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ | 1 | 30,000 |
ಕಿರಿಯ ಆರೋಗ್ಯ ಸಹಾಯಕರು | 12 | 14,044-16,886 |
ಆಪ್ತ ಸಮಾಲೋಚಕರು | 1 | 14,558-17,059 |
ಶೈಕ್ಷಣಿಕ ಅರ್ಹತೆ :
• ಬ್ಲಾಕ್ ಎಪಿಡೆಮಿಯೋಲಾಜಿಸ್ಟ್ – ವೈದ್ಯಕೀಯ ಪದವೀಧರ ಜೊತೆಗೆ ಸೋಷಿಯಲ್ ಮೆಡಿಸಿನ್/ ಪಬ್ಲಿಕ್ ಹೆಲ್ತ್/ ಎಪಿಡೆಮೋಲಾಜಿಯಲ್ಲಿ (MD, MPH, DPH, MAE) ಸ್ನಾತಕೋತ್ತರ ಪದವಿ ಹೊಂದಿರಬೇಕು.
• ಶುಶ್ರೂಷಕಿಯರು – ಬಿ.ಎಸ್.ಸಿ ನರ್ಸಿಂಗ್ ಅಥವಾ ಜಿ.ಎನ್.ಎಂ. ತರಬೇತಿ ಹಾಗೂ ಕೆ.ಎಂ.ಸಿ ನೋಂದಣಿ.
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ – ಒಂದು ವರ್ಷದ ಡಿಪ್ಲೊಮಾ ಇನ್ ಹಿಯರಿಂಗ್ ಲ್ಯಾಂಗ್ವೇಜ್ (ಡಿ.ಹೆಚ್.ಎಲ್.ಎಸ್).
• ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೈರ್ಡ್ ಚಿಲ್ಡ್ರನ್ – ಯುವ ಕಿವುಡು ಮತ್ತು ಶ್ರವಣ ನ್ಯೂನತೆಯ ತರಬೇತಿಯಲ್ಲಿ ಡಿಪ್ಲೊಮಾ (ಡಿ.ಟಿ.ವೈ.ಡಿ.ಹೆಚ್.ಹೆಚ್)
• ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ – ಬಿಡಿಎಸ್/ ಬಿಎಎಂಎಸ್/ ಬಿ.ಹೆಚ್.ಎಂ.ಎಸ್/ ಬಿಯುಎಂಎಸ್/ ಬಿ.ವೈ.ಎನ್.ಎಸ್/ ಎಂ.ಎಸ್.ಸಿ ಲೈಪ್ ಸೈನ್ಸ್/ ಬಿ.ಎಸ್.ಸಿ ನರ್ಸಿಂಗ್ ಜೊತೆಗೆ ಎಂಪಿಹೆಚ್/ಎಂಬಿಎ.
• ಕಿರಿಯ ಆರೋಗ್ಯ ಸಹಾಯಕರು – ಎಸ್.ಎಸ್.ಎಲ್.ಸಿ ಮತ್ತು ಆರೋಗ್ಯ ಕಾರ್ಯಕರ್ತರ ತರಬೇತಿ ಅಥವಾ ಎಸ್.ಎಸ್.ಎಲ್.ಸಿ ಮತ್ತು 3 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಅಥವಾ ಪಿಯುಸ್ ಮತ್ತು 2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ.
• ಆಪ್ತ ಸಮಾಲೋಚಕರು – ವಿಜ್ಞಾನ ವಿಷಯದಲ್ಲಿ ಪದವಿ ಅಥವಾ ಆಪ್ತ ಸಲಹೆ/ ಆರೋಗ್ಯ ಶಿಕ್ಷಣ/ ಸಮೂಹ ಸಂವಹನದಲ್ಲಿ ಪದವಿ/ ಡಿಪ್ಲೊಮಾ.
ಉದ್ಯೋಗ ಮಾಹಿತಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ ಹುದ್ದೆಗಳ ನೇಮಕಾತಿ 2024
ವಯೋಮಾನ :
ಹುದ್ದೆ | ವಯೋಮಾನ |
ಬ್ಲಾಕ್ ಎಪಿಡೆಮಿಯೋಲಾಜಿಸ್ಟ್ | 40 ವರ್ಷ |
ಶುಶ್ರೂಷಕಿಯರು | 45 ವರ್ಷ |
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ | 45 ವರ್ಷ |
ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೈರ್ಡ್ ಚಿಲ್ಡ್ರನ್ | 45 ವರ್ಷ |
ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ | – |
ಕಿರಿಯ ಆರೋಗ್ಯ ಸಹಾಯಕರು | ಸಾ. 35 ವರ್ಷ, ಹಿಂ. ವರ್ಗ 38 ವರ್ಷ, ಪ.ಜಾತಿ, ಪ.ಪಂ. ಪ್ರ1 40 ವರ್ಷ |
ಆಪ್ತ ಸಮಾಲೋಚಕರು | – |
ಆಯ್ಕೆ ವಿಧಾನ : ರೋಸ್ಟರ್ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ), ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವಿಳಾಸ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಂಗಣ, ಬಳ್ಳಾರಿ.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಮೂಲ ದಾಖಲಾತಿಗಳ ಪರಿಶೀಲನೆ ದಿನಾಂಕ : ಅಕ್ಟೋಬರ್ 04, 2024 ಬೆಳಿಗ್ಗೆ 9.30ಕ್ಕೆ
DHFWS Ballari Recruitment 2024 : Important Links
NOTIFICATION & APPLICATION FORM | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.