BARC Recruitment 2023 – Apply Online for 4374 Technical Officer, Scientific Assistant and Various Posts

BARC Recruitment 2023 : ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ನಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಆಯ್ಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

BARC Recruitment 2023 : Details of Vacancies

ಹುದ್ದೆ : ಟೆಕ್ನಿಕಲ್ ಆಫೀಸರ್/ಸಿ, ಸೈಂಟಿಫಿಕ್ ಅಸಿಸ್ಟಂಟ್/ಬಿ, ಟೆಕ್ನೀಷಿಯನ್/ಬಿ ಮತ್ತು ಟ್ರೈನಿಂಗ್ ಸ್ಕೀಮ್‌ ಅಡಿಯಲ್ಲಿ ಸ್ಟೈಫಂಡರಿ ಟ್ರೈನಿ ಕೆಟಗರಿ 1, ಕೆಟಗರಿ 2

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 4374 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ ವೇತನ/ಸ್ಟೈಫಂಡ್
ಟೆಕ್ನಿಕಲ್ ಆಫೀಸರ್/ಸಿ18156,100
ಸೈಂಟಿಫಿಕ್ ಅಸಿಸ್ಟಂಟ್/ಬಿ735,400
ಟೆಕ್ನೀಷಿಯನ್/ಬಿ2421,700
ಸ್ಟೈಫಂಡರಿ ಟ್ರೈನಿ ಕೆಟಗರಿ 1121624,000/ 26,000
ಸ್ಟೈಫಂಡರಿ ಟ್ರೈನಿ ಕೆಟಗರಿ 2294620,000/ 22,000

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
• ಟೆಕ್ನಿಕಲ್ ಆಫೀಸರ್/ಸಿ – ಎಂ.ಎಸ್ಸಿ (ಬಯೋ-ಸೈನ್ಸ್/ ಲೈಪ್ ಸೈನ್ಸ್/ ಬಯೋಕೆಮಿಸ್ಟ್ರಿ/ ಮೈಕ್ರೋಬಯಾಲಜಿ/ ಬಯೋಟೆಕ್ನಾಲಜಿ), ಎಂ.ಎಸ್ಸಿ (ಕೆಮಿಸ್ಟ್ರಿ), ಎಂ.ಎಸ್ಸಿ (ಫಿಸಿಕ್ಸ್), ಬಿಇ/ಬಿ.ಟೆಕ್ (ಆರ್ಕಿಟೆಕ್ಚರ್), ಬಿಇ/ಬಿ.ಟೆಕ್ (ಕೆಮಿಕಲ್), ಬಿಇ/ಬಿ.ಟೆಕ್ (ಸಿವಿಲ್), ಬಿಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್/ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್), ಬಿಇ/ಬಿ.ಟೆಕ್ (ಮೆಕ್ಯಾನಿಕಲ್/ ಡ್ರಿಲ್ಲಿಂಗ್), ಬಿಇ/ಬಿ.ಟೆಕ್ (ಇಲೆಕ್ಟ್ರಿಕಲ್/ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್), ಬಿಇ/ಬಿ.ಟೆಕ್ (ಇನ್ಸ್ಟ್ರುಮೆಂಟೇಶನ್/ ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್), ಬಿಇ/ಬಿ.ಟೆಕ್ (ಮೆಕ್ಯಾನಿಕಲ್), ಬಿಇ/ಬಿ.ಟೆಕ್ (ಮೈನಿಂಗ್) ಪದವಿಯನ್ನು ಶೇಕಡಾ 60% ಅಂಕಗಳೊಂದಿಗೆ ಹೊಂದಿರಬೇಕು. ಶೇಕಡಾ 55% ಅಂಕಗಳೊಂದಿಗೆ ಎಂ.ಲಿಬ್ (ಇನ್ಫರ್ಮೇಷನ್ ಸೈನ್ಸ್) ಜೊತೆಗೆ 4 ವರ್ಷಗಳ ಅನುಭವ/ ಎಂ.ಲಿಬ್ (ಇನ್ಫರ್ಮೇಷನ್ ಸೈನ್ಸ್) ಜೊತೆಗೆ ಎನ್.ಇ.ಟಿ ಪಾಸ್ ಆಗಿರಬೇಕು.

• ಸೈಂಟಿಫಿಕ್ ಅಸಿಸ್ಟಂಟ್/ಬಿ – ಶೇಕಡಾ 60% ಅಂಕಗಳೊಂದಿಗೆ ಬಿ.ಎಸ್ಸಿ (ಫುಡ್ ಟೆಕ್ನಾಲಜಿ/ ಹೋಮ್ ಸೈನ್ಸ್/ ನ್ಯೂಟ್ರಿಷನ್) ಪದವಿ ಹೊಂದಿರಬೇಕು.

• ಟೆಕ್ನೀಷಿಯನ್/ಬಿ – ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಹೊಂದಿರಬೇಕು.

• ಸ್ಟೈಫಂಡರಿ ಟ್ರೈನಿ ಕೆಟಗರಿ 1 – ಶೇಕಡಾ 60% ಅಂಕಗಳೊಂದಿಗೆ ಬಿ.ಎಸ್ಸಿ (ಬಯೋಕೆಮಿಸ್ಟ್ರಿ/ ಬಯೋಸೈನ್ಸ್/ ಲೈಪ್ ಸೈನ್ಸ್/ ಬಯಾಲಜಿ), ಬಿ.ಎಸ್ಸಿ (ಕೆಮಿಸ್ಟ್ರಿ), ಬಿ.ಎಸ್ಸಿ (ಫಿಸಿಕ್ಸ್), ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್), ಬಿ.ಎಸ್ಸಿ (ಅಗ್ರಿಕಲ್ಚರ್), ಬಿ.ಎಸ್ಸಿ (ಹೊರ್ಟಿಕಲ್ಚರ್), ಡಿಪ್ಲೊಮಾ (ಕೆಮಿಕಲ್), ಡಿಪ್ಲೊಮಾ (ಇಲೆಕ್ಟ್ರಿಕಲ್), ಡಿಪ್ಲೊಮಾ (ಮೆಕ್ಯಾನಿಕಲ್), ಡಿಪ್ಲೊಮಾ (ಆರ್ಕಿಟೆಕ್ಚರ್), ಡಿಪ್ಲೊಮಾ (ಸಿವಿಲ್), ಡಿಪ್ಲೊಮಾ (ಆಟೋಮೊಬೈಲ್) ಪದವಿ ಹೊಂದಿರಬೇಕು.

• ಸ್ಟೈಫಂಡರಿ ಟ್ರೈನಿ ಕೆಟಗರಿ 2 – ಕನಿಷ್ಠ 60% ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ (ವಿಜ್ಞಾನ ಮತ್ತು ಗಣಿತ) ವಿದ್ಯಾರ್ಹತೆ ಹೊಂದಿರಬೇಕು ಜೊತೆಗೆ ಆಯಾ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು/ ದ್ವಿತೀಯ ಪಿಯುಸಿ (ಸೈನ್ಸ್) ವಿದ್ಯಾರ್ಹತೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2023

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಟೆಕ್ನಿಕಲ್ ಆಫೀಸರ್/ಸಿ – ಗರಿಷ್ಠ 35 ವರ್ಷ
• ಸೈಂಟಿಫಿಕ್ ಅಸಿಸ್ಟಂಟ್/ಬಿ – ಗರಿಷ್ಠ 30 ವರ್ಷ
• ಟೆಕ್ನೀಷಿಯನ್/ಬಿ – ಗರಿಷ್ಠ 25 ವರ್ಷ
• ಸ್ಟೈಫಂಡರಿ ಟ್ರೈನಿ ಕೆಟಗರಿ 2 – ಗರಿಷ್ಠ 22 ವರ್ಷ
• ಸ್ಟೈಫಂಡರಿ ಟ್ರೈನಿ ಕೆಟಗರಿ 1 – ಕನಿಷ್ಠ 19 ವರ್ಷ, ಗರಿಷ್ಠ 24 ವರ್ಷ

ವಯೋಮಿತಿ ಸಡಿಲಿಕೆ :
• ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ
• ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ
• ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ

ಆಯ್ಕೆ ವಿಧಾನ :
• ಟೆಕ್ನಿಕಲ್ ಆಫೀಸರ್/ಸಿ, ಸೈಂಟಿಫಿಕ್ ಅಸಿಸ್ಟಂಟ್/ಬಿ, ಸ್ಟೈಫಂಡರಿ ಟ್ರೈನಿ ಕೆಟಗರಿ 1 – ಕಂಪ್ಯೂಟರ್ ಆಧಾರಿತ ಸ್ಕ್ರೀನಿಂಗ್ ಟೆಸ್ಟ್ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

• ಟೆಕ್ನೀಷಿಯನ್/ಬಿ, ಸ್ಟೈಫಂಡರಿ ಟ್ರೈನಿ ಕೆಟಗರಿ 2 – ಪ್ರಿಲಿಮಿನರಿ ಟೆಸ್ಟ್, ಅಡ್ವಾನ್ಸ್ಡ್ ಟೆಸ್ಟ್, ಸ್ಕಿಲ್ ಟೆಸ್ಟ್ ನಡೆಸಿ ಆಯ್ಕೆ ಮಾಡಲಾಗುವುದು.

ಪರೀಕ್ಷಾ ಕೇಂದ್ರಗಳು : ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಕೇಂದ್ರಗಳು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :
• ಟೆಕ್ನಿಕಲ್ ಆಫೀಸರ್/ಸಿ – ರೂ. 500
• ಸೈಂಟಿಫಿಕ್ ಅಸಿಸ್ಟಂಟ್/ಬಿ, ಸ್ಟೈಫಂಡರಿ ಟ್ರೈನಿ ಕೆಟಗರಿ 1 – ರೂ. 150
• ಟೆಕ್ನೀಷಿಯನ್/ಬಿ, ಸ್ಟೈಫಂಡರಿ ಟ್ರೈನಿ ಕೆಟಗರಿ 2 – ರೂ. 100
(ಮಹಿಳಾ, ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ)

ಶುಲ್ಕ ಪಾವತಿಸುವ ವಿಧಾನ : ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಏಪ್ರಿಲ್ 24, 2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮೇ 22, 2023

BARC Recruitment 2023 : Important Links

NOTIFICATIONCLICK HERE
APPLY ONLINE CLICK HERE
Telegram Join Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment