BBMP Recruitment 2023 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
BBMP Recruitment 2023 : Details of Vacancies
ಹುದ್ದೆ : ಪ್ಯಾರಾ ಮೆಡಿಕಲ್ ವರ್ಕರ್, ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕರು, ಸೈಕಿಯಾಟ್ರಿಕ್ ನರ್ಸ್, ಕಮ್ಯೂನಿಟಿ ನರ್ಸ್, ಮೆಡಿಕಲ್ ಆಫೀಸರ್, ಕಮ್ಯೂನಿಟಿ ಮೊಬಿಲೈಜರ್, ಜೋನಲ್ ಅಕೌಂಟ್ಸ್ ಮ್ಯಾನೇಜರ್, ಡೆಂಟಿಸ್ಟ್, ಆಶಾ ಮೆಂಟರ್, ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್, ಸೈಕಾಲಜಿಸ್ಟ್, ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್, ಆರ್.ಬಿ.ಎಸ್.ಕೆ ಮೆಡಿಕಲ್ ಆಫೀಸರ್
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 49 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
| ಪ್ಯಾರಾ ಮೆಡಿಕಲ್ ವರ್ಕರ್ | 2 | 16800 |
| ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕರು | 2 | 21000 |
| ಸೈಕಿಯಾಟ್ರಿಕ್ ನರ್ಸ್ | 1 | 14000 |
| ಕಮ್ಯೂನಿಟಿ ನರ್ಸ್ | 1 | 14000 |
| ಮೆಡಿಕಲ್ ಆಫೀಸರ್ | 29 | 47250 |
| ಕಮ್ಯೂನಿಟಿ ಮೊಬಿಲೈಜರ್ | 1 | 50000 |
| ಜೋನಲ್ ಅಕೌಂಟ್ಸ್ ಮ್ಯಾನೇಜರ್ | 2 | 17000 |
| ಡೆಂಟಿಸ್ಟ್ | 4 | 63000 |
| ಆಶಾ ಮೆಂಟರ್ | 3 | 15600 |
| ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್ | 1 | 40000 |
| ಸೈಕಾಲಜಿಸ್ಟ್ | 1 | 25000 |
| ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ | 1 | 13135 |
| ಆರ್.ಬಿ.ಎಸ್.ಕೆ ಮೆಡಿಕಲ್ ಆಫೀಸರ್ | 1 | 25000 |
ಶೈಕ್ಷಣಿಕ ಅರ್ಹತೆ :
• ಪ್ಯಾರಾ ಮೆಡಿಕಲ್ ವರ್ಕರ್ – ಹೈಸ್ಕೂಲ್/ ಪಿಯುಸಿ ಜೊತೆಗೆ PMW ಟ್ರೈನಿಂಗ್ ಸರ್ಟಿಫಿಕೇಟ್ ಹೊಂದಿರಬೇಕು ಅಥವಾ ಎಂ.ಎಸ್.ಡಬ್ಲ್ಯೂ/ ಬಿ.ಎಸ್ಸಿ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು.
• ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕರು – ಬಿ.ಎಸ್ಸಿ ಎಲ್.ಟಿ ಅಥವಾ ಡಿಪ್ಲೊಮಾ ಇನ್ ಮೆಡಿಕಲ್ ಲೆಬೋರೆಟರಿ ಟೆಕ್ನಾಲಜಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 1 ವರ್ಷಗಳ ಅನುಭವ ಹೊಂದಿರಬೇಕು.
• ಸೈಕಿಯಾಟ್ರಿಕ್ ನರ್ಸ್ & ಕಮ್ಯೂನಿಟಿ ನರ್ಸ್ – ಬಿ.ಎಸ್ಸಿ ನರ್ಸಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
• ಮೆಡಿಕಲ್ ಆಫೀಸರ್ – ಎಂ.ಬಿ.ಬಿ.ಎಸ್ ಪದವಿ ಪಡೆದಿರಬೇಕು. ಕನ್ನಡ ಭಾಷೆ, ಕೆ.ಎಂ.ಸಿ ನೋಂದಣಿ ಕಡ್ಡಾಯ.
• ಕಮ್ಯೂನಿಟಿ ಮೊಬಿಲೈಜರ್ – ಸೋಷಿಯಲ್ ವರ್ಕ್ ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
• ಜೋನಲ್ ಅಕೌಂಟ್ಸ್ ಮ್ಯಾನೇಜರ್ – ಎಂ.ಕಾಂ ಜೊತೆಗೆ ಟ್ಯಾಲಿ ಸರ್ಟಿಫಿಕೇಟ್ ಹೊಂದಿರಬೇಕು.
• ಡೆಂಟಿಸ್ಟ್ – ಬಿಡಿಎಸ್ ಜೊತೆಗೆ ಕನಿಷ್ಠ 3 ವರ್ಷಗಳ ಅನುಭವ ಅಥವಾ ಎಂಡಿಎಸ್
• ಆಶಾ ಮೆಂಟರ್ – ಜಿ.ಎನ್.ಎಂ/ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೊಮಾ ನರ್ಸಿಂಗ್ (ಎ.ಎನ್.ಎಂ) ಜೊತೆಗೆ ಕೆ.ಎನ್.ಸಿ ನೋಂದಣಿ ಮತ್ತು 2 ಅಥವಾ 3 ವರ್ಷಗಳ ಅನುಭವ.
• ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್ & ಸೈಕಾಲಜಿಸ್ಟ್ – ಸ್ನಾತಕೋತ್ತರ ಪದವಿ ಹೊಂದಿರಬೇಕು. 2 ವರ್ಷಗಳ ಅನುಭವ ಹೊಂದಿರಬೇಕು.
• ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ – ಜಿ.ಎನ್.ಎಂ/ ಎ.ಎನ್.ಎಂ/ ಬಿ.ಎಸ್ಸಿ (ನರ್ಸಿಂಗ್) ಅಥವಾ ಪಬ್ಲಿಕ್ ಹೆಲ್ತ್ ಡಿಪ್ಲೊಮಾ/ ಸೋಷಿಯಲ್ ವರ್ಕ್/ ಸೋಷಿಯಲ್ ಸೈನ್ಸ್ ಪದವಿ/ ಸ್ನಾತಕೋತ್ತರ ಪದವಿ. 2-3 ವರ್ಷಗಳ ಅನುಭವ.
• ಆರ್.ಬಿ.ಎಸ್.ಕೆ ಮೆಡಿಕಲ್ ಆಫೀಸರ್ – ಬಿ.ಎ.ಎಂ.ಎಸ್. 2 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಾನ :
• ಸಾಮಾನ್ಯ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ, ಪ.ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
ಆಯ್ಕೆ ವಿಧಾನ : ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ 01 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಆಯ್ಕೆ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು
ಉದ್ಯೋಗ ಮಾಹಿತಿ : ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ 2023
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ವಾಕ್ ಇನ್ ಆಯ್ಕೆ ಪ್ರಕ್ರಿಯೆಗೆ ಹಾಜರಾಗಬೇಕು.
ವಾಕ್ ಇನ್ ಪ್ರಕ್ರಿಯೆ ನಡೆಯುವ ಸ್ಥಳ : ಡಾ|| ರಾಜ್ ಕುಮಾರ್ ಗಾಜಿನ ಮನೆ, ಬಿಬಿಎಂಪಿ ಕೇಂದ್ರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು – 560002
ವಾಕ್ ಇನ್ ಪ್ರಕ್ರಿಯೆ ದಿನಾಂಕ :
ವಾಕ್ ಇನ್ ಪ್ರಕ್ರಿಯೆ ನಡೆಯುವ ದಿನಾಂಕ : ಮಾರ್ಚ್ 01, 2023 ರಿಂದ ಮಾರ್ಚ್ 03, 2023ರವರೆಗೆ, ಸಮಯ ಬೆಳಿಗ್ಗೆ 10:30 ರಿಂದ ಸಂಜೆ 4:30 ರವರೆಗೆ
BBMP Recruitment 2023 : Important Links
| NOTIFICATION | CLICK HERE |
| APPLICATION FORM | CLICK HERE |
| Telegram Join Link | Click Here |
ಅಭ್ಯರ್ಥಿಗಳಿಗೆ ಕನ್ನಡ ಭಾಷಾಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ.
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.