BECIL Recruitment 2021 : 463 ಸೂಪರ್‌ವೈಸರ್, ಎಂಟಿಎಸ್ ಹಾಗೂ ವಿವಿಧ ಹುದ್ದೆಗಳ ಭರ್ತಿ

BECIL Recruitment 2021 : ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್‌ ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

BECIL Recruitment 2021 : Details of Vacancies

ಹುದ್ದೆ : ಇನ್ವೆಸ್ಟಿಗೇಟರ್, ಸೂಪರ್‌ವೈಸರ್, ಸಿಸ್ಟಮ್‌ ಅನಾಲಿಸ್ಟ್‌, ಸೀನಿಯರ್ ಡೊಮೈನ್ ಎಕ್ಸ್‌ಪರ್ಟ್‌, ಜೂನಿಯರ್ ಡೊಮೈನ್ ಎಕ್ಸ್‌ಪರ್ಟ್‌, ಯುಡಿಸಿ, ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್), ಸಬ್ಜೆಕ್ಟ್‌ ಮ್ಯಾಟರ್ ಎಕ್ಸ್‌ಪರ್ಟ್, ಯಂಗ್ ಪ್ರೊಫೇಶನಲ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕೆಲಸ ನಿರ್ವಹಿಸಬೇಕು

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 463 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆವೇತನ
ಇನ್ವೆಸ್ಟಿಗೇಟರ್30024000
ಸೂಪರ್‌ವೈಸರ್5030000
ಸಿಸ್ಟಮ್‌ ಅನಾಲಿಸ್ಟ್4100000
ಸೀನಿಯರ್ ಡೊಮೈನ್ ಎಕ್ಸ್‌ಪರ್ಟ್2980000
ಜೂನಿಯರ್ ಡೊಮೈನ್ ಎಕ್ಸ್‌ಪರ್ಟ್‌4160000
ಯುಡಿಸಿ422000
ಮಲ್ಟಿ ಟಾಸ್ಕಿಂಗ್ ಸ್ಟಾಫ್1815000
ಸಬ್ಜೆಕ್ಟ್‌ ಮ್ಯಾಟರ್ ಎಕ್ಸ್‌ಪರ್ಟ್780000
ಯಂಗ್ ಪ್ರೊಫೇಶನಲ್1070000

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿರಬೇಕು. ಜೊತೆಗೆ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕಾರ್ಯಾನುಭವ ಅಗತ್ಯ.

ವಯೋಮಾನ : ಇನ್ವೆಸ್ಟಿಗೇಟರ್, ಯುಡಿಸಿ, ಯಂಗ್ ಪ್ರೊಫೇಶನಲ್ ಹುದ್ದೆಗೆ ಗರಿಷ್ಠ 45 ವರ್ಷ, ಸೂಪರ್‌ವೈಸರ್, ಸಿಸ್ಟಮ್‌ ಅನಾಲಿಸ್ಟ್‌, ಸೀನಿಯರ್ ಡೊಮೈನ್ ಎಕ್ಸ್‌ಪರ್ಟ್‌, ಜೂನಿಯರ್ ಡೊಮೈನ್ ಎಕ್ಸ್‌ಪರ್ಟ್‌ ಹುದ್ದೆಗೆ ಗರಿಷ್ಠ 50 ವರ್ಷ, ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್) ಹುದ್ದೆಗೆ ಗರಿಷ್ಠ 60 ವರ್ಷ, ಸಬ್ಜೆಕ್ಟ್‌ ಮ್ಯಾಟರ್ ಎಕ್ಸ್‌ಪರ್ಟ್ ಹುದ್ದೆಗೆ ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ

ಆಯ್ಕೆ ವಿಧಾನ : ಇನ್ವೆಸ್ಟಿಗೇಟರ್, ಸೂಪರ್‌ವೈಸರ್ ಹುದ್ದೆಗೆ ಲಿಖಿತ ಪರೀಕ್ಷೆ ಹಾಗೂ ಉಳಿದ ಹುದ್ದೆಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ

ಉದ್ಯೋಗ ಮಾಹಿತಿ : KOF Hubli Recruitment 2021 : 15 ಲೆಕ್ಕಾಧಿಕಾರಿ, ಚಾಲಕ ಹಾಗೂ ವಿವಿಧ ಹುದ್ದೆಗಳ ಭರ್ತಿ

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್‌ ನಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಬಿಇಸಿಐಎಲ್ ನ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ, ಮಾಜಿ ಸೈನಿಕ ಅಭ್ಯರ್ಥಿಗಳು ರೂ. 955 ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳು ರೂ. 670 ಅರ್ಜಿ ಶುಲ್ಕ ಪಾವತಿಸಬೇಕು

ಶುಲ್ಕ ಪಾವತಿಸುವ ವಿಧಾನ : ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಏಪ್ರಿಲ್ 11, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 22, 2021

BECIL Recruitment 2021 : Important Links

ಅಧಿಸೂಚನೆ : Click Here
ಅರ್ಜಿ ಸಲ್ಲಿಸಿ : Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.