ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2025 – DHFWS Bengaluru Urban Recruitment 2025

DHFWS Bengaluru Urban Recruitment 2025

DHFWS Bengaluru Urban Recruitment 2025 : ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Bengaluru Urban Recruitment 2025 : Details of Vacancies

ಹುದ್ದೆ : ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ನಗರ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 48 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ವೈದ್ಯಾಧಿಕಾರಿಗಳು19
ಶುಶ್ರೂಷಣಾಧಿಕಾರಿಗಳು16
ಪ್ರಯೋಗಶಾಲಾ ತಂತ್ರಜ್ಞರು13

ಶೈಕ್ಷಣಿಕ ಅರ್ಹತೆ :
• ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರತಕ್ಕದ್ದು.

• ಶುಶ್ರೂಷಣಾಧಿಕಾರಿಗಳು – ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿ.ಎಸ್.ಸಿ/ ಜಿ.ಎನ್.ಎಂ ತರಬೇತಿ ಹಾಗೂ ಕೆ.ಎನ್.ಸಿ ನೋಂದಣಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

• ಪ್ರಯೋಗಶಾಲಾ ತಂತ್ರಜ್ಞರು – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷದ ಕೋರ್ಸ್ ನಲ್ಲಿ ಉತ್ತೀರ್ಣ ಹೊಂದಿರಬೇಕು.

ಉದ್ಯೋಗ ಮಾಹಿತಿ : ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಫೈರ್‌ಮ್ಯಾನ್ ಹುದ್ದೆಗಳ ನೇಮಕಾತಿ 2025

ವಯೋಮಾನ : ವೈದ್ಯಾಧಿಕಾರಿಗಳು ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಈ ಕೆಳಗಿನಂತೆ ವಯೋಮಾನ ನಿಗದಿಪಡಿಸಲಾಗಿದೆ.
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
• 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ/ಪ.ಪಂಗಡ/ ಪ್ರ1ರ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ವೈದ್ಯಾಧಿಕಾರಿಗಳು – ಗರಿಷ್ಠ 60 ವರ್ಷ

ವೇತನ :

ಹುದ್ದೆವೇತನ
ವೈದ್ಯಾಧಿಕಾರಿಗಳು60,000
ಶುಶ್ರೂಷಣಾಧಿಕಾರಿಗಳು18,714
ಪ್ರಯೋಗಶಾಲಾ ತಂತ್ರಜ್ಞರು16,515

ಆಯ್ಕೆ ವಿಧಾನ : ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಸಂದರ್ಶನ ಮೂಲಕ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಹಂತ 1 : ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಹಂತ 2 : ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ದಾಖಲೆಗಳು ಹಾಗೂ 1 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಈ ಕೆಳಗಡೆ ನೀಡಲಾಗಿರುವ ಕಛೇರಿಯ ವಿಳಾಸಕ್ಕೆ ಹಾಜರಾಗಬೇಕು.

ಸಂದರ್ಶನ ಸ್ಥಳ : ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೇಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು – 38

ಸಂದರ್ಶನ ನಡೆಯುವ ದಿನಾಂಕದ ವಿವರ :
ನೇರ ಸಂದರ್ಶನ ನಡೆಯುವ ದಿನಾಂಕ : ಮೇ 19, 2025 ಬೆಳಿಗ್ಗೆ 11.00 ಗಂಟೆಗೆ

DHFWS Bengaluru Urban Recruitment 2025 : Important Links

NOTIFICATIONCLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

WhatsApp
Telegram
Facebook

Leave a Comment