DHFWS Haveri Recruitment 2021 : ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಸಂದರ್ಶನಕ್ಕೆ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಸಂದರ್ಶನ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Haveri Recruitment 2021 : Details of Vacancies
ಹುದ್ದೆ : ಫಿಜಿಷಿಯನ್, ಎಂ.ಬಿ.ಬಿ.ಎಸ್ ವೈದ್ಯರು, ಫಿಸಿಯೋಥೆರಪಿಸ್ಟ್, ಶುಶ್ರೂಷಕರು
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಾವೇರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 14 ಹುದ್ದೆಗಳ ಭರ್ತಿಗೆ ಸಂದರ್ಶನಕ್ಕೆ ಕರೆಯಲಾಗಿದೆ.
ಶೈಕ್ಷಣಿಕ ಅರ್ಹತೆ :
• ಫಿಜಿಷಿಯನ್ ಹುದ್ದೆಗೆ ಎಂ.ಬಿ.ಬಿ.ಎಸ್, ಎಂ.ಡಿ, ಅಥವಾ ಸಮಾನಾಂತರ ಪದವಿಯನ್ನು ಮೆಡಿಕಲ್ ಕೌನ್ಸಿಲ್ ನಿಂದ ಮಾನ್ಯತೆ ಹೊಂದಿದ ಸಂಸ್ಥೆಯಿಂದ ಹೊಂದಿರಬೇಕು.
• ಎಂ.ಬಿ.ಬಿ.ಎಸ್ ವೈದ್ಯರು ಹುದ್ದೆಗೆ ಎ.ಬಿ.ಬಿ.ಎಸ್ ಪದವಿಯೊಂದಿಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ನೋಂದಣಿ ಕಡ್ಡಾಯ.
• ಫಿಸಿಯೋಥೆರಪಿಸ್ಟ್ ಹುದ್ದೆಗೆ ಫಿಸಿಯೋಥೆರಪಿ (ಬಿಪಿಟಿ) ಪದವಿ ಪಡೆದಿರಬೇಕು
• ಶೂಶ್ರೂಷಕಿಯರು ಹುದ್ದೆಗೆ ಬಿ.ಎಸ್ಸಿ ನರ್ಸಿಂಗ್ / 3 ವರ್ಷದ ಜನರಲ್ ನರ್ಸಿಂಗ್ ಡಿಪ್ಲೋಮಾ, & ನರ್ಸಿಂಗ್ ಕೌನ್ಸಿಲ್ ಇಲ್ಲಿ ನೋಂದಣಿ ಕಡ್ಡಾಯ ಹಾಗೂ ಆಸ್ಪತ್ರೆಯಲ್ಲಿ 2 ವರ್ಷದ ಸೇವಾ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕು.
ವೇತನ : ಎನ್.ಹೆಚ್.ಎಂ ನಿಯಮಾವಳಿಯಂತೆ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ : ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಉದ್ಯೋಗ ಮಾಹಿತಿ : ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ನೇರ ನೇಮಕಾತಿ 2021
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸಂದರ್ಶನ ದಿನದಂದು ಕಛೇರಿಗೆ ಹಾಜರಾಗಿ ಅರ್ಜಿ ನಮೂನೆಯನ್ನು ಪಡೆದು ನಂತರ ಅದನ್ನು ಭರ್ತಿ ಮಾಡಿ, ಮೂಲ ದಾಖಲಾತಿಗಳ ದೃಢೀಕರಿಸಿದ ಝೆರಾಕ್ಸ್ ಪ್ರತಿ ಹಾಗೂ ತಮ್ಮ ಇತ್ತೀಚಿನ ಭಾವಚಿತ್ರದ ಎರಡು ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಬೇಕು.
ಸಂದರ್ಶನ ಸ್ಥಳ : ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಆಸ್ಪತ್ರೆ ಆವರಣ, ಹಾವೇರಿ – 581110
ಅರ್ಜಿ ಶುಲ್ಕ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಸಂದರ್ಶನ ನಡೆಯುವ ದಿನಾಂಕದ ವಿವರ :
ನೇರ ಸಂದರ್ಶನವನ್ನು ದಿನಾಂಕ : ಡಿಸೆಂಬರ್ 28, 2021 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ
DHFWS Haveri Recruitment 2021 : Important Links
ಪ್ರಕಟಣೆ : Click Here
ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ : 08375-232218
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.