ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ನೇಮಕಾತಿ 2024 – DHFWS Haveri Recruitment 2024

DHFWS Haveri Recruitment 2024 : ಹಾವೇರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳ ಅಡಿಯಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Haveri Recruitment 2024 : Details of Vacancies

ಹುದ್ದೆ : ಕಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು, ನೇತ್ರ ಸಹಾಯಕರು/ ಫಾರ್ಮಾಸಿಸ್ಟ್, ಆರ್.ಬಿ.ಎಸ್.ಕೆ ಆಯುಷ್ ವೈದ್ಯರು, ಇಂಜಿನಿಯರ್ (ಬಯೋ ಮೆಡಿಕಲ್), ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಶುಶ್ರೂಷಾಧಿಕಾರಿ, ಶುಶ್ರೂಷಾಧಿಕಾರಿ (ಮಾನಸಿಕ), ಶುಶ್ರೂಷಾಧಿಕಾರಿ ಸರ್ವೇಲೆನ್ಸ್ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರು, ಮೈಕ್ರೋಬಯಾಲಾಜಿಸ್ಟ್, ಫಿಜಿಶಿಯನ್, ಎಪಿಡಮಿಯಾಲಾಜಿಸ್ಟ್, ಅರೆಕಾಲಿಕ ಯೋಗ ತರಬೇತುದಾರರು, ಡೆಂಟಲ್ ಹೈಜೆನಿಸ್ಟ್, ಆಡಿಯೋಲಾಜಿಸ್ಟ್, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ಇಂನ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೆರ್ಮೆಂಟ್ ಚಿಲ್ಡ್ರನ್, ಮೆಡಿಕಲ್ ಆಫೀಸರ್, ಡಿಸ್ಟ್ರಿಕ್ಟ್ ಪ್ರೊಗ್ರಾಮ್ ಕೋಆರ್ಡಿನೇಟರ್, ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಾವೇರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 120 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಕಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು3
ನೇತ್ರ ಸಹಾಯಕರು/ ಫಾರ್ಮಾಸಿಸ್ಟ್2
ಆರ್.ಬಿ.ಎಸ್.ಕೆ ಆಯುಷ್ ವೈದ್ಯರು2
ಇಂಜಿನಿಯರ್ (ಬಯೋ ಮೆಡಿಕಲ್)1
ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್7
ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು1
ಶುಶ್ರೂಷಾಧಿಕಾರಿ27
ಶುಶ್ರೂಷಾಧಿಕಾರಿ (ಮಾನಸಿಕ)1
ಶುಶ್ರೂಷಾಧಿಕಾರಿ ಸರ್ವೇಲೆನ್ಸ್ ವಿಭಾಗ5
ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರು1
ಮೈಕ್ರೋಬಯಾಲಾಜಿಸ್ಟ್1
ಫಿಜಿಶಿಯನ್2
ಎಪಿಡಮಿಯಾಲಾಜಿಸ್ಟ್4
ಅರೆಕಾಲಿಕ ಯೋಗ ತರಬೇತುದಾರರು56
ಡೆಂಟಲ್ ಹೈಜೆನಿಸ್ಟ್1
ಆಡಿಯೋಲಾಜಿಸ್ಟ್1
ಆಡಿಯೋಮೆಟ್ರಿಕ್ ಅಸಿಸ್ಟೆಂಟ್1
ಇಂನ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೆರ್ಮೆಂಟ್ ಚಿಲ್ಡ್ರನ್1
ಮೆಡಿಕಲ್ ಆಫೀಸರ್1
ಡಿಸ್ಟ್ರಿಕ್ಟ್ ಪ್ರೊಗ್ರಾಮ್ ಕೋಆರ್ಡಿನೇಟರ್1
ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್1

ಶೈಕ್ಷಣಿಕ ಅರ್ಹತೆ :
• ಕಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು – ಕಿ.ಮ.ಆ.ಸ ತರಬೇತಿಯನ್ನು ಪಡೆದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿಯಾಗಿರಬೇಕು.
• ನೇತ್ರ ಸಹಾಯಕರು/ ಫಾರ್ಮಾಸಿಸ್ಟ್ – 2 ವರ್ಷದ ಡಿಪ್ಲೊಮಾ ಇನ್ ಆಪ್ಟಿಮೆಟ್ರಿ ಅಥವಾ ನೇತ್ರ ಸಹಾಯಕರು (ಆಪ್ತಲ್ಮಿಕ್ ಅಸಿಸ್ಟಂಟ್) ಆಗಿ ತರಬೇತಿ ಪಡೆದಿರಬೇಕು. ಫಾರ್ಮಾಸಿಸ್ಟ್ ಗಳು ಬಿ-ಫಾರ್ಮಾ ಪದವಿಯಲ್ಲಿ ಉತ್ತೀರ್ಣರಾಗಿದ್ದು, ನೋಂದಣಿ ಪ್ರಮಾಣ ಪತ್ರವನ್ನು ಹೊಂದಿರಬೇಕು.
• ಆರ್.ಬಿ.ಎಸ್.ಕೆ ಆಯುಷ್ ವೈದ್ಯರು – ಬಿ.ಎ.ಎಮ್.ಎಸ್ ವೈದ್ಯ ಪದ್ಧತಿಯಲ್ಲಿ ಪದವಿ ಪಡೆದಿರಬೇಕು. ಕಡ್ಡಾಯವಾಗಿ ಹೌಸಮನಶಿಪ್ ಮುಗಿಸಿರಬೇಕು.
• ಇಂಜಿನಿಯರ್ (ಬಯೋ ಮೆಡಿಕಲ್) – ಬಿಇ ಅಥವಾ ಬಿ.ಟೆಕ್ ಇನ್ ಬಯೋ ಮೆಡಿಕಲ್ ಇಂಜಿನಿಯರಿಂಗ್/ ಮೆಡಿಕಲ್ ಇಲೆಕ್ಟ್ರಾನಿಕ್ಸ್/ ಎಂ.ಎಸ್ಸಿ ಇನ್ ಬಯೋ ಮೆಡಿಕಲ್ ಇನ್ಟ್ರುಮೆಂಟೇಶನ್ .
• ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್ – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ವಿವಿದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿ ಪಡೆದಿರಬೇಕು.
• ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು – ಕಿ.ಮ.ಆ.ಸ ತರಬೇತಿಯನ್ನು ಪಡೆದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿಯಾಗಿರಬೇಕು.
• ಶುಶ್ರೂಷಾಧಿಕಾರಿ – ಜಿ.ಎನ್.ಎಮ್ ತರಬೇತಿಯನ್ನು ಪಡೆದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿಯಾಗಿರಬೇಕು.
• ಶುಶ್ರೂಷಾಧಿಕಾರಿ (ಮಾನಸಿಕ) – ಬಿ.ಎಸ್ಸಿ ಇನ್ ನರ್ಸಿಂಗ್ ಅಥವಾ ತತ್ಸಮಾನ ಪದವಿ ಪಡೆದಿರಬೇಕು.
• ಶುಶ್ರೂಷಾಧಿಕಾರಿ ಸರ್ವೇಲೆನ್ಸ್ ವಿಭಾಗ – ಜನರಲ್ ನರ್ಸಿಂಗ್ ಡಿಪ್ಲೋಮಾ ಹಾಗೂ ನರ್ಸಿಂಗ್ ಕೌನ್ಸಿಲ್ ನೋಂದಣಿ ಕಡ್ಡಾಯ.
• ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರು – ಬಿಡಿಎಸ್/ ಬಿಎಎಂಎಸ್/ ಬಿಹೆಚ್ಎಂಎಸ್/ ಬಿಯುಎಂಎಸ್/ ಬಿವೈಎಸ್ಎಸ್/ ಎಂ.ಎಸ್ಸಿ ನರ್ಸಿಂಗ್/ ಎಂ.ಎಸ್ಸಿ ಲೈಪ್ ಸೈನ್ಸ್/ ಬಿ.ಎಸ್ಸಿ ನರ್ಸಿಂಗ್ ವಿತ್ ಎಂಪಿಹೆಚ್/ ಎಂಬಿಎ.
• ಮೈಕ್ರೋಬಯಾಲಾಜಿಸ್ಟ್ – ಮೆಡಿಕಲ್ ಗ್ರಾಜ್ಯುಯೆಟ್ ವಿತ್ ಪೋಸ್ಟ್ ಗ್ರಾಜ್ಯುಯೆಟ್ ಡಿಗ್ರಿ/ ಡಿಪ್ಲೊಮಾ.
• ಫಿಜಿಶಿಯನ್ – ಎಂ.ಬಿ.ಬಿ.ಎಸ್ ವಿತ್ ಡಿಪ್ಲೊಮಾ/ ಮಾಸ್ಟರ್ಸ್ ಇನ್ ಮೆಡಿಸಿನ್/ ಅನಸ್ತೇಶಿಯಾ/ ರೇಡಿಯೋಥೆರಪಿ.
• ಎಪಿಡಮಿಯಾಲಾಜಿಸ್ಟ್ – ಮೆಡಿಕಲ್ ಗ್ರಾಜ್ಯುಯೆಟ್ ವಿತ್ ಪೋಸ್ಟ್ ಗ್ರಾಜ್ಯುಯೆಟ್ ಡಿಗ್ರಿ/ ಡಿಪ್ಲೊಮಾ.
• ಅರೆಕಾಲಿಕ ಯೋಗ ತರಬೇತುದಾರರು – ಪಿ.ಯು.ಸಿ ತೇರ್ಗಡೆ ಹಾಗೂ ಯೋಗ ತರಬೇತಿ ಸಂಸ್ಥೆಗಳಿಂದ ಅಧೀಕೃತವಾಗಿ ತರಬೇತಿ ಪಡೆದ ಯೋಗ ಶಿಕ್ಷಕರಾಗಿರಬೇಕು.
• ಡೆಂಟಲ್ ಹೈಜೆನಿಸ್ಟ್ – 10+2 ಸೈನ್ಸ್ ಹಾಗೂ ಡಿಪ್ಲೊಮಾ ಇನ್ ಡೆಂಟಲ್ ಹೈಜೆನಿಸ್ಟ್.
• ಆಡಿಯೋಲಾಜಿಸ್ಟ್ – ಆಡಿಯೋಲಾಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥೋಲಾಜಿಯಲ್ಲಿ ಪದವಿ/ ಬಿ.ಎಸ್ಸಿ ( ಸ್ಪೀಚ್ & ಹಿಯರಿಂಗ್) ಆರ್.ಸಿ.ಆಯ್ ಸಂಸ್ಥೆಯಿಂದ ಪ್ರಮಾಣ ಪತ್ರ ಹೊಂದಿರಬೇಕು.
• ಆಡಿಯೋಮೆಟ್ರಿಕ್ ಅಸಿಸ್ಟೆಂಟ್ – ಡಿಪ್ಲೊಮಾ ಇನ್ ಹಿಯರಿಂಗ್ ಲ್ಯಾಂಗ್ವೇಜ್ & ಸ್ಪೀಚ್.
• ಇಂನ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೆರ್ಮೆಂಟ್ ಚಿಲ್ಡ್ರನ್ – ಡಿಪ್ಲೊಮಾ (ಡಿಟಿಯುಡಿಹೆಚ್ ಹೆಚ್)
ಮೆಡಿಕಲ್ ಆಫೀಸರ್ – ಎಂ.ಬಿ.ಬಿ.ಎಸ್.
• ಡಿಸ್ಟ್ರಿಕ್ಟ್ ಪ್ರೊಗ್ರಾಮ್ ಕೋಆರ್ಡಿನೇಟರ್ – ಎಂಬಿಎ/ ಪಿಜಿ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್.
• ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್ – ಪದವಿ ಅಥವಾ ಸ್ಯಾನಿಟರಿ ಇನ್ಸ್ಪೆಕ್ಟರ್ ಕೋರ್ಸ್.

ಉದ್ಯೋಗ ಮಾಹಿತಿ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಆಯ್ಕೆ ವಿಧಾನ : ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಅಭ್ಯರ್ಥಿಗಳು ನೇರ ಸಂದರ್ಶನ ದಿನದಂದು ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಪಡೆದುಕೊಳ್ಳಬೇಕು.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯನ್ನು ಅದೇ ದಿನ ಕಛೇರಿಗೆ ಸಲ್ಲಿಸಿ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.

ಸಂದರ್ಶನ ಸ್ಥಳ : ಆರೋಗ್ಯ ಭವನ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಆವರಣ, ಹಾವೇರಿ.

ಸಂದರ್ಶನ ನಡೆಯುವ ದಿನಾಂಕದ ವಿವರ :

ಹುದ್ದೆಸಂದರ್ಶನ ದಿನಾಂಕ
ಕಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು12-08-2024
ನೇತ್ರ ಸಹಾಯಕರು/ ಫಾರ್ಮಾಸಿಸ್ಟ್14-08-2024
ಆರ್.ಬಿ.ಎಸ್.ಕೆ ಆಯುಷ್ ವೈದ್ಯರು14-08-2024
ಇಂಜಿನಿಯರ್ (ಬಯೋ ಮೆಡಿಕಲ್)13-08-2024
ಹೆಲ್ತ್ ಇನ್ಸ್ಪೆಕ್ಟಿಂಗ್ ಆಫೀಸರ್14-08-2024
ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿಗಳು13-08-2024
ಶುಶ್ರೂಷಾಧಿಕಾರಿ12-08-2024
ಶುಶ್ರೂಷಾಧಿಕಾರಿ (ಮಾನಸಿಕ)12-08-2024
ಶುಶ್ರೂಷಾಧಿಕಾರಿ ಸರ್ವೇಲೆನ್ಸ್ ವಿಭಾಗ12-08-2024
ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರು14-08-2024
ಮೈಕ್ರೋಬಯಾಲಾಜಿಸ್ಟ್13-08-2024
ಫಿಜಿಶಿಯನ್13-08-2024
ಎಪಿಡಮಿಯಾಲಾಜಿಸ್ಟ್13-08-2024
ಅರೆಕಾಲಿಕ ಯೋಗ ತರಬೇತುದಾರರು13-08-2024
ಡೆಂಟಲ್ ಹೈಜೆನಿಸ್ಟ್14-08-2024
ಆಡಿಯೋಲಾಜಿಸ್ಟ್14-08-2024
ಆಡಿಯೋಮೆಟ್ರಿಕ್ ಅಸಿಸ್ಟೆಂಟ್14-08-2024
ಇಂನ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೆರ್ಮೆಂಟ್ ಚಿಲ್ಡ್ರನ್14-08-2024
ಮೆಡಿಕಲ್ ಆಫೀಸರ್13-08-2024
ಡಿಸ್ಟ್ರಿಕ್ಟ್ ಪ್ರೊಗ್ರಾಮ್ ಕೋಆರ್ಡಿನೇಟರ್13-08-2024
ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್12-08-2024

DHFWS Haveri Recruitment 2024 : Important Links

NOTIFICATIONCLICK HERE
Telegram Join Link Click Here
WhatsApp Group Link Click Here

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment