
DHFWS Kolar Recruitment 2025 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಿಂದ ಕೋಲಾರ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿಯಿರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ವೇತನ, ಶೈಕ್ಷಣಿಕ ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Kolar Recruitment 2025 : Details of Vacancies
ಹುದ್ದೆ :
ಅರಿವಳಿಕೆ ತಜ್ಞ ವೈದ್ಯರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ರೆಡಿಯೋಲಾಜಿಸ್ಟ್ ತಜ್ಞ ವೈದ್ಯರು, ಪಿಜಿಷಿಯನ್, ವೈದ್ಯಾಧಿಕಾರಿಗಳು, ಆಡಿಯೋಲಾಜಿಸ್ಟ್ & ಸ್ಪೀಚ್ ತೆರಪಿಸ್ಟ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಪ್ಲೋರೋಸಿಸ್ ಸಲಹೆಗಾರರು, ನೇತ್ರ ಸಹಾಯಕರು.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೋಲಾರ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 31 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ | ವೇತನ |
| ಅರಿವಳಿಕೆ ತಜ್ಞ ವೈದ್ಯರು | 2 | ರೂ. 1,10,000/- |
| ಸ್ತ್ರೀರೋಗ ತಜ್ಞರು | 2 | ರೂ. 1,10,000/- |
| ಮಕ್ಕಳ ತಜ್ಞರು | 1 | ರೂ. 1,10,000/- |
| ರೆಡಿಯೋಲಾಜಿಸ್ಟ್ ತಜ್ಞ ವೈದ್ಯರು | 1 | ರೂ. 1,10,000/- |
| ಪಿಜಿಷಿಯನ್ | 1 | ರೂ. 1,10,000/- |
| ವೈದ್ಯಾಧಿಕಾರಿಗಳು | 5 | ರೂ. 50,000/- |
| ಆಡಿಯೋಲಾಜಿಸ್ಟ್ & ಸ್ಪೀಚ್ ತೆರಪಿಸ್ಟ್ | 1 | ರೂ. 25,000/- |
| ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು | 2 | ರೂ. 11,500/- |
| ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು | 3 | ರೂ. 14,044/- |
| ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು | 4 | ರೂ. 12,600/- |
| ಪ್ಲೋರೋಸಿಸ್ ಸಲಹೆಗಾರರು | 1 | ರೂ. 47,250/- |
| ನೇತ್ರ ಸಹಾಯಕರು | 8 | ರೂ. 13,800/- |
ಶೈಕ್ಷಣಿಕ ಅರ್ಹತೆ :
ಅರಿವಳಿಕೆ ತಜ್ಞ ವೈದ್ಯರು –
ಎಂಬಿಬಿಎಸ್ ಮತ್ತು ಅರಿವಳಿಕೆ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ.
ಸ್ತ್ರೀರೋಗ ತಜ್ಞರು –
ಎಂಬಿಬಿಎಸ್ ಮತ್ತು ಸ್ತ್ರೀರೋಗ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ.
ಮಕ್ಕಳ ತಜ್ಞರು –
ಎಂಬಿಬಿಎಸ್ ಮತ್ತು ಮಕ್ಕಳ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ.
ರೆಡಿಯೋಲಾಜಿಸ್ಟ್ ತಜ್ಞ ವೈದ್ಯರು –
ಎಂಬಿಬಿಎಸ್ ಮತ್ತು ರೆಡಿಯೋಲಾಜಿಸ್ಟ್ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ.
ಪಿಜಿಷಿಯನ್ –
ಎಂಬಿಬಿಎಸ್ ಮತ್ತು ಪಿಜಿಷಿಯನ್ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ.
ವೈದ್ಯಾಧಿಕಾರಿಗಳು –
ಎಂಬಿಬಿಎಸ್ ಉತ್ತೀರ್ಣರಾಗಿರಬೇಕು.
ಆಡಿಯೋಲಾಜಿಸ್ಟ್ & ಸ್ಪೀಚ್ ತೆರಪಿಸ್ಟ್ –
ಬ್ಯಾಚುಲರ್ ಡಿಗ್ರಿ ಸ್ಪೀಚ್ ಲಾಂಗ್ವೇಜ್ ಪ್ಯಾತಾಲಜಿ ಬಿ.ಎಸ್.ಸಿ (ಸ್ಪೀಚ್ & ಇಯರಿಂಗ್)
ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು –
ಎಸ್.ಎಸ್.ಎಲ್.ಸಿ ಹಾಗೂ 3 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಅಥವಾ ಪಿಯುಸಿ (ವಿಜ್ಞಾನ) ಮತ್ತು 2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ.
ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು –
ಕಿ.ಮ.ಆ ಸಹಾಯಕಿಯ ತರಬೇತಿ ಮತ್ತು ಕೆ.ಎನ್.ಸಿ ನೋಂದಣಿ ಹೊಂದಿರಬೇಕು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು –
ಎ.ಎನ್.ಎಂ ತರಬೇತಿಯೊಂದಿಗೆ ಎಲ್.ಹೆಚ್.ವಿ ತರಬೇತಿಯನ್ನು ಹೊಂದಿರಬೇಕು.
ಪ್ಲೋರೋಸಿಸ್ ಸಲಹೆಗಾರರು –
ಎಂ.ಡಿ / ಪಿ.ಹೆಚ್.ಡಿ ಅಥವಾ ತತ್ಸಮಾನ.
ನೇತ್ರ ಸಹಾಯಕರು –
ಡಿಪ್ಲೊಮಾ ಇನ್ ಆಪ್ಟೋಮೆಟ್ರೀ ಅರ್ಹತೆ ಹೊಂದಿರಬೇಕು.
ಉದ್ಯೋಗ ಮಾಹಿತಿ : ತುಮಕೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ವಯೋಮಿತಿ :
• ಅರಿವಳಿಕೆ ತಜ್ಞ ವೈದ್ಯರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ರೆಡಿಯೋಲಾಜಿಸ್ಟ್ ತಜ್ಞ ವೈದ್ಯರು, ಪಿಜಿಷಿಯನ್, ವೈದ್ಯಾಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಹುದ್ದೆಗೆ – ಗರಿಷ್ಠ 60 ವರ್ಷ
• ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಹುದ್ದೆಗೆ – ಗರಿಷ್ಠ 45 ವರ್ಷ
• ಆಡಿಯೋಲಾಜಿಸ್ಟ್ & ಸ್ಪೀಚ್ ತೆರಪಿಸ್ಟ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ಲೋರೋಸಿಸ್ ಸಲಹೆಗಾರರು ಹುದ್ದೆಗೆ – ಗರಿಷ್ಠ 40 ವರ್ಷ
ಆಯ್ಕೆ ವಿಧಾನ :
ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಮೂಲ ದಾಖಲೆಗಳ ಪರಿಶೀಲನೆ ಹಾಜರಾಗಬೇಕು.
ಹಂತ 2 : ಅಭ್ಯರ್ಥಿಗಳು ಮೂಲ ದಾಖಲಾತಿಗಳ ಪರಿಶೀಲನೆಗೆ ಕಡ್ಡಾಯವಾಗಿ ಒಂದು ಸೆಟ್ ಜೆರಾಕ್ಸ್ (ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಆಧಾರ್ ಜೆರಾಕ್ಸ್ ಪ್ರತಿ, ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರ, ಜನ್ಮ ದಿನಾಂಕ ದೃಢೀಕರಣ ಪ್ರತಿ (ಎಸ್.ಎಸ್.ಎಲ್.ಸಿ ಅಂಕ ಪಟ್ಟಿ) ಮತ್ತು ವಿಳಾಸ ಡೃಡೀಕರ ಪತ್ರ ಒಳಗೊಂಡಂತೆ) ಪ್ರತಿಗಳೊಂದಿಗೆ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.
ಮೂಲ ದಾಖಲೆಗಳ ಪರಿಶೀಲನೆ ಸ್ಥಳ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕೋಲಾರ.
ಮೂಲ ದಾಖಲೆಗಳ ಪರಿಶೀಲನೆ ದಿನಾಂಕದ ವಿವರ :
ಮೂಲ ದಾಖಲೆಗಳ ಪರಿಶೀಲನೆ ದಿನಾಂಕ : ಡಿಸೆಂಬರ್ 16, 2025
DHFWS Kolar Recruitment 2025: Important Links
| NOTIFICATION | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.