
DHFWS Koppal Recruitment 2025 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Koppal Recruitment 2025 : Details of Vacancies
ಹುದ್ದೆ : ಚಿಕ್ಕ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞ ವೈದ್ಯರು, ಅರಿವಳಿಕೆ ತಜ್ಞರು, ಫಿಜಿಶಿಯನ್, ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕರು.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೊಪ್ಪಳ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 60 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ | ಹುದ್ದೆಗಳ ಸಂಖ್ಯೆ |
ಚಿಕ್ಕ ಮಕ್ಕಳ ತಜ್ಞರು | 2 |
ಸ್ತ್ರೀರೋಗ ತಜ್ಞ ವೈದ್ಯರು | 2 |
ಅರಿವಳಿಕೆ ತಜ್ಞರು | 1 |
ಫಿಜಿಶಿಯನ್ | 3 |
ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು | 30 |
ಶುಶ್ರೂಷಣಾಧಿಕಾರಿಗಳು | 8 |
ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು | 7 |
ಕಿರಿಯ ಆರೋಗ್ಯ ಸಹಾಯಕರು | 7 |
ಶೈಕ್ಷಣಿಕ ಅರ್ಹತೆ :
• ಚಿಕ್ಕ ಮಕ್ಕಳ ತಜ್ಞರು – ಡಿ.ಎಂ.ಒ/ ನಿಯೋನಾಟಲಜಿ/ ಫಿಲೋಶಿಪ್ ಇನ್ ನಿಯೋನಾಟಲಜಿ, ಎಂ.ಡಿ ಪಿಡಿಯಾರ್ಟಿಕ್, ಡಿ.ಎನ್.ಡಿ (ಮಕ್ಕಳ ಆರೋಗ್ಯ)/ ಡಿಸಿಹೆಚ್.
• ಸ್ತ್ರೀರೋಗ ತಜ್ಞ ವೈದ್ಯರು – ಡಿಜಿಓ/ ಡಿ.ಎನ್.ಬಿ/ ಎಂ.ಡಿ (ಓ.ಬಿ.ಜಿ).
• ಅರಿವಳಿಕೆ ತಜ್ಞರು – ಡಿಎ/ ಡಿ.ಎನ್.ಬಿ/ ಎಂ.ಡಿ (ಅನಸ್ತೇಶಿಯಾ)
• ಫಿಜಿಶಿಯನ್ – ಎಂ.ಬಿ.ಬಿ.ಎಸ್/ ಎಂ.ಡಿ/ ರೇಡಿಯೋಥೆರಪಿ.
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್ ಪದವಿ.
• ಶುಶ್ರೂಷಣಾಧಿಕಾರಿಗಳು – ಬಿ.ಎಸ್ಸಿ ನರ್ಸಿಂಗ್/ ಪೋಸ್ಟ್ ಸರ್ಟಿಫೈಡ್ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೊಮಾ ಇನ್ ನರ್ಸಿಂಗ್.
• ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು – ಎಸ್.ಎಸ್.ಎಲ್.ಸಿ & ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ ಉತ್ತೀರ್ಣ/ ದ್ವಿತೀಯ ಪಿಯುಸಿ & ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 2 ವರ್ಷದ ಡಿಪ್ಲೊಮಾ ಕೋರ್ಸ್ ಉತ್ತೀರ್ಣ.
• ಕಿರಿಯ ಆರೋಗ್ಯ ಸಹಾಯಕರು – ಎಸ್.ಎಸ್.ಎಲ್.ಸಿ & ವಿವಿಧೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿ/ ಪಿಯುಸಿ (ವಿಜ್ಞಾನ) & 2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೋಮಾ.
ಉದ್ಯೋಗ ಮಾಹಿತಿ : ಮೈಸೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳ ನೇಮಕಾತಿ 2025
ವಯಸ್ಸಿನ ಮೀತಿ :
• ಚಿಕ್ಕ ಮಕ್ಕಳ ತಜ್ಞರು – ಗರಿಷ್ಠ 45 ವರ್ಷ
• ಸ್ತ್ರೀರೋಗ ತಜ್ಞ ವೈದ್ಯರು – ಗರಿಷ್ಠ 70 ವರ್ಷ
• ಅರಿವಳಿಕೆ ತಜ್ಞರು – ಗರಿಷ್ಠ 70 ವರ್ಷ
• ಫಿಜಿಶಿಯನ್ – ಗರಿಷ್ಠ 40 ವರ್ಷ
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – ಗರಿಷ್ಠ 60 ವರ್ಷ
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು (ಹೆಚ್.ಡಿ.ಯು/ಐಸಿಯು) – ಗರಿಷ್ಠ 65 ವರ್ಷ
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು (ತಾಯಿ ಆರೋಗ್ಯ) – ಗರಿಷ್ಠ 65 ವರ್ಷ
• ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು (ಆರ್.ಬಿ.ಎಸ್.ಕೆ) – ಗರಿಷ್ಠ 45 ವರ್ಷ
• ಶುಶ್ರೂಷಣಾಧಿಕಾರಿಗಳು – ಗರಿಷ್ಠ 45 ವರ್ಷ
• ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು – ಗರಿಷ್ಠ 45 ವರ್ಷ
• ಕಿರಿಯ ಆರೋಗ್ಯ ಸಹಾಯಕರು – ಗರಿಷ್ಠ 35 ವರ್ಷ (ಸಡಿಲಿಕೆ ಇದೆ)
ವೇತನ : ರಾಜ್ಯದ ಮಾರ್ಗಸೂಚಿಯನ್ವಯ ವೇತನ ಪಾವತಿಸಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಶುಶ್ರೂಷಣಾಧಿಕಾರಿ, ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕರು ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು ಹಾಗೂ ಉಳಿದ ಹುದ್ದೆಗಳಿಗೆ ಕಛೇರಿಯಲ್ಲಿ ಅರ್ಜಿ ಪಡೆದು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮೇ 19, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 28, 2025
DHFWS Koppal Recruitment 2025 : Important Links
NOTIFICATION | CLICK HERE |
APPLY ONLINE | CLICK HERE |
Telegram Join Link | Click Here |
WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.