DHFWS Uttara Kannada Recruitment 2022 – Apply for Medical Officer, Dental Technician, Lab Technician and Various Posts

DHFWS Uttara Kannada Recruitment 2022 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

DHFWS Uttara Kannada Recruitment 2022 : Details of Vacancies

ಹುದ್ದೆ : ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು, ಫಿಜಿಷಿಯನ್, ಡೆಂಟಲ್ ಟೆಕ್ನಿಷಿಯನ್, ಡಯಟ್ ಕೌನ್ಸಿಲರ್, ತಾಲೂಕಾ ಆಶಾ ಮೇಲ್ವಿಚಾರಕರು, ಡಿ.ಇ.ಐ.ಸಿ. ಮ್ಯಾನೇಜರ್, ಮನೋರೋಗ ತಜ್ಞ ವೈದ್ಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ), ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್, ಶುಶ್ರೂಷಕಿಯರು, ಪ್ರಯೋಗಶಾಲಾ ತಂತ್ರಜ್ಞರು, ಮೆಡಿಕಲ್ ಆಫೀಸರ್, ಸೀನಿಯರ್ ಟ್ರಿಟ್ಮೆಂಟ್ ಸೂಪರ್ವೈಸರ್, ಅರೆ ವೈದ್ಯಕೀಯ ಕಾರ್ಯಕರ್ತ

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 16ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಶೈಕ್ಷಣಿಕ ಅರ್ಹತೆ :

• ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ವಿವಿಧ ತಜ್ಞ ವೈದ್ಯರು – ಸಂಬಂಧಿಸಿದ ತಜ್ಞತೆ ವಿಷಯದಲ್ಲಿ ಎಂ.ಡಿ/ ಎಂ.ಎಸ್/ ಡಿಪ್ಲೋಮಾ ಪದವಿ ಪಡೆದಿರಬೇಕು.

• ಫಿಜಿಷಿಯನ್ – ಎಂ.ಬಿ.ಬಿ.ಎಸ್, ಎಂ.ಡಿ (ಇಂಟರ್ನಲ್ ಮೆಡಿಸಿನ್) ಅಥವಾ ಸಮಾನಾಂತರ ಪದವಿಯನ್ನು ಮೆಡಿಕಲ್ ಕೌನ್ಸಿಲ್ ನಿಂದ ಮಾನ್ಯತೆ ಹೊಂದಿದ ಸಂಸ್ಥೆಯಿಂದ ಹೊಂದಿರಬೇಕು.

• ಡೆಂಟಲ್ ಟೆಕ್ನಿಷಿಯನ್ – ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಹಾಗೂ ಮಾನ್ಯತೆ ಹೊಂದಿದ ಸಂಸ್ಥೆಯಿಂದ ಡಿಪ್ಲೋಮಾ ಇನ್ ಡೆಂಟಲ್ ಟೆಕ್ನಿಷಿಯನ್ ಹಾಗೂ ರಾಜ್ಯ ದಂತ ಕೌನ್ಸಿಲ್ ನಿಂದ ರಿಜಿಸ್ಟ್ರೇಷನ್ ಹೊಂದಿರಬೇಕು.

• ಡಯಟ್ ಕೌನ್ಸಿಲರ್ – ಬಿ.ಎಸ್.ಸಿ ನ್ಯೂಟ್ರಿಷನ್/ ಬಿಎ ನ್ಯೂಟ್ರಿಷನ್/ ಗೃಹ ವಿಜ್ಞಾನ ಪದವಿ ಹೊಂದಿರಬೇಕು.

• ತಾಲೂಕ ಆಶಾ ಮೇಲ್ವಿಚಾರಕರು – ಜಿ.ಎನ್.ಎಂ/ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೋಮಾ ಇನ್ ನರ್ಸಿಂಗ್ ಆಯುಷ್ ಕೋರ್ಸಗಳಲ್ಲಿ ತೇರ್ಗಡೆಯಾಗಿರಬೇಕು.

• ಡಿ.ಇ.ಐ.ಸಿ ಮ್ಯಾನೇಜರ್ – ಸ್ನಾತಕೋತ್ತರ ಪದವಿ ಪಡೆದಿರಬೇಕು.

• ಮನೋರೋಗ ತಜ್ಞ ವೈದ್ಯರು – ಎಂ.ಬಿ.ಬಿ.ಎಸ್, ಎಂಡಿ ಅರ್ಹತೆ ಹೊಂದಿರಬೇಕು.

• ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು – ಮಾನ್ಯತೆ ಹೊಂದಿದ ಸಂಸ್ಥೆಯಿಂದ ಕಿ.ಮ.ಆ.ಸ ತರಬೇತಿ ಹೊಂದಿರಬೇಕು.

• ನೇತ್ರ ಸಹಾಯಕರು – ಎರಡು ವರ್ಷದ Diploma in Opthomology ಅಥವಾ ನೇತ್ರ ಸಹಾಯಕರು ಆಗಿ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳಲ್ಲಿ NPCB ನಿಯಾಮನುಸಾರ ತರಬೇತಿ ಪಡೆದಿರಬೇಕು.

• ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್ – ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ ಆಯುಷ್/ ನರ್ಸಿಂಗ್ ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಿಂದ ಪೂರ್ಣಕಾಲಿಕ ಪದವಿಯೊಂದಿಗೆ ಕಡ್ಡಾಯವಾಗಿ ಮಾಸ್ಟರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್/ ಹೆಲ್ತ್ ಮ್ಯಾನೇಜ್ಮೆಂಟ್ (ಪೂರ್ಣಕಾಲಿಕವಾಗಿ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಹೊಂದಿರಬೇಕು)

• ಶೂಶ್ರೂಷಕಿಯರು – ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಶಾಲೆಗಳಿಂದ ನರ್ಸಿಂಗ್ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ಕಡ್ಡಾಯವಾಗಿ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು.

• ಪ್ರಯೋಗಶಾಲಾ ತಂತ್ರಜ್ಞರು – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 2 ವರ್ಷದ ಕರ್ನಾಟಕ ವೃತ್ತಿಪರ ಶೈಕ್ಷಣಿಕ ಬೋರ್ಡನ ಡಿಪ್ಲೊಮಾ ಹೊಂದಿರಬೇಕು.

• ಅರೆ ವೈದ್ಯಕೀಯ ಕಾರ್ಯಕರ್ತ (ಪಿ.ಎಮ್.ಡಬ್ಲ್ಯೂ) – ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಎರಡು ಅಥವಾ ಮೂರು ವರ್ಷದ ಪ್ಯಾರಾ ಮೆಡಿಕಲ್ ವರ್ಕರ್/ ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ ತರಬೇತಿಯಲ್ಲಿ ಉತ್ತೀರ್ಣತೆ ಹೊಂದಿರಬೇಕು.

ಉದ್ಯೋಗ ಮಾಹಿತಿ : ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನ

ಆಯ್ಕೆ ವಿಧಾನ : ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕಛೇರಿಗೆ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಕಛೇರಿಗೆ ಖುದ್ದಾಗಿ ಹಾಜರಾಗಿ ಅರ್ಜಿ ನಮೂನೆಯನ್ನು ಪಡೆದು ನಂತರ ಅದನ್ನು ಭರ್ತಿ ಮಾಡಿ ವಿದ್ಯಾರ್ಹತೆ ಹಾಗೂ ಅನುಭವದ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ಉತ್ತರ ಕನ್ನಡ, ಕಾರವಾರ

ಅರ್ಜಿ ಶುಲ್ಕ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 21, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 02, 2022

DHFWS Uttara Kannada Recruitment 2022 : Important Links

NOTIFICATIONCLICK HERE
Telegram Join Link Click Here

ಇತರೆ ಮಾಹಿತಿ : ವೈದ್ಯಾಧಿಕಾರಿಗಳು, ತಜ್ಞ ವೈದ್ಯರುಗಳ ಹುದ್ದೆಗೆ ಇಚ್ಚಿಸುವವರು ಪ್ರತಿ ಸೋಮವಾರ ಹಾಗೂ ಶನಿವಾರದಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ನೇರ ಸಂದರ್ಶನಕ್ಕೆ ತಮ್ಮ ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಜರಾಗುವುದು. ಉಳಿದ ಹುದ್ದೆಗಳಿಗೆ ಈ ಮೇಲೆ ತಿಳಿಸಿದ ದಿನಾಂಕದಂದು ಅರ್ಜಿ ನಮೂನೆ ಪಡೆದು ಸಲ್ಲಿಸಬೇಕು.

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment