
DHFWS Vijayanagara Recruitment 2026 : ರಾಷ್ಟ್ರೀಯ ಆರೋಗ್ಯ ಅಭಿಯಾನದ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಡಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ಅರವಳಿಕೆ ತಜ್ಞರು, ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಆಡಿಯಾಲಜಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
DHFWS Vijayanagara Recruitment 2026 : Details of Vacancies
ಹುದ್ದೆ :
ಅರವಳಿಕೆ ತಜ್ಞರು, ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಆಡಿಯಾಲಜಿಸ್ಟ್, ಆಪ್ಟೋಮೆಟ್ರಿಸ್ಟ್, ಸೈಕಾಲಜಿಸ್ಟ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಆರೋಗ್ಯ ನೀರಿಕ್ಷಣಾಧಿಕಾರಿಗಳು, ಫಿಸಿಯೋಥೆರಪಿಸ್ಟ್, ಎಕ್ಸರೇ ಟೆಕ್ನಿಷಿಯನ್, ಇನ್ಸೆಕ್ಟ್ ಕಲೆಕ್ಟರ್, ಬ್ಲಾಕ್ ಎಫಿಡೆಮಿಯಾಲಜಿಸ್ಟ್.
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ವಿಜಯನಗರ ಜಿಲ್ಲೆ , ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 61 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ಅರವಳಿಕೆ ತಜ್ಞರು | 1 |
| ವೈದ್ಯಾಧಿಕಾರಿಗಳು | 20 |
| ಶುಶ್ರೂಷಣಾಧಿಕಾರಿಗಳು | 12 |
| ಪ್ರಯೋಗಶಾಲಾ ತಂತ್ರಜ್ಞರು | 5 |
| ಆಡಿಯಾಲಜಿಸ್ಟ್ | 1 |
| ಆಪ್ಟೋಮೆಟ್ರಿಸ್ಟ್ | 1 |
| ಸೈಕಾಲಜಿಸ್ಟ್ | 1 |
| ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು | 8 |
| ಫಾರ್ಮಸಿ ಅಧಿಕಾರಿಗಳು | 1 |
| ಆರೋಗ್ಯ ನೀರಿಕ್ಷಣಾಧಿಕಾರಿಗಳು | 4 |
| ಫಿಸಿಯೋಥೆರಪಿಸ್ಟ್ | 1 |
| ಎಕ್ಸರೇ ಟೆಕ್ನಿಷಿಯನ್ | 4 |
| ಇನ್ಸೆಕ್ಟ್ ಕಲೆಕ್ಟರ್ | 1 |
| ಬ್ಲಾಕ್ ಎಫಿಡೆಮಿಯಾಲಜಿಸ್ಟ್ | 1 |
ಶೈಕ್ಷಣಿಕ ಅರ್ಹತೆ :
ಅರವಳಿಕೆ ತಜ್ಞರು –
ಎಂ.ಬಿ.ಬಿ.ಎಸ್, ಎಂ.ಡಿ/ ಡಿಎ (ಕಡ್ಡಾಯವಾಗಿ ಇಂಟರ್ನಸಿಪ್ ಪೂರೈಸಿರಬೇಕು. ಕೆ.ಎಂ.ಸಿಯ ನೋಂದಣಿಯನ್ನು ಹೊಂದಿರತಕ್ಕದ್ದು.
ವೈದ್ಯಾಧಿಕಾರಿಗಳು –
ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿ ಕಡ್ಡಾಯವಾಗಿ ಇಂಟರ್ನಶಿಪ್ ಮುಗಿಸಿರಬೇಕು ಮತ್ತು ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ನೊಂದಾಯಿತರಾಗಿ ಸ್ಥಳೀಯ ರಾಜ್ಯ ಭಾಷೆ ತಿಳಿದಿರಬೇಕು.
ಶುಶ್ರೂಷಣಾಧಿಕಾರಿಗಳು –
ಜಿ.ಎನ್.ಎಮ್ ಅಥವಾ ಬಿ.ಎಸ್.ಸಿ ನರ್ಸಿಂಗ್ ಪದವಿ ಹೊಂದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
ಪ್ರಯೋಗಶಾಲಾ ತಂತ್ರಜ್ಞರು –
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 3 ವರ್ಷದ ಡಿಪ್ಲೋಮಾದಲ್ಲಿ ಉತ್ತೀರ್ಣ ಹೊಂದಿರಬೇಕು.
ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ 2 ವರ್ಷಗಳ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಪಡೆದಿರಬೇಕು.
ಪ್ರಯೋಗಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯ ನೋಂದಣಿ ಹೊಂದಿರಬೇಕು.
ಆಡಿಯಾಲಜಿಸ್ಟ್ –
ಬ್ಯಾಚುಲರ್ ಡಿಗ್ರಿ ಇನ್ ಸ್ಫೀಚ್ ಅಂಡ್ ಲ್ಯಾಂಗ್ವೇಜ್ ಪ್ಯಾಥೋಲಾಜಿ.
ಆಪ್ಟೋಮೆಟ್ರಿಸ್ಟ್ –
ಬ್ಯಾಚುಲರ್ ಇನ್ ಆಪ್ಟೋಮೆಟ್ರಿ ಅಥವಾ ಮಾಸ್ಟರ್ ಇನ್ ಆಪ್ಟೋಮೆಟ್ರಿ.
ಸೈಕಾಲಜಿಸ್ಟ್ –
ಮಾಸ್ಟರ್ಸ್ ಡಿಗ್ರಿ ಇನ್ ಚೈಲ್ಡ್ ಪ್ಯಾಥಾಲಜಿ.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು –
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ತರಬೇತಿಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಎಎನ್ಎಮ್ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿ ಆಗಿರಬೇಕು.
ಫಾರ್ಮಸಿ ಅಧಿಕಾರಿಗಳು –
ಬಿ.ಫಾರ್ಮಾ/ ಡಿ.ಫಾರ್ಮಾ
ಆರೋಗ್ಯ ನೀರಿಕ್ಷಣಾಧಿಕಾರಿಗಳು –
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿಯನ್ನು ಪಡೆದಿರಬೇಕು. ಅಥವಾ
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೊಮಾ ಹೊಂದಿರಬೇಕು ಅಥವಾ ಪಿಯುಸಿ (ವಿಜ್ಞಾನ) ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೋಮಾ ಹೊಂದಿರಬೇಕು.
ಫಿಸಿಯೋಥೆರಪಿಸ್ಟ್ –
ಫಿಸಿಯೋಥೆರಪಿಯಲ್ಲಿ ಪದವಿ (ಬಿಪಿಟಿ).
ಎಕ್ಸರೇ ಟೆಕ್ನಿಷಿಯನ್ – 10ನೇ ತರಗತಿ & ಡಿಪ್ಲೊಮಾ ಇನ್ ಎಕ್ಸ-ರೇ/ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಅಥವಾ 10+2 (ಪಿಯುಸಿ) ಸೈನ್ಸ್ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಮತ್ತು ಡಿಪ್ಲೊಮಾ ಇನ್ ಎಕ್ಸ-ರೇ/ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.
ಇನ್ಸೆಕ್ಟ್ ಕಲೆಕ್ಟರ್ –
ದ್ವಿತೀಯ ಪಿಯುಸಿ (ವಿಜ್ಞಾನ).
ಬ್ಲಾಕ್ ಎಫಿಡೆಮಿಯಾಲಜಿಸ್ಟ್ –
ಮೆಡಿಕಲ್ ಗ್ರಾಜುಯೇಟ್ ವಿತ್ ಪೋಸ್ಟ್ ಗ್ರಾಜುಯೇಟ್ ಡಿಗ್ರಿ/ ಡಿಪ್ಲೊಮಾ ಇನ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್/ ಪಬ್ಲಿಕ್ ಹೆಲ್ತ್ ಅಥವಾ ಎಪಿಡೆಮಿಯಾಲಜಿ (ಎಂ.ಡಿ, ಎಂ.ಪಿ.ಹೆಚ್, ಡಿ.ಪಿ.ಹೆಚ್, ಎಂ.ಎ.ಇ) ಅಥವಾ ಆಯುಷ್/ ಡೆಂಟಲ್ ಸೈನ್ಸಸ್ ಗ್ರಾಜುಯೇಟ್ ವಿತ್ ಎಂ.ಪಿ.ಹೆಚ್ (ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್)/ ಎಂ.ಎಸ್ಸಿ (ಎಪಿಡೆಮಿಯಾಲಜಿ).
ಉದ್ಯೋಗ ಮಾಹಿತಿ : ನಗರಸಭೆಗಳಲ್ಲಿ ಹುದ್ದೆಗಳ ನೇಮಕಾತಿ 2026
ವಯೋಮಾನ :
| ಹುದ್ದೆ | ವಯೋಮಾನ |
| ಅರವಳಿಕೆ ತಜ್ಞರು | ಗರಿಷ್ಠ 60 ವರ್ಷ |
| ವೈದ್ಯಾಧಿಕಾರಿಗಳು | ಗರಿಷ್ಠ 60 ವರ್ಷ |
| ಶುಶ್ರೂಷಣಾಧಿಕಾರಿಗಳು | ಗರಿಷ್ಠ 45 ವರ್ಷ |
| ಪ್ರಯೋಗಶಾಲಾ ತಂತ್ರಜ್ಞರು | ಗರಿಷ್ಠ 40 ವರ್ಷ |
| ಆಡಿಯಾಲಜಿಸ್ಟ್ | ಗರಿಷ್ಠ 45 ವರ್ಷ |
| ಆಪ್ಟೋಮೆಟ್ರಿಸ್ಟ್ | ಗರಿಷ್ಠ 45 ವರ್ಷ |
| ಸೈಕಾಲಜಿಸ್ಟ್ | ಗರಿಷ್ಠ 45 ವರ್ಷ |
| ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು | ಗರಿಷ್ಠ 40 ವರ್ಷ |
| ಫಾರ್ಮಸಿ ಅಧಿಕಾರಿಗಳು | ಗರಿಷ್ಠ 40 ವರ್ಷ |
| ಆರೋಗ್ಯ ನೀರಿಕ್ಷಣಾಧಿಕಾರಿಗಳು | ಗರಿಷ್ಠ 40 ವರ್ಷ |
| ಫಿಸಿಯೋಥೆರಪಿಸ್ಟ್ | ಗರಿಷ್ಠ 40 ವರ್ಷ |
| ಎಕ್ಸರೇ ಟೆಕ್ನಿಷಿಯನ್ | ಗರಿಷ್ಠ 45 ವರ್ಷ |
| ಇನ್ಸೆಕ್ಟ್ ಕಲೆಕ್ಟರ್ | ಗರಿಷ್ಠ 40 ವರ್ಷ |
| ಬ್ಲಾಕ್ ಎಫಿಡೆಮಿಯಾಲಜಿಸ್ಟ್ | ಗರಿಷ್ಠ 45 ವರ್ಷ |
ವೇತನ :
| ಹುದ್ದೆ | ವೇತನ |
| ಅರವಳಿಕೆ ತಜ್ಞರು | ರೂ. 1,30,000/- |
| ವೈದ್ಯಾಧಿಕಾರಿಗಳು | ರೂ. 60,000/- |
| ಶುಶ್ರೂಷಣಾಧಿಕಾರಿಗಳು | ರೂ. 14,187/- |
| ಪ್ರಯೋಗಶಾಲಾ ತಂತ್ರಜ್ಞರು | ರೂ. 14,187/- |
| ಆಡಿಯಾಲಜಿಸ್ಟ್ | ರೂ. 25,000/- |
| ಆಪ್ಟೋಮೆಟ್ರಿಸ್ಟ್ | ರೂ. 17,278/- |
| ಸೈಕಾಲಜಿಸ್ಟ್ | ರೂ. 25,000/- |
| ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು | ರೂ. 15,925/- |
| ಫಾರ್ಮಸಿ ಅಧಿಕಾರಿಗಳು | ರೂ. 14,187/- |
| ಆರೋಗ್ಯ ನೀರಿಕ್ಷಣಾಧಿಕಾರಿಗಳು | ರೂ. 15,924/- |
| ಫಿಸಿಯೋಥೆರಪಿಸ್ಟ್ | ರೂ. 25,000/- |
| ಎಕ್ಸರೇ ಟೆಕ್ನಿಷಿಯನ್ | ರೂ. 17,435/- |
| ಇನ್ಸೆಕ್ಟ್ ಕಲೆಕ್ಟರ್ | ರೂ. 15,114/- |
| ಬ್ಲಾಕ್ ಎಫಿಡೆಮಿಯಾಲಜಿಸ್ಟ್ | ರೂ. 30,000/- |
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 07, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 26, 2026
DHFWS Vijayanagara Recruitment 2026 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.