District Child Protection Unit Recruitment 2021 : ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
District Child Protection Unit Recruitment 2021 : Details of Vacancies
ಹುದ್ದೆ :
• ಮ್ಯಾನೇಜರ್/ ಕೋ-ಆರ್ಡಿನೇಟರ್ : 01 ಹುದ್ದೆ
ಶೈಕ್ಷಣಿಕ ಅರ್ಹತೆ : ಎಂ.ಎ/ ಎಂ.ಎಸ್.ಡಬ್ಲ್ಯೂ ಅರ್ಹತೆ ಜೊತೆಗೆ ಮಕ್ಕಳ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
• ಸೋಶಿಯಲ್ ವರ್ಕರ್ : 01 ಹುದ್ದೆ
ಶೈಕ್ಷಣಿಕ ಅರ್ಹತೆ : ಎಂ.ಎ/ ಎಂ.ಎಸ್.ಡಬ್ಲ್ಯೂ ಅರ್ಹತೆ ಜೊತೆಗೆ ಮಕ್ಕಳ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
• ಮಕ್ಕಳ ವೈದ್ಯರು : 01 ಹುದ್ದೆ
ಶೈಕ್ಷಣಿಕ ಅರ್ಹತೆ : ಎಂಬಿಬಿಎಸ್ ಜೊತೆಗೆ 2 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
• ಸ್ಟಾಫ್ ನರ್ಸ್ : 01 ಹುದ್ದೆ
ಶೈಕ್ಷಣಿಕ ಅರ್ಹತೆ : ಎ.ಎನ್.ಎಂ/ಜಿ.ಎನ್.ಎಂ/ಡಿ.ಹೆಚ್.ಐ/ಬಿ.ಎಸ್ಸಿ ನರ್ಸಿಂಗ್ ಜೊತೆಗೆ 2 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
• ಆಯಾ : 06 ಹುದ್ದೆ
ಶೈಕ್ಷಣಿಕ ಅರ್ಹತೆ : 7ನೇ ತರಗತಿ ಪಾಸಾಗಿರಬೇಕು ಜೊತೆಗೆ 1 ವರ್ಷ ಅನುಭವ ಹೊಂದಿರಬೇಕು.
• ಚೌಕಿದಾರ್ : 01 ಹುದ್ದೆ
ಶೈಕ್ಷಣಿಕ ಅರ್ಹತೆ : 7ನೇ ತರಗತಿ ಪಾಸಾಗಿರಬೇಕು ಜೊತೆಗೆ 1 ವರ್ಷ ಅನುಭವ ಹೊಂದಿರಬೇಕು.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 11 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.
ವಯಸ್ಸು & ವೇತನ :
ಹುದ್ದೆ | ವಯಸ್ಸು | ಮಾಸಿಕ ಗೌರವಧನ |
ಮ್ಯಾನೇಜರ್/ ಕೋ-ಆರ್ಡಿನೇಟರ್ | 21-30 ವರ್ಷ | ರೂ. 17,500 |
ಸೋಶಿಯಲ್ ವರ್ಕರ್ | 22-30 ವರ್ಷ | ರೂ. 14,000 |
ಮಕ್ಕಳ ವೈದ್ಯರು | 18-38 ವರ್ಷ | ರೂ. 7,500 |
ಸ್ಟಾಫ್ ನರ್ಸ್ | 21-30 ವರ್ಷ | ರೂ. 9,000 |
ಆಯಾ | 21-30 ವರ್ಷ | ರೂ. 6,000 |
ಚೌಕಿದಾರ್ | 21-30 ವರ್ಷ | ರೂ. 6,000 |
ಉದ್ಯೋಗ ಮಾಹಿತಿ : ಡೇಟಾ ಎಂಟ್ರಿ ಆಪರೇಟರ್, ಡ್ರೈವರ್, ಪಿಯೋನ್ ಹುದ್ದೆಗಳ ನೇಮಕಾತಿ
ಆಯ್ಕೆ ವಿಧಾನ : ಕಂಪ್ಯೂಟರ್ ಜ್ಞಾನದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೌಶಲ್ಯ ಪರೀಕ್ಷೆ ನಡೆಸಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ :
• ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
• ಅಭ್ಯರ್ಥಿಗಳು ಯಾದಗಿರಿ ಜಿಲ್ಲಾ ಪಂಚಾಯ್ತಿಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ಕೊನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಇಲಾಖೆಯ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಕೋಣೆ ಸಂಖ್ಯೆ : ಸಿ-17 ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಯಾದಗಿರಿ
ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ. 100 ಡಿಡಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯಾದಗಿರಿ ರವರ ಹೆಸರಿನಲ್ಲಿ ತಗೆದು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 05, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 20, 2021
District Child Protection Unit Recruitment 2021 : Important Links
ಅಧಿಸೂಚನೆ & ಅರ್ಜಿ ನಮೂನೆ : Click Here
ಸೂಚನೆ : ಈ ಎಲ್ಲಾ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.